ಕನಾ೯ಟಕ ಸರಕಾರದ ಸಚಿವರಾದವರ ಖಾತೆಗಳ ಬೇಡಿಕೆ ಬೆಟ್ಟದಷ್ಟು ದೊಡ್ಢದಿದೆ ಆದರೆ ಕೆಲವರ ಶೆೈಕ್ಷಣಿಕ ಆರ್ಹತೆ ಹೆಬ್ಬಿಟಿಕ್ಕಿಂತಲೂ ಕೆಳಗಿದೆ. ಇನ್ನೂ ಮುಂದೆ ಆದರೂ ಕನಿಷ್ಠ ವಿದ್ಯಾಹ೯ತೆ ನಿಗದಿ ಪಡಿಸ ಬೇಕಾದ ಅಗತ್ಯತೆ ಇದೆ. ಹಾಗಂತ ಪದವಿ ಆದವರೆಲ್ಲರೂ ಜಾಣರು ಪ್ರಾಮಾಣಿಕರು ಅನ್ನುವ ಅಥ೯ವೂ ಅಲ್ಲ. ಆದರೂ ಕನಿಷ್ಟಪಕ್ಷ ತಮ್ಮ ಇಲಾಖೆಗಳ ಹಿರಿಯ ಅಧಿಕಾರಿಗಳ ಜೊತೆ ಮಾತನಾಡುವಾಗ ಕೆಲವೊಂದು ಸಂವಿಧಾನಕ ಹುದ್ದೆಗಳ ಹಾಗೂತಾಂತ್ರಿಕ ಪದಗಳನ್ನು ಅರ್ಥೈಸಲು ಸುಲಭವಾಗುವುದರ ಜೊತೆಗೆ ಆತ್ಮ ವಿಶ್ವಾಸ ಮೂಡಿ ಬರಲು ಪೂರಕವಾಗಬಹುದು.
ಇದಾಗಲೇ ಕೆಲವು ರಾಜ್ಯಗಳಲ್ಲಿ ಸ್ಥಳೀಯ ಪಂಚಾಯತ್ ಚುನಾವಣೆಗಳಿಗೆ ಸ್ಪಧಿ೯ಸಲು ಹತ್ತನೇ ತರಗತಿಯ ಶಿಕ್ಷಣ ಅನಿವಾರ್ಯ ಅನ್ನುವಾಗ ದೇಶದಲ್ಲಿಯೇ ಶೆೈಕ್ಷಣಿಕವಾಗಿ ಮುಂಚೂಣಿಯಲ್ಲಿರುವ ರಾಜ್ಯ ಕರ್ನಾಟಕ ಅನ್ನುವ ಹೆಗ್ಗಳಿಕೆ ಇರುವಾಗ ನಮ್ಮಲ್ಲಿ ಶಾಸಕರುಗಳ ಸ್ಥಾನಕ್ಕೆ ಕನಿಷ್ಟ ಪಕ್ಷ ಪದವಿ ಶಿಕ್ಷಣದ ಆಹ೯ತೆ ನಿಗದಿ ಪಡಿಸುವದು ಸೂಕ್ತವಲ್ಲವೇ?ಇಂದಿನ ನಮ್ಮಲ್ಲಿನ ಗರಿಷ್ಠ ಸಂಖ್ಯೆಯ ಸಚಿವರು ಎಸ್‌ಎಸ್ಎಲ್‌ಸಿ ತಪ್ಪಿದರೆ ಪಿಯುಸಿ, ಬಿಟ್ಟರೆ ಪದವೀಧರರು /ಸ್ನಾತಕೋತ್ತರ ಪದವಿ ಗಳಿಸಿದ ಸಚಿವರ ಸಂಖ್ಯೆ ಶೇ.20 ರಷ್ಟು ಇಲ್ಲ ಅನ್ನುವುದು ಅವರ ಜಾತಕದ ಪರಿಚಯ ಪತ್ರಿಕೆಗಳಲ್ಲಿ ಓದಿದಾಗ ತಿಳಿದು ಬಂತು. ಮುಂದೆ ಆದರೂ ಇವರೆಲ್ಲರೂ ತಮ್ಮ ಶೆೆೈಕ್ಷಣಿಕ ಆಹ೯ತೆ ಹೆಚ್ಚಿಸಿ ಕೊಳ್ಳಬೇಕು ಅನ್ನುವ ಷರತ್ತನ್ನು ಮುಖ್ಯಮಂತ್ರಿ ಹಾಕಿದ್ದರೆ ಚೆನ್ನಾಗಿರುತ್ತಿತ್ತು.
ಹೆಚ್ಚಿನ ಸಚಿವರಿಗೆ ತಮ್ಮ ಇಲಾಖೆಗಳ ಕಾಯ೯ ವ್ಯಾಪ್ತಿಯೇ ಗೊತ್ತಿಲ್ಲ. ಬರೇ ತಮ್ಮ ಖಾತೆಗೆ ಎಷ್ಟು ಅನುದಾನ ಬರುತ್ತದೆ. ಹಾಗೂ ಇನ್ನಿತರ ಹಣಕಾಸಿನ ಲೆಕ್ಕಾಚಾರ ಗೊತ್ತಿದೆ ಬಿಟ್ಟರೆ ತಮ್ಮ ಇಲಾಖೆಯಲ್ಲಿ ಜನರ ಶ್ರೇಯೇೂಭಿವೃದ್ದಿ ಹೇಗೆ ಮಾಡಬಹುದು, ಉದ್ಯೋಗ ಸೃಷ್ಟಿಮಾಡ ಬಹುದು ಅನ್ನುವ ಸಾಮಾನ್ಯ ತಿಳುವಳಿಕೆ ಇಲ್ಲ ಅನ್ನುವುದು ಅವರು ಖಾತೆಗಳನ್ನು ಹುಡುಕುವ ವಿಧಾನದಲ್ಲಿಯೇ ಸ್ವಷ್ಟವಾಗಿ ಗೇೂಚರಿಸುತ್ತದೆ. ಮತದಾರರು ಸುಶಿಕ್ಷಿತರಾಗ ಬೇಕೆಂದು ಸದಾ ಹೇಳುವ ಬಿಜೆಪಿ ಉನ್ನತ ನಾಯಕರುಗಳು ಕನಿಷ್ಠ ಪಕ್ಷ ತಮ್ಮ ಶಾಸಕರುಗಳು ಕನಿಷ್ಠ ಪದವಿ ಮಟ್ಟಕ್ಕೆ ಸರಿ ಸಮಾನವಾದ ವಿದ್ಯಾಹ೯ತೆ ಪಡೆದಿರ ಬೇಕು ಅನ್ನುವ ನಿಯಮಾವಳಿಯನ್ನು ಶಾಸಕರಿಗೆ ಅನ್ವಯಿಸುವುದು ಇಂದಿನ ಅನಿವಾರ್ಯತೆ ಅನ್ನುವುದು ನನ್ನ ಅಭಿಪ್ರಾಯ ಕೂಡಾ.
-ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಉಡುಪಿ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ