ಆ.25: ಅಂಬಿಕಾ ಪದವಿ ಕಾಲೇಜಿನಿಂದ ಪಿಯು ವಿದ್ಯಾರ್ಥಿಗಳಿಗೆ ಸಿಇಟಿ ಮಾರ್ಗದರ್ಶನ

Upayuktha
0

ಮಾನಸಿಕ ಒತ್ತಡ ನಿರ್ವಹಣೆಯ ಬಗೆಗೆ ತಜ್ಞರಿಂದ ಮಾಹಿತಿ ಕಾರ್ಯಕ್ರಮ




ಪುತ್ತೂರು: ಇಲ್ಲಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿ ಮಹಾವಿದ್ಯಾಲಯದ ಐಕ್ಯುಎಸಿ ಘಟಕ, ತರಬೇತಿ ಮತ್ತು ಉದ್ಯೋಗ ಘಟಕ, ಪತ್ರಿಕೋದ್ಯಮ, ತತ್ತ್ವಶಾಸ್ತ್ರ ಹಾಗೂ ಮನಃಶಾಸ್ತ್ರ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ರಾಜ್ಯದ ದ್ವಿತೀಯ ಪಿಯು ವಿದ್ಯಾರ್ಥಿಗಳಿಗಾಗಿ ‘ಸಿಇಟಿ ಪರೀಕ್ಷೆ ಹಾಗೂ ಮಾನಸಿಕ ಒತ್ತಡ’ ಎಂಬ ವಿಷಯದಡಿ ಒತ್ತಡ ನಿರ್ವಹಣೆ ಹೇಗೆ?, ಮಾಡೇಕಾದ್ದೇನು? ಇತ್ಯಾದಿ ಪ್ರಶ್ನೆಗಳಿಗೆ ತಜ್ಞರಿಂದ ಮಾಹಿತಿ ಕಾರ್ಯಕ್ರಮ ಆಗಸ್ಟ್ 25ರಂದು ಸಂಜೆ 6 ಗಂಟೆಗೆ ಝೂಮ್ ವೇದಿಕೆಯಲ್ಲಿ ನಡೆಯಲಿದೆ. ಆಗಸ್ಟ್ 28 ಹಾಗೂ 29ರಂದು ಸಿಇಟಿ ಪರೀಕ್ಷೆ ನಡೆಯಲಿರುವುದರಿಂದ ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಸದೃಢಗೊಳಿಸುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.


ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಅಂಬಿಕಾ ಪದವಿಪೂರ್ವ ವಿದ್ಯಾಲಯದ ಸಿಇಟಿ, ನೀಟ್ ಹಾಗೂ ಜೆಇಇ ಸಂಯೋಜಕ ಕೆ.ಕಿಶೋರ್ ಉಪಸ್ಥಿತರಿರುವರು.


ಕಾರ್ಯಕ್ರಮದಲ್ಲಿ ‘ಭಗವದ್ಗೀತೆಯ ಆಧಾರದಲ್ಲಿ ಮನೋನಿರ್ವಹಣೆ’ ಎಂಬ ವಿಷಯದ ಬಗೆಗೆ ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ಮಾಹಿತಿ ನೀಡಿದರೆ, ‘ಮನಃಶಾಸ್ತ್ರೀಯ ನೆಲೆಯಲ್ಲಿ ಮನೋನಿರ್ವಹಣೆ’ ಎಂಬ ವಿಚಾರವಾಗಿ ಅಂಬಿಕಾ ಪದವಿ ಮಹಾವಿದ್ಯಾಲಯದ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಚಂದ್ರಕಾಂತ ಗೋರೆ ಮಾತನಾಡಲಿದ್ದಾರೆ. ಹಾಗೆಯೇ ‘ಆಹಾರ ಸೇವನೆ ಮತ್ತು ಮಾನಸಿಕ ದೃಢತೆ’ ಎಂಬ ವಿಷಯವಾಗಿ ಬೆಂಗಳೂರಿನಲ್ಲಿ ಆಯುರ್ವೇದ ವೈದ್ಯೆಯಾಗಿರುವ, ನ್ಯೂಟ್ರಿಷನಿಸ್ಟ್ ಹಾಗೂ ಕೌನ್ಸೆಲರ್ ಆಗಿಯೂ ಕಾರ್ಯ ನಿರ್ವಹಿಸುತ್ತಿರುವ ಡಾ.ಹರ್ಷಿತಾ ಎಚ್ ಮಾರ್ಗದರ್ಶನ ನೀಡಲಿದ್ದಾರೆ.


ಈ ಕಾರ್ಯಕ್ರಮದಲ್ಲಿ ರಾಜ್ಯದ ಯಾವುದೇ ಪಿಯು ವಿದ್ಯಾರ್ಥಿಗಳು ಭಾಗವಹಿಸಿ ಪ್ರಯೋಜನ ಪಡೆಯಬಹುದಾಗಿದೆ. ಭಾಗವಹಿಸಲು ಇಚ್ಚಿಸುವವರು ಒದಗಿಸಲಾಗಿರುವ ಲಿಂಕ್ ಮೂಲಕ ಹತ್ತು ನಿಮಿಷ ಮುಂಚಿತವಾಗಿ ಹಾಜರಿರುವಂತೆ ಕೋರಲಾಗಿದೆ. ಝೂಮ್ ಮೀಟಿಂಗ್ ಐಡಿ: 9884720154 ಪಾಸ್‍ವರ್ಡ್: 6WPUJN ಹೆಚ್ಚಿನ ಮಾಹಿತಿಗಾಗಿ: 9449102082


ಸಿಇಟಿ ಪರೀಕ್ಷೆ ಅನೇಕ ಮಕ್ಕಳಲ್ಲಿ ಬಹಳಷ್ಟು ಒತ್ತಡ ತರಿಸುತ್ತದೆ. ಇಂತಹ ಒತ್ತಡಗಳನ್ನು ನಿರ್ವಹಣೆ ಮಾಡುವ ನೆಲೆಯಲ್ಲಿ ನಾವು ಭಗವದ್ಗೀತೆಯಲ್ಲಿ ಉಕ್ತವಾದ ಸಂಗತಿಗಳನ್ನು ತಿಳಿಯಬೇಕು. ಅದನ್ನು ತಿಳಿಯುವುದರಿಂದ ನಮ್ಮ ಮನಸ್ಸನ್ನು ದೃಢಗೊಳಿಸುವುದಕ್ಕೆ ಸಾಧ್ಯ. ಹಾಗೆಯೇ ಮನಃಶಾಸ್ತ್ರದ ನೆಲೆಯಿಂದ ನಮ್ಮನ್ನು ನಾವು ಪರೀಕ್ಷೆಗೆ ತಯಾರು ಮಾಡಿಕೊಳ್ಳಬೇಕು. ಜತೆಗೆ ನಾವು ತಿನ್ನುವ ಆಹಾರವೂ ನಮ್ಮ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುವುದರಿಂದ ಪರೀಕ್ಷೆಗೆ ಸಿದ್ಧರಾಗುವವರು ಯಾವ ಆಹಾರ ಸೇವಿಸಿದರೆ ಉತ್ತಮ ಎಂಬ ಮಾರ್ಗದರ್ಶನವನ್ನು ಈ ಕಾರ್ಯಕ್ರಮದಲ್ಲಿ ತಿಳಿಸಿಕೊಡಲಾಗುತ್ತದೆ. ವಿದ್ಯಾರ್ಥಿಗಳ ಅನುಮಾನ, ಭಯ, ಒತ್ತಡಗಳ ನಿವಾರಣೆಯ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಪರಿಣಾಮಕಾರಿ ಎನಿಸಲಿದೆ. ರಾಜ್ಯದ ಯಾವುದೇ ವಿದ್ಯಾರ್ಥಿ ಈ ಕಾರ್ಯಕ್ರಮದಲ್ಲಿ ಮುಕ್ತವಾಗಿ ಭಾಗವಹಿಸಬಹುದು.

-ರಾಜಶ್ರೀ ಎಸ್ ನಟ್ಟೋಜ, ಕೋಶಾಧಿಕಾರಿಗಳು, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top