ದಾವಣಗೆರೆ: ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಹಾಗೂ ಅಡಿಕೆ ಪತ್ರಿಕೆ ಸಹಯೋಗದಲ್ಲಿ ಜು.28ರ ಬುಧವಾರ ಬೆಳಗ್ಗೆ 11 ಗಂಟೆಗೆ- ಮನೆಯಲ್ಲೇ ಬಾಳೆಕಾಯಿ ಹುಡಿ ತಯಾರಿಕೆಯ (ಬಾಕಾಹು) ಬಗ್ಗೆ ತಜ್ಞರಿಂದ ಮಾಹಿತಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಡಿಕೆ ಪತ್ರಿಕೆ ಸಂಪಾದಕರಾದ ಶ್ರೀಪಡ್ರೆ ಅವರು 'ಬಾಕಾಹು' ಆಂದೋಳನದ ಬಗ್ಗೆ ವಿಸ್ತೃತ ಮಾಹಿತಿ ನೀಡಲಿದ್ದಾರೆ.
ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾಗಿರುವ ಡಾ. ದೇವರಾಜ ಟಿ.ಎನ್ ಕಾರ್ಯಕ್ರಮ ನಿರ್ವಹಣೆ ಮಾಡಲಿದ್ದು, ಕಣ್ಣು ತಜ್ಞರಾದ ಸಣ್ಣಗೌಡ್ರ ಎಚ್.ಎಂ ಅವರು 'ಬಾಕಾಹು' ತಯಾರಿಸುವ ವಿಧಾನದ ಬಗ್ಗೆ ವಿವರಿಸಲಿದ್ದಾರೆ.
ತೋಟಗಾರಿಕಾ ತಜ್ಞ ಬಸವನಗೌಡ ಎಂ.ಜಿ ಅವರು ಬಾಳೆಕಾಯಿಯ ಪೌಷ್ಟಿಕತೆ ಬಗ್ಗೆ ವಿವರಿಸಲಿದ್ದಾರೆ.