|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹುಲಕೋಟಿ ಕೇವೀಕೆಯಲ್ಲಿ ಬಾಕಾಹು ಕುಕ್ಕೀಸ್

ಹುಲಕೋಟಿ ಕೇವೀಕೆಯಲ್ಲಿ ಬಾಕಾಹು ಕುಕ್ಕೀಸ್



"ಬರೇ ಬಾಕಾಹು ಅಥವಾ ಅದರೊಂದಿಗೆ ಅರ್ಧದಷ್ಟು ನವಣೆ ಹುಡಿ ಸೇರಿಸಿದ ಕುಕ್ಕೀಸ್ ತುಂಬ ರುಚಿಕರವಾಗುತ್ತದೆ."


ಇದು ಗದಗ ಜಿಲ್ಲೆಯ ಹುಲಕೋಟಿಯ ಕೆ.ಹೆಚ್. ಪಾಟೀಲ್ ಕೃಷಿ ವಿಜ್ಞಾನ ಕೇಂದ್ರದ  ಗೃಹ ವಿಜ್ಞಾನ ವಿಷಯ ತಜ್ಞೆ ಡಾ. ಸುಧಾ ಮಂಕಣಿ ಅವರ ಅಭಿಪ್ರಾಯ. 


ಮಲೆನಾಡಿನಲ್ಲಿ ’ಬಾಕಾಹು’ (ಬಾಳೆಕಾಯಿ ಹುಡಿ / ಹಿಟ್ಟು) ತುಂಬ ಜನಪ್ರಿಯವಾಗುವುದನ್ನು ಗಮನಿಸಿ ಡಾ. ಸುಧಾ ಕೇವೀಕೆಯಲ್ಲಿ ಇದನ್ನು ತಯಾರಿಸಿ ಕುಕ್ಕೀಸ್ ಮಾಡಿದ್ದರು. ಅರ್ಧದಷ್ಟು ಗೋಧಿ ಹುಡಿ ಮತ್ತು ನವಣೆಯ ಹುಡಿ ಹಾಗೂ ಬೇರೆ ಯಾವುದೇ ಹುಡಿ ಸೇರಿಸದೆ- ಹೀಗೆ ಪ್ರಾಯೋಗಿಕವಾಗಿ ಮೂರು ರೀತಿಯ ಕುಕ್ಕೀಸ್ ಮಾಡಿದ್ದರಲ್ಲಿ ಅವರಿಗೆ ಮೇಲಿನಂತೆ ಫಲಿತಾಂಶ ಬಂದಿದೆ.


"ತುಂಬ ಪೋಷಕ ಸಮೃದ್ಧವಾದ ಬಾಕಾಹುವನ್ನು ಜನಪ್ರಿಯಗೊಳಿಸಲು ಪ್ರತ್ಯೇಕ ಗಂಭೀರವಾದ ಸಾಮುದಾಯಿಕ ಯತ್ನ ಬೇಕು" ಎನ್ನುತ್ತಾರೆ ಡಾ. ಸುಧಾ. ವಸ್ತುಪ್ರದರ್ಶನಗಳಲ್ಲಿ ಮಾರಾಟ. ಜಿಲ್ಲೆ/ ತಾಲೂಕುಗಳ ಮೇಲುಮಧ್ಯಮ ವರ್ಗದ ಗ್ರಾಹಕರು ಬರುವ ಅಂಗಡಿಗಳಲ್ಲಿ ರುಚಿಕರ ಮೌಲ್ಯವರ್ಧಿತ ಉತ್ಪನ್ನದ ಉಚಿತ ಸ್ಯಾಂಪಲ್ ಕೊಟ್ಟು ಪರಿಚಯಿಸುವ ಯತ್ನ- ಇಂಥವನ್ನು ಮಾಡಬಹುದು ಎಂದು ಸಲಹೆ ಮಾಡುತ್ತಾರೆ.


"ಬ್ರೆಡ್, ಕುಕ್ಕೀಸ್ ಮೊದಲಾದ ಬೇಕರಿ ಉತ್ಪನ್ನಗಳು ಧಾರಾಳ ಬಳಕೆಯಾಗುತ್ತಿವೆ. ಜೀವನಶೈಲಿ ಕಾಯಿಲೆಯಿರುವವರಿಗಾಗಿ ಬೇಕರಿ ಉತ್ಪನ್ನಗಳಲ್ಲಿ ಬಾಕಾಹುವಿನ ಬಳಕೆ ಒಂದು ಉತ್ತಮ ಮಾರ್ಗವಾಗಬಹುದು" ಎನ್ನುತ್ತಾರೆ.  


ಬಾಕಾಹುವಿನಲ್ಲಿ ಜಿಗುಟುತನ ಇರುವ ಕಾರಣ ನಿಪ್ಪಟ್ಟು, ಚಕ್ಕುಲಿಗಳಲ್ಲಿ ಅಕ್ಕಿಗೆ ಬದಲಾಗಿ ಬಳಸಬಹುದು. ಸ್ವಲ್ಪ ಹೆಚ್ಚು ದಿನ ತಾಳಿಕೆ ಇರುವ ಖಾರದ ಕುಕ್ಕೀಸ್, ಬೇರೆಬೇರೆ ಥರದ ಬಿಸ್ಕೆಟುಗಳನ್ನು ಮಾಡಬಹುದು" ಎನ್ನುವುದು ಅವರ ಅನಿಸಿಕೆ. 


"ಗದಗ ಜಿಲ್ಲೆಯಲ್ಲಿ ಬಾಳೆ ಕೃಷಿ ಕಡಿಮೆ. ಆದರೂ ಆಸಕ್ತರಿದ್ದರೆ, ಹುಲಕೋಟಿಯ ತಮ್ಮ ಕೆ. ಹೆಚ್. ಪಾಟೀಲ್ ಕೇವೀಕೆಯಲ್ಲಿ ಒಂದು ದಿನದ ಬಾಕಾಹು ಮತ್ತು ಅದರ ತಿಂಡಿಗಳ ತಯಾರಿಯ ತರಬೇತಿ ನಡೆಸಬಹುದು" ಎಂದೂ ಡಾ. ಸುಧಾ ಮಂಕಣಿ ಉತ್ಸಾಹದಿಂದ ಹೇಳುತ್ತಾರೆ. 


ಬಾಕಾಹು ತರಬೇತಿಯ ಆಸಕ್ತರಿದ್ದರೆ ಇವರನ್ನು ಸಂಪರ್ಕಿಸಿ: ಡಾ. ಸುಧಾ ಮಂಕಣಿ

+91 94805 52339


-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 Comments

Post a Comment

Post a Comment (0)

Previous Post Next Post