ಬಾಳೆಕಾಯಿ ಹುಡಿಯ ವಿಚಾರ 'ಕಾಡ್ಸ್' ಮುಂದುವರಿಸಲಿದೆ: 'ಕಾಡ್ಸ್' ನಿರ್ದೇಶಕ ಕೆ.ಎಂ. ಮ್ಯಾಥ್ಯೂ

Upayuktha
0


"ಕಳೆದೆರಡು ವರ್ಷಗಳಲ್ಲಿ ಮಾರಲಾಗದೆ, ಬಳಸಲೂ ಆಗದೆ ಅದೆಷ್ಟು ಟನ್ ಬಾಳೆಕಾಯಿ ಹಾಳಾಗಿ ಹೋಗಿದೆ. ಅದನ್ನು ಹೀಗೆ ಪುಡಿ ಮಾಡಲು ಆಗುತ್ತದೆ ಎಂದು ಗೊತ್ತಿದ್ದರೆ ಎಷ್ಟೋ ನಿತ್ಯೋಪಯೋಗಗಳಿಗೆ ಹಚ್ಚಬಹುದಿತ್ತು."


ಈ ಮಾತು ಹೇಳುವ ಕೇರಳದ ಇಡುಕ್ಕಿ ಜಿಲ್ಲೆಯ ಕೃಷಿಕ ಕೆ.ಎಂ.ಮ್ಯಾಥ್ಯೂ ತೊಡುಪುಳದ ಕೃಷಿಕಸ್ನೇಹಿ ಮಾರಾಟ ಸಂಸ್ಥೆ ’ಕಾಡ್ಸ್’ (ಕೇರಳ ಅಗ್ರಿಕಲ್ಚರ್ ಡೆವಲಪ್ ಮೆಂಟ್ ಸೊಸೈಟಿ) ಸಂಸ್ಥೆಯ ನಿರ್ದೇಶಕಲ್ಲೊಬ್ಬರು.


"ನಮ್ಮಲ್ಲಿ ರೋಬಸ್ಟಾ ಬಾಳೆಕಾಯಿಯ ಹುಡಿಯಿಂದ ಮಾಡಿದ ಇಡಿಯಪ್ಪಮ್ (ಶ್ಯಾವಿಗೆ) ಬರೇ ಅಕ್ಕಿ ಹುಡಿಯಿಂದ ಮಾಡುವುದಕ್ಕಿಂತ ತುಂಬ ಟೇಸ್ಟಿ ಆಗಿದೆ. ಮಾತ್ರವಲ್ಲ, ಸಕ್ಕರೆ ಕಾಯಿಲೆಯವರಿಗೂ ಸೂಕ್ತ ಆಹಾರ ಎಂಬ ವೈಶಿಷ್ಟ್ಯ ಇದಕ್ಕಿದೆ ಅಲ್ವೇ?" ಅವರು ಪ್ರಶ್ನಿಸುತ್ತಾರೆ.


"ಬಾಳೆ ಹುಡಿಯ ವಿಷಯವನ್ನು ಮುಂದುವರಿಸಲು ನಾವು ಎಲ್ಲಾ ನಿರ್ದೇಶಕರೂ ನಿರ್ಧರಿಸಿದ್ದೇವೆ. ಈ ಕೆಲಸ ಹೇಗೆ ಮಾಡಬಹುದೆನ್ನುವ ಪ್ಲಾನಿಂಗ್ ಮಾತ್ರ ಮಾಡಲು ಬಾಕಿ ಇದೆ" ಎನ್ನುತ್ತಾರೆ ’ಮಾತಚ್ಚನ್’ ಎಂದೇ ಹೆಸರಾದ ಮ್ಯಾಥ್ಯೂ.

-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು


Key Words: Banana Flour, Banana Powder, Plantain Flour, Bakahu, ಬಾಕಾಹು, ಬಾಳೆ ಕಾಯಿ ಹುಡಿ, ಬಾಕಾಹು ಆಂದೋಲನ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top