ಕೋವಿಡ್‌ ಲಸಿಕೆ: ಬುಧವಾರ 50 ಸಾವಿರಕ್ಕೂ ಹೆಚ್ಚು ನೀಡುವ ಗುರಿ

Upayuktha
0



ಮಂಗಳೂರು: ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ನಗರ ಆರೋಗ್ಯ ಕೇಂದ್ರಗಳು ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಇದೇ ಆ. 18ರ ಬುಧವಾರ ಕೋವಿಡ್ ಲಸಿಕಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು,  50 ಸಾವಿರಕ್ಕಿಂತ ಹೆಚ್ಚಿನ ವ್ಯಾಕ್ಸಿನ್ ನೀಡುವ ಗುರಿಯಿದೆ.


ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಎರಡನೇ ಡೋಸ್ ಹಾಗೂ ಕದ್ರಿ ಶಿವಭಾಗ್ ಇ.ಎಸ್.ಐ ಹಾಗೂ ಬೈಕಂಪಾಡಿಯ ಇ.ಎಸ್.ಐ ಆಸ್ಪತ್ರೆಯಲ್ಲಿ ಕೋವಿಶೀಲ್ಡ್ ಎರಡನೇ ಡೋಸ್ ಮತ್ತು ಎನ್ ಆರ್ ಐ ಫಲಾನುಭವಿಗಳಿಗೆ ಕೋವಿಶೀಲ್ಡ್ ಎರಡನೇ ಡೋಸ್ ಲಸಿಕೆಯು ಜಿಲ್ಲಾ ವೆಸ್ಲಾಕ್ ಆಸ್ಪತ್ರೆಯಲ್ಲಿ ಲಭ್ಯವಿದೆ.


ಮಂಗಳೂರು ತಾಲೂಕಿನ ಈ ಕೆಳಕಂಡ ಎಲ್ಲಾ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಡೆಯಲಿರುವ ಕೋವಿಡ್ ಲಸಿಕಾ ಶಿಬಿರದಲ್ಲಿ ಮೊದಲ ಮತ್ತು ಎರಡನೇ ಡೋಸ್‌ ನೀಡಲಾಗುತ್ತಿದೆ.


ವಿವರ ಇಂತಿದೆ:


1. ಕುದುಲ್ ರಂಗರಾವ್ ಹಾಲ್, ಲೇಡಿಹಿಲ್, ಉರ್ವ.


2. ಸರಕಾರಿ ಪ್ರಾಥಮಿಕ ಶಾಲೆ ಮಣ್ಣಗುಡ್ಡೆ.


3. ನಾರಾಯಣ ಗುರು ಹಾಲ್, ಚಿಲಿಂಬಿ.


4. ಶಿವಶಕ್ತಿ ಕ್ಲಬ್ ಹಾಲ್, ಕುದ್ರೋಳಿ.


5. ಅಂಬಾಭವಾನಿ ಹಾಲ್, ಜಲ್ಲಿಗುಡ್ಡೆ.


6. ಗಣೇಶೋತ್ಸವ ಹಾಲ್, ಪಂಪವೆಲ್.


7. ಆನಂದ ರೆಸಿಡೆನ್ಸಿ ಹಾಲ್ ಮರೋಲಿ.


8. ಸೂಟರ್‌ಪೇಟೆ.


9. ಶಾರದೋತ್ಸವ ಟ್ರಸ್ಟ್ ಹಾಲ್, ವಿದ್ಯಾನಗರ, ಕೂಳೂರು.


10. ಸರಕಾರಿ ಪ್ರಾಥಮಿಕ ಶಾಲೆ ಕಾವೂರು.


II. ಕೃಷ್ಣ ನಗರ ಅಂಗನವಾಡಿ, ಕೂಳೂರು.


12. ಸರಕಾರಿ ಪ್ರಾಥಮಿಕ ಶಾಲೆ ಪೆರ್ಮುದೆ.


13. ಸರಕಾರಿ ಪ್ರಾಥಮಿಕ ಶಾಲೆ ಬೈಕಂಪಾಡಿ.

 

14.ಲಕ್ಷ್ಮೀ ನಾರಾಯಣ ಹಾಲ್, ವಾರ್ಡ್ ನಂ.56.


15. ಪಾಂಡೇಶ್ವರ ವಾಡ್. ನಂ.46.


16. ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಜೆಪ್ಪು (ಕೋವ್ಯಾಕ್ಸಿನ್ -150) 


17. ಸರಕಾರಿ ಪ್ರಾಥಮಿಕ ಶಾಲೆ ಸುರತ್ಕಲ್, ವಾರ್ಡ್ ನಂ.4.


18,ಎಂ.ಜಿ.ಪಂ ಹಾಲ್, ವಾರ್ಡ್ ನಂ.5, ಸುರತ್ಕಲ್.

 

19. ಅಂಬೇಡ್ಕರ್ ಭವನ, ವಾರ್ಡ್ ನಂ.6, ಸುರತ್ಕಲ್.


20. ವೆಂಕಟರಮಣ ಹಾಲ್, ಡೊಂಗರಕೆರೆ.


 21.ಆದಿಮಾಯೆ ಹಾಲ್, ಮೋರ್ಗನ್‌ಗೇಟ್. 


22.ಬಹಶ್ರೀ ನಾರಯಣ ಗುರು ಮಂದಿರ, ಗುರುನಗರ ಹಾಗೂ


23. ಕುವೆಂಪು ಹಿರಿಯ ಪ್ರಾಥಮಿಕ ಶಾಲೆ, ನೆಲ್ಯಪದವು. 


ಸರಕಾರಿ ವಲಯವಲ್ಲದೇ ನಿಗದಿಪಡಿಸಿದ ದರಗಳಂತೆ ಖಾಸಗಿ ಆಸ್ಪತ್ರೆಗಳಲ್ಲಿಯೂ Covaxin, Covishield, Sputnik ಲಸಿಕೆಯನ್ನು ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
To Top