ಅತಿಥಿಗಳಿಗೆ ಬಾಕಾಹುಪ್ರಧಾನ ಔತಣ
ಚಂದ್ರಹಾರ, ಹೋಳಿಗೆ, ಬರ್ಫಿ, ಜುಣಕ ಕೇಕ್.
ನಿನ್ನೆ ದಾವಣಗೆರೆಯ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರಕ್ಕೆ ಗಣ್ಯ ಅತಿಥಿಗಳ ತಂಡ ಬಂದಿತ್ತು. ಬಂದವರು ಐಸಿಎಆರ್ ಅಗ್ರಿಕಲ್ಚರಲ್ ಟೆಕ್ನಾಲಜಿ ಅಪ್ಲಿಕೇಶನ್ ರೀಸರ್ಚ್ ಸೆಂಟರ್ (ಅಟಾರಿ) ನಿರ್ದೇಶಕ ಡಾ. ವೆಂಕಟಸುಬ್ರಹ್ಮಣಿಯನ್. ಅವರಿಗೆ ಉಣಬಡಿಸಿದ ಔತಣದಲ್ಲಿದ್ದ ಬಾಕಾಹುವಿನ ಖಾದ್ಯಗಳೇ ಆರಂಭದಲ್ಲಿ ಪ್ರಸ್ತಾಪಿಸಿದವು. ಎಲ್ಲವೂ ಬಾಕಾಹು (ಬಾಳೆಕಾಯಿ ಹುಡಿ) ಯಿಂದ ತಯಾರಿಸಿದವು. ಈ ಬಾಕಾಹು ಪ್ರಧಾನ ಊಟವನ್ನು ಡಾ. ವೆಂಕಟಸುಬ್ರಹ್ಮಣಿಯನ್ ಮೆಚ್ಚಿಕೊಂಡರಂತೆ.
ಈ ಪಾಕ ತಯಾರು ಮಾಡಿದ್ದು ಸ್ಥಳೀಯ ಪ್ರಗತಿಪರ ಕೃಷಿ ಮಹಿಳೆ ಸರೋಜಮ್ಮ ನಿಟ್ಟೂರು. ಮತ್ತೊಮ್ಮೆ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಹೃದಯದ ಮೂಲಕ ಕೆಲಸ ಮಾಡಿ ಮೇಲ್ಪಂಕ್ತಿ ಹಾಕಿದೆ. ಕೇಂದ್ರದ ಮುಖ್ಯಸ್ಥ ಡಾ. ಟಿ.ಎನ್. ದೇವರಾಜ್ ಮುಂದಾಲೋಚನೆ ಶ್ಲಾಘನೀಯ.
ಕೃಷಿಕುಟುಂಬಗಳ ನೂತನ ಪೌಷ್ಟಿಕ ಉತ್ಪನ್ನ ಬಾಕಾಹುವಿಗೆ ಸಾಮಾಜಿಕ ಮನ್ನಣೆ ತರುವುದು ಹೇಗೆಂಬುದಕ್ಕೆ ಇದೊಂದು ಉತ್ತಮ ಮಾದರಿ. ನಮ್ಮ ಸಭೆ, ಹಬ್ಬ ಹರಿದಿನಗಳಲ್ಲಿ ಬಾಕಾಹು ಪಾಕ ಮಾಡಿ ಬಡಿಸಿ ಅತಿಥಿಗಳಿಗದರ ಬಗ್ಗೆ ವಿವರ ನೀಡಿಕೆ. ಸಾಧ್ಯವಿದ್ದರೆ ಅವರು ಕಾರು ಏರುವಾಗ ಅರ್ಧ ಕಿಲೋದ ಬಾಕಾಹು ಪ್ಯಾಕೆಟ್ ಉಡುಗೊರೆ.
-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು
Key Words: Banana Flour, Banana Powder, Bakahu, ಬಾಕಾಹು, ಬಾಳೆಕಾಯಿ ಹುಡಿ, ದಾವಣೆಗೆರೆ ಕೆವಿಕೆ, ಬಾಕಾಹು ಆಂದೋಲನ,
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ