ಆ.30ರಂದು ಕ್ಲಬ್‌ಹೌಸ್‌ನಲ್ಲಿ ಹಿಂದೂ ಸಮಾವೇಶ

Upayuktha
0

ಡಾ. ಕಲ್ಲಡ್ಕ ಪ್ರಭಾಕರ ಭಟ್‌, ವಜ್ರದೇಹಿ ಮಠದ ಸ್ವಾಮೀಜಿ ಭಾಗಿ




ಮಂಗಳೂರು: ಶ್ರವ್ಯ ಸಾಮಾಜಿಕ ಜಾಲತಾಣವಾಗಿರುವ ಕ್ಲಬ್ ಹೌಸ್‌ನಲ್ಲಿ ಇದೇ ಮೊದಲ ಬಾರಿಗೆ ಹಿಂದೂ ಸಮಾವೇಶ ಆಗಸ್ಟ್ 30ರಂದು ನಡೆಯಲಿದೆ. 'ಹಿಂದುತ್ವ ಕ್ಲಬ್' ಹೆಸರಿನ ಬಳಗದಲ್ಲಿ ಅಂದು ಸಂಜೆ 7:30ಕ್ಕೆ ಸಮಾವೇಶ ಆಯೋಜಿಸಲಾಗಿದೆ.


ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ನೇತಾರ ಡಾ. ಕಲ್ಲಡ್ಕ ಪ್ರಭಾಕರ ಭಟ್ಟರು, ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಸೇರಿದಂತೆ ಹಲವು ಹಿಂದೂ ನಾಯಕರು ಈ ಕ್ಲಬ್‌ ಹೌಸ್ ಸಮಾವೇಶದಲ್ಲಿ ಭಾಗವಹಿಸಲಿದ್ದು, ಮಾತನಾಡಲಿದ್ದಾರೆ.


“ಕ್ಲಬ್ ಹೌಸ್ ನಲ್ಲಿ ಹಿಂದೂ ಸಮಾವೇಶ” ಇಂತದ್ದೊಂದು ಕಾರ್ಯಕ್ರಮಕ್ಕೆ ಅದೆಷ್ಟು ಕಿವಿಗಳು ಸಾಕ್ಷಿಯಾಗಬಲ್ಲವೋ ಗೊತ್ತಿಲ್ಲ. ಆದರೆ ಭಾರೀ ಕೌತುಕವನ್ನಂತೂ ಸೃಷ್ಟಿ ಮಾಡಿದೆ. ಕಲ್ಲಡ್ಕ ಪ್ರಭಾಕರ ಭಟ್ಟರು ಇದೇ ಮೊಟ್ಟ ಮೊದಲ ಬಾರಿಗೆ ಕ್ಲಬ್ ಹೌಸ್‌ನಲ್ಲಿ ನಡೆಯುವ ಹಿಂದೂ ಸಮಾವೇಶಕ್ಕೆ ಸೇರಿಕೊಳ್ಳಲಿದ್ದಾರೆ.


ಕಲ್ಲಡ್ಕ ಪ್ರಭಾಕರ ಭಟ್ಟರು ದಶಕಗಳಿಂದ ಕಂಡ ಹಿಂದೂ ಸಮಾಜದ ಏಳಿಗೆ ಮತ್ತು ಏಳು- ಬೀಳು ಹಾಗೂ ಮುಂದಿನ ಭವಿತವ್ಯದ ಕುರಿತು ದಿಕ್ಸೂಚಿ ಭಾಷಣ ಮಾಡಲಿರುವುದು ಕುತೂಹಲ ಹೆಚ್ಚಿಸಿದೆ.  ಇವರ ಜೊತೆಗೆ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿಗಳ ದಿವ್ಯ ಸಾನ್ನಿಧ್ಯವಿರುತ್ತದೆ. ಈ ಸಮಾವೇಶ ಹೊಸ ಸಂಚಲನ ಮೂಡಿಸುವ ನಿರೀಕ್ಷೆಯಿದೆ.


ಕೊರೊನಾ ಕಾಲದಲ್ಲಿ ಭವತಿಕವಾಗಿ ಸಮಾವೇಶ ನಡೆಸಲಾಗದ ಕಾರಣ ಕ್ಲಬ್‌ಹೌಸ್‌ನಲ್ಲಿ ಈ ಸಮಾವೇಶ ನಡೆಯಲಿದೆ.


ಕಾರ್ಯಕ್ರಮದ ನಿರೂಪಣೆಯನ್ನು ಖ್ಯಾತ ಅಂಕಣಕಾರ ಪ್ರಖರ ವಾಗ್ಮಿ ರೋಹಿತ್ ಚಕ್ರತೀರ್ಥ ನೆಡೆಸಿಕೊಡಲಿದ್ದಾರೆ. ಜೊತೆಗೆ ಪ್ರಖ್ಯಾತ ಗಾಯಕಿ ರಮ್ಯ ವಸಿಷ್ಟ ಅವರಿಂದ ಪ್ರಾರ್ಥನೆ ಮತ್ತು ವಂದೇ ಮಾತರಂ ಗಾಯನ ನಡೆಯಲಿದೆ.


ಇದೇ ಆಗಸ್ಟ್ 30 ರಂದು ರಾತ್ರಿ 7.30 ಕ್ಕೆ ಕ್ಲಬ್ ಹೌಸ್ ನ ಹಿಂದುತ್ವ ಕ್ಲಬ್ ನಲ್ಲಿ (ಪೇಜ್ ನಲ್ಲಿ) “ಹಿಂದೂ ಸಮಾವೇಶ”ವನ್ನು ಟೀಮ್ ಹಿಂದುತ್ವ ಅವರು ಆಯೋಜಿಸಿದ್ದಾರೆ.


ಸಮಾವೇಶಕ್ಕೆ ಸೇರಲು ಕೆಳಗಿನ ಲಿಂಕ್ ಒತ್ತಿ https://www.clubhouse.com/event/xXgnQ7Xb


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top