ಉಕ ಸಿದ್ದಾಪುರದಲ್ಲಿ 'ಬಾಕಾಹು' ತಯಾರಿಯ ಮೊದಲ ತರಬೇತಿ; ನಿರೀಕ್ಷೆ ಮೀರಿದ ಪ್ರತಿಕ್ರಿಯೆ

Upayuktha
0

"ಸಾಮಾನ್ಯವಾಗಿ ನಮ್ಮ ತರಬೇತಿ ಕಾರ್ಯಕ್ರಮಕ್ಕೆ 30 ಮಂದಿ ಬರ್ತಾರೆ ಎಂದು ನಿರೀಕ್ಷಿಸುತ್ತೇವೆ. ಅದರಲ್ಲಿ ಕೆಲವರು ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಾರೆ. ಈ ತರಬೇತಿಗೆ ನಿರೀಕ್ಷೆಗೆ ಮೀರಿ 85 ಮಂದಿ ಬಂದುಬಿಟ್ಟರು", ನೆನೆಯುತ್ತಾರೆ ಸಿದ್ದಾಪುರದ ಕೃಷಿ ಇಲಾಖೆಯ 'ಆತ್ಮ’ದ ಸಹಾಯಕ ನಿರ್ದೇಶಕಿ ಸುಮಾ ಎಸ್.ಎಂ.


ಸಿದ್ದಾಪುರದಲ್ಲಿ ನಿನ್ನೆ ಇವರು ಸಂಘಟಿಸಿದ ಮನೆಮಟ್ಟದ ಬಾಳೆಕಾಯಿ ಹುಡಿ ತಯಾರಿಯ ತರಬೇತಿ ರಾಜ್ಯದಲ್ಲೇ ಇಂಥ ಪ್ರಥಮ ಯತ್ನ.


ಶಿಬಿರದಲ್ಲಿ ಶಿರಸಿ ತೋಟಗಾರಿಕಾ ಕಾಲೇಜಿನ ಸಹಾಯಕ ಪ್ರೊಫೆಸರ್ ಡಾ. ಚಂದನ್, ಕೇವೀಕೆ ಶಿರಸಿಯ ತೋಟಗಾರಿಕಾ ವಿಜ್ಞಾನಿ ಹರೀಶ್ ಡಿ.ಕೆ., ಈಗಾಗಲೇ ’ಬಾಕಾಹು’ ತಯಾರಿಸಿ ಮಾರುಕಟ್ಟೆಗೆ ತೊಡಗಿರುವ ಗಂಗಾ ಹೆಗಡೆ ಹೊಸೂರು ಮತ್ತು ಶಿರಸಿ ಕೇವೀಕೆಯ ಹ ವಿಜ್ಞಾನದ ವಿಜ್ಞಾನಿ ಡಾ. ರವಿ ವೈ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.  


"ಭಾಗವಹಿಸಿದ ಮಹಿಳೆಯರಲ್ಲಿ ಹೆಚ್ಚಿನವರಿಗೂ ಈ ಪರಿಕಲ್ಪನೆ ಇಷ್ಟವಾಗಿದೆ. ಆದರೆ ಅಡ್ಡಿ ಆತಂಕಗಳು ಇವೆ. ಕೆಲವರಲ್ಲಿ ಬಾಳೆ ಬೆಳೆ ಇಲ್ಲ. ಡ್ರೈಯರ್ ಇರುವವರು ಕಡಿಮೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆಗಳನ್ನು ಹೇಗೆ ಪರಿಹರಿಸಬಹುದೆಂದು ನೋಡಬೇಕು" ಎನ್ನುತ್ತಾರೆ ಸುಮ.


"ಗಂಗಾ ಹೆಗಡೆಯವರು ಪ್ರಾತ್ಯಕ್ಷಿಕೆ ಮಾಡಿ ತೋರಿಸಿದ್ದಲ್ಲದೆ ಬಾಳೆಕಾಯಿ ಹುಡಿಯ ಹಲವು ಉತ್ಪನ್ನಗಳನ್ನೂ ಮಾಡಿ ತಂದು ಶಿಬಿರಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಿದ್ದಾರೆ" ಎನ್ನುತ್ತಾರೆ ಕೇವೀಕೆಯ ಹರೀಶ್.


-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು


Key Words: Banana Flour, Banana Powder, Bakahu, KVK, ಬಾಕಾಹು, ಬಾಳೆಕಾಯಿ ಹುಡಿ, ಸಿದ್ಧಾಪುರ, ಬಾಕಾಹು ಆಂದೋಲನ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top