ಜೇನು ಕೃಷಿ ಸಾಧಕ ರಾಮಚಂದ್ರ ಬಾರಡ್ಕ ಅವರಿಗೆ ಸನ್ಮಾನ

Upayuktha
0

 



ಬದಿಯಡ್ಕ: ಜೇನು ವ್ಯವಸಾಯ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡುತ್ತಿರುವ ರಾಮಚಂದ್ರ ಬಾರಡ್ಕ ಅವರನ್ನು ಕೃಷಿಕರ ದಿನದ ಸಂದರ್ಭದಲ್ಲಿ ಇಂದು ಸನ್ಮಾನಿಸಲಾಯಿತು.


ಪೆರಡಾಲದ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು, ಅಧ್ಯಾಪಕ ವೃಂದ ಹಾಗೂ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಜತೆಗೂಡಿ ರಾಮಚಂದ್ರ ಬಾರಡ್ಕ ಅವರ ಮನೆಗೆ ತೆರಳಿ ಫಲಪುಷ್ಪ ಮತ್ತು ಶಾಲು ನೀಡಿ ಗೌರವಿಸಿದರು.


ರಾಮಚಂದ್ರ ಬಾರಡ್ಕ ಅವರು ಹಲವು ವರ್ಷಗಳಿಂದ ಜೇನು ವ್ಯವಸಾಯ ನಡೆಸುತ್ತಿದ್ದು, ವಿಶೇಷವಾಗಿ ಮೊಜಂಟಿ ಜೇನು ಸಾಕಣೆಯಲ್ಲಿ ಅಪಾರ ಅನುಭವ ಗಳಿಸಿದ್ದಾರೆ. ಜೇನುಸಾಕಣೆ ವಿಷಯದಲ್ಲಿ ಹಲವು ಮಂದಿ ಆಸಕ್ತರಿಗೆ ತರಬೇತಿಯನ್ನೂ ನೀಡುತ್ತಿದ್ದಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top