ತೀರ್ಥಹಳ್ಳಿ : ಸದಸ್ಯರ ಮನೆಗಳಲ್ಲಿ ಪ್ರಯೋಗಕ್ಕೆ ’ಬಾಕಾಹು’ ತಯಾರಿ

Upayuktha
0


ಇಂದು ಭಾನುವಾರ. ಆದರೆ ತೀರ್ಥಹಳ್ಳಿಯ ಬಳಿಯ ಕೋಟಿಗದ್ದೆಯ  ’ಸಮ್ಮಿಳನ ಕೃಷಿ ಸಂಸ್ಕರಣ ಸೌಹಾರ್ದ ಸಹಕಾರಿ’ ಸಂಸ್ಥೆಗೆ ಇಂದು ರಜೆಯಿಲ್ಲ. ಮಹಿಳಾ ಸಿಬಂದಿಗೊಂದು ಹೊಸ ಕೆಲಸ. ಬಾಕಾಹು (ಬಾಳೆಕಾಯಿ ಹುಡಿ/ಪುಡಿ/ಹಿಟ್ಟು) ತಯಾರಿ.


ಈ ಕೇಂದ್ರದಲ್ಲಿ ಇದರ ಸಂಸ್ಕರಣೆಗೆ ಬೇಕಾದ ಎಲ್ಲಾ ವ್ಯವಸ್ಥೆ ಇದೆ. ಈ ವಾರದಲ್ಲಿ ಸಭೆ ಇದೆ. ಒಂದೂವರೆ ಕ್ವಿಂಟಾಲ್ ಬಾಳೆಯ ಸಂಸ್ಕರಣೆ ಸುರುವಾಗಿದೆ. ಅರ್ಧ ಕ್ವಿಂಟಾಲ್ ಬಾಳೆಕಾಯಿ ಹಿಟ್ಟು ಸಿಗೋದಂತೂ ಗ್ಯಾರಂಟಿ. ಅರುವತ್ತು ಕಿಲೋ ಸಿಕ್ಕರೂ ಸಿಗಬಹುದು.


"ಸದಸ್ಯರಿಗೆ ಅರ್ಧರ್ಧ ಕಿಲೋ ಬಾಕಾಹು ಕೊಟ್ಟು ಮನೆಮನೆಗಳಲ್ಲಿ ಪ್ರಯೋಗ ಮಾಡುವ ಸಲಹೆ ಕೊಡೋಣ" ಎಂದು ಇವರು ನಿರ್ಧರಿಸಿದ್ದಾರೆ. ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಜೆ.ಸತ್ಯನಾರಾಯಣ ಹಲಸಿನಹಳ್ಳಿ ಹುರುಪಿನಿಂದ  ಬಾಕಾಹು ಪ್ರಚಾರಕ್ಕೆ ಏರಿದ್ದಾರೆ.


ಶಿರಸಿಯ ಸಂಸ್ಥೆಗಳಲ್ಲಿ ಡ್ರೈಯರ್ ಇರುವ ಕಡೆಯೂ ಇಂಥ ಪ್ರಯೋಗ ಮಾಡಬಹುದು. ಕೊರೋನಾ ಅಲೆ ಇಳಿಯುವ ಮೊದಲು ನಮಗೆ ನಾಕೈದು ಅಡಿಕೆ ಜಿಲ್ಲೆಗಳಲ್ಲಾದರೂ ’ಬಾಕಾಹು’ ಅಲೆ ಎಬ್ಬಿಸಬೇಕಿದೆ. ಈ ಬಗ್ಗೆ ಉತ್ಸಾಹ ವಹಿಸಿ ಮುಂದೆ ಬಂದವರು ನಿಮ್ಮ ಪ್ರಯೋಗ - ಫಲಿತಾಂಶ - ಅನಿಸಿಕೆಗಳನ್ನು ದಯವಿಟ್ಟು ಫೇಸ್ ಬುಕ್ / ವಾಟ್ಸಪ್ ಗುಂಪುಗಳ ಮೂಲಕ ಹಂಚಿಕೊಳ್ಳಿ. ಕೊರೋನಾ ಅಲೆ ಇಳಿಯುವ ಮೊದಲು ನಮಗೆ’ಬಾಕಾಹು’ ಅಲೆ ಎಬ್ಬಿಸಬೇಕಿದೆ.


(ಬಾಳೆಕಾಯಿ ಹುಡಿ ತಯಾರಿಸುವ ಅಭಿಯಾನದ ನಿಟ್ಟಿನಲ್ಲಿ ಹೊಸ ಅಲೆ ಎಬ್ಬಿಸಲು ಶ್ರಮಿಸುತ್ತಿರುವ ಹಿರಿಯ ಪತ್ರಕರ್ತರು, ಅಡಿಕೆ ಪತ್ರಿಕೆಯ ಸಂಸ್ಥಾಪಕರೂ ಆಗಿರುವ ಶ್ರೀ ಪಡ್ರೆ ಅವರು ಉಪಯುಕ್ತ ನ್ಯೂಸ್ ಜತೆ ಹಂಚಿಕೊಂಡಿರುವ ಮಾಹಿತಿ ಇದು)

Key Words: Banana Flour, Banana Powder, Raw Banana value addition, ಬಾಳೆಕಾಯಿ ಹುಡಿ, ಬಾಳೆಕಾಯಿ ಹಿಟ್ಟು, ಬಾಳೆಕಾಯಿ ಮೌಲ್ಯವರ್ಧನೆ

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top