ನಮ್ಮ ಕರಾವಳಿ ಜಿಲ್ಲೆಯಲ್ಲಿ ಭೂತಾರಾಧನೆ ದೆೈವಾರಾಧನೆಗೆ ಒಂದು ವಿಶೇಷ ಸ್ಥಾನಮಾನವಿದೆ. ನಮ್ಮವರು ದೇವರಿಗಿಂತ ದೆೈವ ಭೂತಗಳಿಗೆ ಹೆಚ್ಚು ಹೆದರಿ ಗೌರವ ಮರ್ಯಾದೆ ಕೊಡುತ್ತಾರೆ. ದೇವರಿಗೆ ದೂರದಿಂದ ನಮಸ್ಕರಿಸಿದರೂ ಸಾಕು; ಆದರೆ ದೆೈವರಾಧನೆ ಸನಿಹದಲ್ಲಿಯೆ ಆಗಬೇಕು ಅನ್ನುವುದು ನಮ್ಮೆಲ್ಲರೂ ಇತ್ತೀಚಿಗೆ ನಂಬಿಕೊಂಡು ಬಂದ ದೆೈವ ಪೂಜಾ ಪದ್ದತಿ.
ಆದುದರಿಂದಲೇ ಏನೇೂ ಗುಡ್ಡ ಬೆಟ್ಟದಲ್ಲಿದ್ದು ವಷ೯ಕ್ಕೊಮ್ಮೆ ಪೂಜಿಸಿಕೊಂಡು ಬರುತ್ತಿದ್ದ ದೆೈವದ ಕಲ್ಲು ಗುಡಿಗಳನ್ನು ಮನೆಯ ಹತ್ತಿರದಲ್ಲೇ ತಂದು ಬಹು ಸುಂದರವಾದ ಗುಡಿ ಕಟ್ಟಿ ದಿನ ನಿತ್ಯವೂ ಪೂಜಿಸುವ ವ್ಯವಸ್ಥೆಯನ್ನು ರೂಢಿಸಿ ಕೊಂಡು ಬಂದಿದ್ದೇವೆ. ಪ್ರತಿ ನಿತ್ಯದ ದಶ೯ನ, ವಷ೯ದ ನೇಮ ಹೇೂಮ ತಪ್ಪದೇ ನಡೆಯಲೇಬೇಕು. ಇಲ್ಲವಾದಲ್ಲಿ ಉಪದ್ರ ತಪ್ಪಿದಲ್ಲ..!
ಇದನ್ನೆಲ್ಲಾ ನೇೂಡುವಾಗ ಬಸವರಾಜ ಬೊಮ್ಮಾಯಿಯವರ ನೆನಪು ಕೂಡಾ ಬಂತು ಅದಕ್ಕೂ ಕಾರಣವಿದೆ. ನಮ್ಮ ಮಾಜಿ ಮುಖ್ಯಮಂತ್ರಿಗಳು ಹಾಲಿ ಮುಖ್ಯಮಂತ್ರಿಗಳಿಗೆ ಎಷ್ಟೇ ಹತ್ತಿರವಾಗಿರಲಿ ಆಪ್ತರಾಗಿರಲಿ ಪಕ್ಷದವರೇ ಆಗಿರಲಿ, ಸಂಬಂಧಿಕರೇ ಆಗಿರಲಿ ಅವರಿಗೆ ಯಾವುದೇ ಸಚಿವ ಸ್ಥಾನ ಮಾನ ನೀಡದಿರುವಾಗ ತಾನು ಮುಖ್ಯಮಂತ್ರಿಯಾಗಿ ಯಾವ ಸ್ಥಾನಮಾನ, ಸೌಲಭ್ಯ, ಸೌಕರ್ಯ ಪಡೆಯುತ್ತಿದ್ದೇನೊ ಅದನ್ನೆಲ್ಲವನ್ನೂ ಒಬ್ಬ ಮಾಜಿ ಮುಖ್ಯಮಂತ್ರಿಯಿಂದ ತಾನು ಈ ಹುದ್ದೆ ಸ್ವೀಕರಿಸುವಂತಾಯಿತು ಅನ್ನುವ ಒಂದೇ ಕಾರಣಕ್ಕಾಗಿ ಸರಕಾರದ ಖಚಿ೯ನಲ್ಲಿ ಉಚಿತ ಕೊಡುಗೆಯಾಗಿ ನೀಡುವುದು ಸರಿಯೇ? ಮಾತ್ರವಲ್ಲ ಮುಂದೆ ಕೂಡಾ ಇದೊಂದು ಕೆಟ್ಟ ಸಂಪ್ರಾಯಕ್ಕೆ ಬೊಮ್ಮಾಯಿಯವರೇ ಅಡಿಗಲ್ಲು ಹಾಕಿಕೊಟ್ಟ ಹಾಗೇ ಅಲ್ಲವೆ?
ಇಷ್ಟು ಮಾತ್ರವಲ್ಲ ನಮ್ಮ ಇಂದಿನ ಮುಖ್ಯಮಂತ್ರಿಗಳು ಒಂದು ಹೆಜ್ಜೆ ಮುಂದಿಟ್ಟು ಮುಖ್ಯಮಂತ್ರಿಗಳ ಆಡಳಿತ ದೃಷ್ಟಿಯಿಂದ ಬಳಸುತ್ತಿದ್ದ "ಕಾವೇರಿ" ನಿವಾಸವನ್ನು ದೆೈವಾರಾಧನೆಗಾಗಿ ಮೀಸಲಿಟ್ಟಿರುವುದು ದಿನ ನಿತ್ಯದ ಆರಾಧನೆಗಾಗಿಯೇ ಇರಬೇಕು ಅನ್ನಿಸುವುದಿಲ್ಲವೇ?
ಒಂದಂತೂ ಸತ್ಯ. ಬೊಮ್ಮಾಯಿವರ ಮನೆಯಲ್ಲಿ ನೆಮ್ಮದಿ ಸುಖ ಶಾಂತಿ ನೆಲಸಿ ಉಳಿದ ಒಂದುವರೆ ವರುಷ ಸಮೃದ್ಧಿಯುಕ್ತವಾಗಿ ಕಳೆಯಬೇಕಾದರೆ ಮುಖ್ಯಮಂತ್ರಿಗಳ ಗೃಹ ಕಛೇರಿಯ ಸನಿಹದಲ್ಲಿಯೇ ಒಂದು ದೆೈವ ಗುಡಿ ಇರಬೇಕು; ದಿನ ನಿತ್ಯವೂ ಪೂಜೆ ನಮಸ್ಕಾರವೂ ಸಲ್ಲ ಬೇಕು. ವಾಷಿ೯ಕ ನೇಮ ಹೇೂಮ ಮಾಡಲೇಬೇಕಾದ ಅನಿವಾರ್ಯತೆ ಇಂದಿನ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿವರಿಗೆ ಖಂಡಿತವಾಗಿಯೂ ಇದೆ ಅನ್ನುವುದು ಎಲ್ಲಾ ರಾಜಕೀಯ ಪಂಡಿತರ ಅಭಿಪ್ರಾಯವೂ ಹೌದು. ಆದರೆ ಈ ಎಲ್ಲಾ ಪೂಜೆ, ನೇಮ ಹೇೂಮ ಯಾರ ಖರ್ಚಿನಲ್ಲಿ ನಡೆಯಬೇಕು ಅನ್ನುವುದು ಕರುನಾಡ ಜನರ ಒಡಲಾಳದ ಪ್ರಶ್ನೆ?
-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ