ಗಝಲ್: ಸ್ವಾತಂತ್ರ್ಯದ ಶುಭಕಾಮನೆ

Upayuktha
0




ನೆಲದ ಋಣವ ನೆನೆದು ಧ್ವಜಕೆ

ನಮಿಸುತ ನಡೆಯುವೆನು ತಾಯಿ.

ಛಲದ ಬಲವ ಪಡೆದು ವಿಜಯ

ಮಾಲೆಯ ಪಡೆಯುವೆನು ತಾಯಿ.


ಹೊತ್ತು ಊಟವ ಬಿಟ್ಟು ಮಗನ

ಏಳಿಗೆಗೆ ತಪವ ಗೈದರು ತಂದೆ.

ತುತ್ತು ನೀಡುತ ಸಾಧನೆಯ ಹಾದಿಯ

ತೋರಿದರು ದುಡಿಯುವೆನು ತಾಯಿ.


ಸೋಲೇ ಗೆಲುವಿನ ಸೋಪಾನ ಎಂಬುದ

ಅರಿತು ಮುಂದಕೆ ಸಾಗಿದೆಯೇನು.

ಮೇಲೇರಿ ನಿಲ್ಲುತ ಸಮ್ಮಾನ ಗಳಿಸಿ

ಜೈಕಾರ ನುಡಿಯುವೆನು ತಾಯಿ.


ಎತ್ತರದ ಗಿರಿಗಳಲಿ ಕಾಯುವೆ

ಬಂದೂಕು ಹಿಡಿದು ಪ್ರಾಣವನೆ

ಪಣವಿಟ್ಟು.

ಉತ್ತರದ ಕಡೆಗೆ ಗಮನವ ನೀಡಿ

ವೈರಿಗಳ ತಡೆಯುವೆನು ತಾಯಿ.


ದೇಶದ ಜನರ ಮನದಲಿ ನೆಲೆಸಿ

ಆದರ್ಶ ಎನಿಸಿದೆಯಲ್ಲ ದೇವಿ.

ದ್ವೇಷದ ಭಾವವ ಮರೆಸಿ

ಭಾವೈಕ್ಯದ ಮುಕುಟ ಮುಡಿಯುವೆನು ತಾಯಿ.


-ಗಾಯತ್ರಿ ಪಳ್ಳತ್ತಡ್ಕ



Tags

Post a Comment

0 Comments
Post a Comment (0)
To Top