ಹೊಂಬೆಳಕು: ರಾಷ್ಟೀಯ ಶಿಕ್ಷಣ ನೀತಿ 2020 ಜಾರಿ ಎಲ್ಲಿಂದ ಶುರುವಾಗಬೇಕು?

Upayuktha
0


"ಪದಗಳ ತೇೂರಣದಲ್ಲಿ ಶಿಕ್ಷಣದ ಸುಧಾರಣೆ ಸಾಧ್ಯವೇ? 2020ರ ರಾಷ್ಟೀಯ ಶಿಕ್ಷಣ ನೀತಿ ಪ್ರಥಮವಾಗಿ ಕನಾ೯ಟಕದಲ್ಲಿ ಅನುಷ್ಠಾನಗೊಂಡಿದೆ ಅನ್ನುವ ಕೀತಿ೯ ನಮ್ಮ ರಾಜ್ಯಕ್ಕೆ ಸಂದಾಯವಾಗಿರುವುದು ನಮಗೇನೊ ಸಂತಸದ ಸುದ್ದಿ. ಈ ಅನುಷ್ಠಾನದ ಸೇೂಲು ಗೆಲುವುಗಳ ಪರಿಚಯವಾಗಬೇಕಾದದ್ದು ಮುಂದಿನ ಶೆೆೈಕ್ಷಣಿಕ ವರುಷಗಳಲ್ಲಿ ಅನ್ನುವುದು ಅಷ್ಟೇ ಸತ್ಯ.


ಹೊಸ ಶಿಕ್ಷಣ ನೀತಿಯ ಮುಂದಿರುವ ಸವಾಲುಗಳೇನು?

ಮೊದಲು ಬುಡಕ್ಕೆ ನೀರು ಎರೆಯಬೇಕೊ? ಅಥವಾ ತಲೆಗೆ ನೀರು ಎರೆಯಾ ಬೇಕೊ? ಅನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ಈಗ ನಮ್ಮ ರಾಜ್ಯದಲ್ಲಿ ಮೊದಲಿಗೆ ತಲೆಗೆ ನೀರು ಎರೆಯುವ ಕೆಲಸ ಆಗಿದೆ. ಅಂದರೆ ಕಾಲೇಜು ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಹೊಸ ಶಿಕ್ಷಣ ನೀತಿ ಹೇಗಿರಬೇಕು ಅನ್ನುವ ಸಂಗೇೂಷ್ಠಿಗಳು ನಡೆದು ಹೊಸ ಶಿಕ್ಷಣ ನೀತಿಗೆ ಸುಂದರ ಪದಗಳ ಉದ್ಘೇೂಷದೊಂದಿಗೆ ವಿಧ್ಯುಕ್ತವಾಗಿ ಚಾಲನೆ ನೀಡಲಾಗಿದೆ. ಆದರೆ ಶಿಕ್ಷಣದ ಮೂಲ ತಳಗಟ್ಟಾದ ಪ್ರಾಥಮಿಕ, ಪ್ರೌಢ ಶಿಕ್ಷಣದ ಬಗ್ಗೆ ಯಾವ ಚಿಂತನ ಮಂಥನಗಳೂ ಸದ್ಯಕ್ಕೆ ನಡೆದ ಹಾಗೆ ಕಾಣುವುದಿಲ್ಲ.


ಪ್ರಾಥಮಿಕ ಶಿಕ್ಷಣದ ಬುಡ ಗಟ್ಟಿ ಮಾಡದೇ ಉನ್ನತ ಶಿಕ್ಷಣಕ್ಕೆ ನೀವೆಷ್ಟು ನೀರೆರೆದರೂ ಅದು ವ್ಯರ್ಥ. ಅದು ಹಿಂದಿನ ಎಲ್ಲಾ ಶೆೈಕ್ಷಣಿಕ ಪ್ರಯೇೂಗಳಲ್ಲಿ ಸ್ವಷ್ಟವಾಗಿ ನಮ್ಮ ಅನುಭವಕ್ಕೆ ಬಂದಿದೆ. ಕೇಂದ್ರ ರಾಜ್ಯ ಸರಕಾರಗಳಿಂದ ಉನ್ನತ ಶಿಕ್ಷಣಕ್ಕೆ ಹರಿದು ಬರುವಷ್ಟು ಚಿಂತನೆಗಳಾಗಲಿ ಸಂಗೇೂಷ್ಠಿಗಳಾಗಲಿ ಹಣಕಾಸಿನ ನೆರವು ಪ್ರಾಥಮಿಕ ಶಿಕ್ಷಣಕ್ಕೆ ಹರಿದು ಬರಲೇ ಇಲ್ಲ. ಎಲ್ಲಿಯ ತನಕ ಇದರ ವಿಪರ್ಯಾಸ ಅಂದರೆ ಉನ್ನತ ಶಿಕ್ಷಣದಲ್ಲಿ ಒಬ್ಬ ಉಪನ್ಯಾಸಕನ ಸಂಶೇೂಧನೆ ಪ್ರಾಜೆಕ್ಟ್‌ಗಳು ಸೆಮಿನಾರು ಮುಂತಾದ ಶೆೈಕ್ಷಣಿಕ ಕಾಯ೯ಗಳಿಗೆ ವಿನಿಯೇೂಗಿಸುವ ಹಣ ನಮ್ಮೂರಿನ ಒಂದು ಸರಕಾರಿ ಶಾಲೆಯ ಮೇಲೆ ವಿನಿಯೇೂಗಿಸಲು ಸರಕಾರ ಹಿಂದೆ ಮುಂದೆ ನೇೂಡುವ ಪರಿಸ್ಥಿತಿ ಇನ್ನೂ ಇದೆ ಅನ್ನುವಾಗ ಶಿಕ್ಷಣದ ಸುಧಾರಣೆ ಬದಲಾವಣೆ ಎಲ್ಲಿಂದ ಪ್ರಾರಂಭಿಸಬೇಕು? ನೀವೇ ಆಲೇೂಚನೆ ಮಾಡಿ.


ನಮ್ಮ ಶಿಕ್ಷಣದ ಬದಲಾವಣೆ ಸುಧಾರಣೆಗಳ ನೀತಿಗಳ ಅನುಷ್ಠಾನ ಹೇಗಿದೆ ಅಂದರೆ-  "ನೀವೊಂದು ಮನೆಯ ಮುಂದೆ ತೆಂಗಿನ ಮರ ನೆಟ್ಟು ಅದರ ಬುಡಕ್ಕೆ ನೀರು ಗೊಬ್ಬರ ಹಾಕದೆ ಅದು ಬುಡ ಉರಿದ ಕಾರಣಕ್ಕೆ ತಾನಾಗಿಯೇ ತೆವಳಿಕೊಂಡು ಕೊರಗಿ ಸೊರಗಿ ಆಕಾಶಕ್ಕೆ ತಲೆ ಮಾಡಿಕೊಂಡು "ನಿಲ್ಲಿ ಮೇೂಡಗಳೆ ಎರಡು ಹನಿಯ ಚೆಲ್ಲಿ" ಅನ್ನುವ ಸ್ಥಿತಿಯಲ್ಲಿ ಮರ ನಿಂತಿರುತ್ತದೆ. ಈ ಹೊತ್ತಿಗೆ ಇದನ್ನು ನೆಟ್ಟ ಯಾಜಮಾನನಿಗೆ ಜ್ಞಾನೇೂದಯವಾಗಲೂ ಪ್ರಾರಂಭವಾಗುತ್ತದೆ".


ಈಗಲೇ ಈ ಮರಕ್ಕೆ ನೀರು ಗೊಬ್ಬರ ಹಾಕಿದರೆ ಕಲ್ಪವೃಕ್ಷವಾಗಬಹುದು. "ಈಗ ನೀವು ಆಲೇೂಚಿಸಿ ಈ ಕಲ್ಪವೃಕ್ಷದಿಂದ ನೀವೇನು ನಿರೀಕ್ಷೆ ಮಾಡಬಹುದು. ಇಂತಹ ಪರಿಸ್ಥಿತಿ ನಮ್ಮ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣಕ್ಕೆ ಬರಬಾರದಲ್ಲವೆ? ಹಾಗಾದರೆ ಶಿಕ್ಷಣ ಎಂಬ ಕಲ್ಪವೃಕ್ಷಕ್ಕೆ ಮೊದಲು ಎಲ್ಲಿ ನೀರು ಉಣ್ಣಿಸಬೇಕು. ನೀವೇ ಹೇಳಿ.


-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top