"ಬಾಳೆಕಾಯಿ ಬೇಗನೆ ಹಣ್ಣಾಗಿ ಹಾಳಾಗುತ್ತದೆ. ಸಂಸ್ಕರಣೆ ಮಾಡಿ ಹುಡಿಯ ರೂಪದಲ್ಲಿ ಇಟ್ಟುಕೊಂಡರೆ ಬೇಕಾದಾಗ ಬಳಸಬಹುದು ನೋಡಿ. ಈ ಸಂಸ್ಕರಣೆ ಬಲು ಸುಲಭ. ಸಣ್ಣ ಹಿಡುವಳಿದಾರರೂ ಮಾಡಬಹುದು. ನಾವು ಪ್ರಥಮ ಪ್ರಯೋಗದಲ್ಲಿ ಹುಡಿ ತಯಾರಿಸಿ ಪಡ್ಡು ಮತ್ತು ನೀರುಳ್ಳಿ ಬಜೆ ಮಾಡಿದ್ದೇವೆ. ರುಚಿಯೂ ತುಂಬ ಚೆನ್ನಾಗಿದೆ."
ಈ ಮಾತು ಹೇಳುವ ಕಾರ್ಕಳ ತಾಲೂಕಿನ ಕೃಷಿಕ ರೆಂಜಾಳ ಸುಕೀರ್ತಿ ಜೈನ್ ಆಯರಬೆಟ್ಟು. ಇವರಿಗೆ ಬಾಕಾಹು ತಯಾರಿಯ ಬಗ್ಗೆ ತಿಳಿಹೇಳಿ ಪ್ರೇರಣೆ ಕೊಟ್ಟದ್ದು ಬ್ರಹ್ಮಾವರದಲ್ಲಿರುವ ಉಡುಪಿ ಕೃಷಿ ವಿಜ್ಞಾನ ಕೇಂದ್ರ (ಕೇವೀಕೆ). ಅಲ್ಲಿನ ತೋಟಗಾರಿಕಾ ವಿಜ್ಞಾನಿ ಡಾ. ಚೈತನ್ಯ ಹೀಗೆ ಹಲವರನ್ನು ಬಾಕಾಹು ಪ್ರಯೋಗಕ್ಕೇರಿಸಿದ್ದಾರೆ.
"ಇರ್ವತ್ತೂರು- ರೆಂಜಾಳ ಗ್ರಾಮದ ರೈತರನ್ನೊಳಗೊಂಡ ನಮ್ಮ ಒಂದು ವಾಟ್ಸಪ್ ಗುಂಪು ಇದೆ. ಅದರಲ್ಲಿ ವಿಚಾರ ಹಂಚಿಕೊಂಡಿದ್ದೇನೆ. ಏನು- ಹೇಗೆ ಎಂದು ಕೇಳುತ್ತಿದ್ದಾರೆ. ಒಂದು ಕಾರ್ಯಕ್ರಮ ನಡೆಸಿ ಪ್ರಾತ್ಯಕ್ಷಿಕೆ ಕೊಟ್ಟರೆ ಇನ್ನಷ್ಟು ಮಂದಿ ಬಾಕಾಹು ತಯಾರಿಗೆ ಮುಂದೆ ಬಂದಾರು" ಎನ್ನುವುದು ಸುಕೀರ್ತಿ ಅವರ ಅಭಿಪ್ರಾಯ.
-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು
Key Words: Banana Flour, Plantain flour, Banana Powder, Bakahu, ಬಾಕಾಹು, ಬಾಳೆಕಾಯಿ ಹುಡಿ, ಬಾಕಾಹು ಆಂದೋಲನ, ಬಾಕಾಹು ಅಭಿಯಾನ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Super, well done, it will help a lot great
ReplyDelete