ಏಕ ರಾಷ್ಟ್ರ- ಏಕ ಸಂವಿಧಾನ; ಏಕ ರಾಷ್ಟ್ರ- ಏಕ ತೆರಿಗೆ, ಏಕ ರಾಷ್ಟ್ರ- ಏಕ ಪಡಿತರ ಚೀಟಿ. ಹೀಗೆ ಎಲ್ಲವೂ ಏಕತೆಯ ರೂಪದಲ್ಲಿ ರಾಷ್ಟ್ರೀಯತೆಯನ್ನು ಗಟ್ಟಿಗೊಳಿಸುವ ಸಂದರ್ಭದಲ್ಲಿ ಸಂವಿಧಾನ ಒಪ್ಪಿಕೊಂಡ ದಿನದಿಂದಲೇ ಕೇಳಿ ಬರುತ್ತಿದ್ದ ಪ್ರಮುಖ ವಿಚಾರವೆಂದರೆ "ಸಮಾನ ನಾಗರಿಕ ಸಂಹಿತೆ. ಭಾರತ ಸಂವಿಧಾನದ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಕೂಡಾ ಬಲವಾಗಿ ಪ್ರತಿಪಾದಿಸಿದ ವಿಚಾರವೆಂದರೆ ಸಮಾನ ನಾಗರಿಕ ಸಂಹಿತೆ. ಜಾತ್ಯತೀತವಾದಿಗಳೆಂಬ ಹಣೆಪಟ್ಟಿ ಕಟ್ಟಿಕೊಂಡವರು ಇದನ್ನು ವಿರೇೂಧಿಸುತ್ತಾ ಬಂದರು.
ಅಂಬೇಡ್ಕರಂತಹ ದೂರದಶಿ೯ತ್ವ ಉಳ್ಳ ಕಾನೂನು ತಜ್ಞರು ರಾಷ್ಟ್ರೀಯ ಏಕತಾ ಹಿತ ದೃಷ್ಟಿಯಿಂದ" ಕಾಮನ್ ಸೀವಿಲ್ ಕೇೂಡ್" ಇಂದಿನ ಅಗತ್ಯತೆ ಎಂದು ಬಲವಾಗಿ ಪ್ರತಿಪಾದಿಸಿ ಕೊನೆಗೂ ಭಾರತ ಸಂವಿಧಾನದ ಭಾಗ 1V ಅನುಚ್ಛೇದ 44ರ ರಾಜ್ಯ ನಿದೇ೯ಶಿತ ತತ್ವಗಳ ಭಾಗದಲ್ಲಿ ಸಮಾನ ನಾಗರಿಕ ಸಂಹಿತೆ ಸೇರಿಸಲು ಸಫಲರಾದರು.
ಸಂವಿಧಾನದಲ್ಲಿ ಸೇರಿಸಿದ ಮಾತ್ರಕ್ಕೆ ಅದು ಅನುಷ್ಠಾನ ವಾಗುವುದಿಲ್ಲ. ಸರಕಾರ ಅದನ್ನು ಪರಿಗಣಿಸಿ ಕಾಯ೯ ರೂಪಕ್ಕೆ ತರಬೇಕು. ಸಂವಿಧಾನದ ರಾಜ್ಯ ನಿರ್ದೇಶಿತ ಭಾಗ ಕೇವಲ ಸರಕಾರಕ್ಕೆ ಸಲಹೆ ನಿರ್ದೇಶನ ಕೊಡುತ್ತದೆ ಬಿಟ್ಟರೆ ಮಾಡಲೇ ಬೇಕೆನ್ನುವ ಅಧಿಕಾರ ಯುಕ್ತವಾದ ಭಾಗ ಅದಾಗಿರಲಿಲ್ಲ. ಹಾಗಾಗಿ ನೆಹರೂ ಸರಕಾರದಿಂದ ಹಿಡಿದು ಇಂದಿನ ತನಕ ಇದು ಬರೇ ವೋಟ್ ಬ್ಯಾಂಕಿನ ವಿಷಯ ಎಂಬಂತೆ ಚಚೆ೯ಗೆ ಗ್ರಾಸವಾಗುತ್ತಾ ಬಂತು ಬಿಟ್ಟರೆ ಅನುಷ್ಠಾನದ ಕಡೆಗೆ ಯಾರು ಕೂಡಾ ಇಚ್ಛಾಶಕ್ತಿ ಮೆರೆಯಲೇ ಇಲ್ಲ. ಮೊದಲ ಕಾನೂನು ಸಚಿವರಾಗಿದ್ದ ಬಿ.ಆರ್. ಅಂಬೇಡ್ಕರ್ ಸಂಸತ್ತಿನಲ್ಲಿ ಬಲವಾಗಿ ಪ್ರತಿಪಾದಿಸಿದರೂ ಕೂಡಾ ಇದನ್ನು ಒಪ್ಪಲೇ ಇಲ್ಲ ನೆಹರು ಸರ್ಕಾರ. ಕೊನೆಗೂ ಸಂದರ್ಭದಲ್ಲಿ ಅಂಬೇಡ್ಕರ್ ರಾಜೀನಾಮೆ ಕೊಟ್ಟು ಹೊರಗೆ ಬರಬೇಕಾದ ಪರಿಸ್ಥಿತಿ.
ಹಲವು ಬಾರಿ ನ್ಯಾಯಾಂಗ ಕುಾಡಾ ಸಮಾನ ನಾಗರಿಕ ಸಂಹಿತೆ ಅನುಷ್ಠಾನದ ಕಡೆಗೆ ಒಲವು ತೇೂರ ಬಹುದು ಎಂಬ ಹಸಿರು ನಿಶಾನೆ ತೇೂರಿಸಿದಾಗಲೂ ಕೂಡಾ ಅಲ್ಪ ಸಂಖ್ಯಾಗತರ ಮತಗಳು ಕೆೈ ಬಿಟ್ಟು ಹೇೂಗುತ್ತದೊ ಎಂಬ ಹೆದರಿಕೆಯಲ್ಲಿಯೇ ಚುನಾವಣೆ ಎದುರಿಸಿಕೊಂಡು ಬಂದವು. ಅದೇ ಬಿಜೆಪಿ ಮಾತ್ರ ಪ್ರತಿ ಚುನಾವಣೆಯ ಪ್ರಣಾಳಿಕೆಯಲ್ಲಿ ತಪ್ಪದೇ ಇದನ್ನು ನಮೂದಿಸಿಕೊಂಡು ಬಂತು. ಆದರೆ ಅವರು ಕೂಡಾ ಹೆಚ್ಚೇನು ಬಹುಮತ ಪಡೆಯದ ಸಂದರ್ಭದಲ್ಲಿ ಈ ಕುರಿತಾಗಿ ದಿಟ್ಟ ನಿಧಾ೯ರದ ಕಡೆ ದೃಷ್ಟಿ ಹರಿಸಲೇ ಇಲ್ಲ. ಆದರೆ ಈಗ ಸಂಸತ್ತಿನ ಎರಡು ಸದನಳಲ್ಲಿ ನಿಚ್ಚಳ ಬೆಂಬಲವಿರುವ ಕಾರಣ ಸಮಾನ ನಾಗರಿಕ ಸಂಹಿತೆಯ ಕುರಿತಾಗಿ ಧ್ವನಿ ಎತ್ತಲು ಶುರುಮಾಡಿದೆ. ಮಾತ್ರವಲ್ಲ ಇದಕ್ಕೆ ಪೂರಕವಾಗಿ ಇತ್ತೀಚಿಗೆ ದಿಲ್ಲಿ ಹೆೈಕೇೂಟು೯ ಕೂಡಾ ಸಮಾನ ನಾಗರಿಕ ಸಂಹಿತೆಯ ಅನುಷ್ಠಾನದ ಕಡೆಗೆ ಯಾಕೆ ಗಮನಹರಿಸಬಾರದು ಅನ್ನುವ ತರದಲ್ಲಿ ಕೇಂದ್ರ ಸರಕಾರಕ್ಕೆ ನಿರ್ದೇಶನಾತ್ಮಕ ಸಲಹೆ ನೀಡಿರುವುದು ಕೇಂದ್ರ ಸರಕಾರಕ್ಕೆ ಇನ್ನಷ್ಟು ಕಾನೂನು ಮತ್ತು ನೆೈತಿಕ ಬಲ ತಂದಿದೆ ಎಂದೇ ಹೇಳಬೇಕಾಗಿದೆ.
ಹಾಗಾದರೆ ಸಮಾನ ನಾಗರಿಕ ಸಂಹಿತೆ ಹೇಗಿರಬೇಕು?
1. ಸಮಾನ ನಾಗರಿಕ ಸಂಹಿತೆ ಪ್ರತಿಯೊಬ್ಬ ಪ್ರಜೆಯ ವೆೈಯಕ್ತಿಕ ಹಿತವನ್ನು ಕಾಪಾಡುವ ಉದ್ದೇಶದಿಂದಲೇ ರೂಪಿತವಾಗಬೇಕಾದ ಕಾನೂನು ಅನ್ನುವುದನ್ನು ಸಂವಿಧಾನವೇ ಸ್ವಷ್ಟ ಪಡಿಸಿದೆ. ಇದನ್ನು ಯಾರು ಅಲ್ಲಗಳೆಯುವ ಹಾಗಿಲ್ಲ. ಮಾತ್ರವಲ್ಲ ತಪ್ಪಾಗಿ ಅಥೆೈ೯ಸ ಬಾರದು.
2. ಸಮಾನ ನಾಗರಿಕ ಸಂಹಿತೆ ಪ್ರತಿಯೊಬ್ಬ ನಾಗರಿಕನು ರಾಷ್ಟ್ರೀಯ ಬದುಕಿಗೆ ಸಂಬಂಧಿಸಿ ಹೇಗೆ ಬದುಕನ್ನು ಕಟ್ಟಿಕೊಂಡು ನಡೆಯ ಬೇಕೆನ್ನುವುದನ್ನು ಖಾತ್ರಿ ಪಡಿಸುತ್ತದೆ. ಇದರ ಅರ್ಥ ನಾವೆಲ್ಲರೂ ಒಂದೇ ದೇವರನ್ನು ಪೂಜಿಸಬೇಕು. ಒಂದೇ ಕಲ್ಯಾಣ ಮಂಟಪದಲ್ಲಿ ಮದುವೆ ಮಾಡಿಕೊಳ್ಳಬೇಕು ಅನ್ನುವ ಸಂಹಿತೆ ಅಲ್ಲವೇ ಅಲ್ಲ.
3. ಕಾನೂನಿನ ಎದುರು ಎಲ್ಲರೂ ಸಮಾನರೇ. ಅದು ಗಂಡಿರಬಹುದು, ಹೆಣ್ಣಿರಬಹುದು. ಯಾವುದೇ ಜಾತಿ ಮತ ಧಮ೯ದವರಿರಬಹುದು. ಸಮಾನ ತಪ್ಪಿಗೆ ಸಮಾನ ಶಿಕ್ಷೆ.
4. ಅದು ಸಾವ೯ಜನಿಕ ಸೇವಾವಲಯದಲ್ಲಿ ನಾವು ತೊಡಗಿಸಿಕೊಳ್ಳಬೇಕಾದ ಸಂದರ್ಭದಲ್ಲಿ ನಮ್ಮ ವಸ್ತ್ರ ಸಂಹಿತೆ ಇರ ಬಹುದು ಅಥವಾ ನಮ್ಮ ಧಾಮಿ೯ಕ ನಂಬಿಕೆಗಳಿರಬಹುದು.
ಉದಾ: ಸಂಸತ್ತಿನ ಒಳಗೆ ಇರುವಾಗ ಯಾರು ಕೂಡಾ ಶಸ್ತ್ರಾಸ್ತ್ರಗಳನ್ನು ಒಯ್ಯಬಾರದು ಅನ್ನುವ ಕಾನೂನು ಇರುವಾಗ ಸಿಖ್ ಧರ್ಮದವರು ಇಲ್ಲ ನಮಗೆ ನಾವು ಹೇೂಗುವ ಕಡೆಯಲ್ಲಿ ಈ ಮೂರು 'ಕ' ನಾವು ಒಯ್ಯಲೇಬೇಕು ಅಂದರೆ ಕೇಶ, ಖಡ್ಗ, ಕೃಪಾಣ. ಅದು ನಮ್ಮ ಧರ್ಮದ ರಿವಾಜು ಎಂದು ವಾದಿಸಿದರೆ ಹೇಗೆ? ಅವರು ವಾದಿಸಿದ್ದಾರೆ ಅನ್ನುವ ಅಥ೯ವಲ್ಲ.
5. ರಾಷ್ಟ್ರದ ಹಿತ ದೃಷ್ಟಿಯಿಂದ ತೆಗೆದುಕೊಂಡ ನಿಣ೯ಯಗಳು ಅದು ರಾಷ್ಟ್ರ ಭದ್ರತಾ ದೃಷ್ಟಿಯಿಂದ ಇರಬಹುದು ಆರ್ಥಿಕ ದೃಷ್ಟಿಯಿಂದ ಇರಬಹುದು. ಇತ್ಯಾದಿ. ಇದನ್ನು ಎಲ್ಲರೂ ಸಮಾನವಾಗಿ ಗೌರವಿಸಬೇಕು.
ಆದುದರಿಂದ ಸಮಾನ ನಾಗರಿಕ ಸಂಹಿತೆಯ ಹಿಂದಿರುವ ಮೂಲ ಉದ್ದೇಶಗಳನ್ನು ಪ್ರತಿಯೆಾಬ್ಬರಿಗೂ ಮೊದಲು ಅಥೆೈ೯ಸಿ ಅನಂತರದಲ್ಲಿ ಅನುಷ್ಠಾನ ಮಾಡಬೇಕು. ಈ ಕುರಿತಾಗಿ ಸಾಕಷ್ಟು ಗೊಂದಲ ಹೆದರಿಕೆ ಸೃಷ್ಟಿಸುವ ಮಂದಿ ಸಾಕಷ್ಟು ಇದ್ದಾರೆ. ಆದಷ್ಟು ಬೇಗ ಕೇಂದ್ರ ಸರ್ಕಾರ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸಲಿ ಅನ್ನುವುದು ಪ್ರಬುದ್ಧ ನಾಗರಿಕರ ಒತ್ತಾಸೆಯೂ ಹೌದು.
-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ
Key Words: Uniform Civil Code, Common Civil Code, India, ಏಕರೂಪ ನಾಗರಿಕ ಸಂಹಿತೆ,
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ