ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಸುರಕ್ಷಾ ದಂತ ಚಿಕಿತ್ಸಾಲಯ

Upayuktha
0

ದಂತ ಸುರಕ್ಷತೆಗೆ ಪರ್ಯಾಯ ಹೆಸರೇ 'ಸುರಕ್ಷಾ'


ಹೊಸಂಗಡಿಯ ಹೃದಯ ಭಾಗದಲ್ಲಿರುವ ಹಿಲ್‍ಸೈಡ್‌ ಕಾಂಪ್ಲೆಕ್ಸ್‌ನಲ್ಲಿ  1997, ಜುಲೈ 3ರಂದು ಸುರಕ್ಷಾ ದಂತ ಚಿಕಿತ್ಸಾಲಯ ಆರಂಭವಾಯಿತು. ಒಂದು ದಂತ ಕುರ್ಚಿ ಮತ್ತು ಕನಿಷ್ಠ ದಂತ ಚಿಕಿತ್ಸಾ ಸಲಕರಣೆಗಳೊಂದಿಗೆ ಆರಂಭವಾದ ಸುರಕ್ಷಾ ದಂತ ಚಿಕಿತ್ಸಾಲಯ ಇಂದು ಒಂದು ಸರ್ವ ಸುಸಜ್ಜಿತ ದಂತ ಆಸ್ಪತ್ರೆಯಾಗಿ ಬೆಳೆದು ನಿಂತಿದೆ. ಡಾ|| ಮುರಲೀ ಮೋಹನ್ ಚೂಂತಾರು ಮತ್ತು ಡಾ|| ರಾಜಶ್ರೀ ಮೋಹನ್ ದಂಪತಿಗಳ ನೇತೃತ್ವದಲ್ಲಿ ಆರಂಭವಾದ ಈ ದಂತ ಚಿಕಿತ್ಸಾಲಯ ಕಾಲಕ್ಕೆ ತಕ್ಕಂತೆ ಬದಲಾಗುತ್ತಾ, ರೋಗಿಗಳ ಸಂಖ್ಯೆ ಜಾಸ್ತಿಯಾದಂತೆ ದಂತ ಕುರ್ಚಿಗಳ ಸಂಖ್ಯೆ ಒಂದರಿಂದ ಎರಡಾಗಿ, ಎರಡು ನಾಲ್ಕಾಗಿ, ನಾಲ್ಕರಿಂದ ಆರು ಬಳಿಕ ಹತ್ತು ದಂತ ಚಿಕಿತ್ಸೆಗೊದಗುವ ಆರಾಮದಾಯಕದಂತ ಕುರ್ಚಿಗಳನ್ನು ಪಡೆದು, ಈಗ ದಂತ ಚಿಕಿತ್ಸೆ ಎಂದರೆ ‘ಸುರಕ್ಷಾ’ ಎಂದು ಜನಜನಿತವಾಗಿ, ಜನಪ್ರಿಯ, ಜನಾನುರಾಗಿ ಮತ್ತು ಜನ ಸ್ನೇಹಿ ದಂತ ಚಿಕಿತ್ಸಾಲಯವಾಗಿ ಬೆಳೆದು ನಿಂತಿದೆ.


ರೋಗಿಗಳ ಚಿಕಿತ್ಸೆಗೆ ಅನುಕೂಲಕ್ಕಾಗಿ ದಂತ ಎಕ್ಸ್‌ರೇ, ಲೇಸರ್, ಕಂಪ್ಯೂಟರೀಕೃತ ಬೇರುನಾಳ ಚಿಕಿತ್ಸೆ, ‘ಬಿ’ ಕ್ಲಾಸ್‌ ಆಟೋಕ್ಲೇವ್ ಹೀಗೆ ಎಲ್ಲಾ ಸೌಲಭ್ಯಗಳನ್ನು ರೋಗಿಗಳಿಗೆ ಒದಗಿಸಿದೆ. ವಿಶ್ವದರ್ಜಿಯ ಉತ್ಕೃಷ್ಟ ದಂತ ಚಿಕಿತ್ಸೆ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಲಭ್ಯವಿದೆ. ವಕ್ರದಂತ… ತಜ್ಞರು, ಬೇರುನಾಳ ತಜ್ಞರು, ಮಕ್ಕಳ ಹಲ್ಲಿನ ತಜ್ಞರು, ವಸಡು ತಜ್ಞರು, ಬಾಯಿ ಮುಖ ಶಸ್ತ್ರಚಿಕಿತ್ಸೆ ಹೀಗೆ ಎಲ್ಲಾ ರೀತಿಯ ಪರಿಣಿತ ತಜ್ಞರು ವಾರವಿಡೀ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಲಭ್ಯವಿದ್ದಾರೆ. ಭಾನುವಾರ ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲಿ,  ಬಂದ್, ಮುಷ್ಕರ ಇದ್ದರೂ ರೋಗಿಗಳಿಗೆ ಸುರಕ್ಷಾದಲ್ಲಿ  ನಗುಮುಖದ ದಂತಚಿಕಿತ್ಸೆ ಮತ್ತು ದಂತ ಸೇವೆ  ದಂತ ದಂಪತಿಗಳಿಂದ  ದೊರಕುತ್ತದೆ. ನೋವಿನಿಂದ ಚಡಪಡಿಸುತ್ತಾ ಸುರಕ್ಷಾ ಚಿಕಿತ್ಸಾಲಯಕ್ಕೆ ಬಂದ ರೋಗಿಗಳು  ನೋವು ಶಮನವಾಗಿ ನಗುತ್ತಾ ಹೊರಬರುವುದು ದಿನ ನಿತ್ಯದ ಬೆಳವಣಿಗೆ ಎಂದರೂ ತಪ್ಪಾಗಲಾರದು.


ಸಾಮಾಜಿಕ ಬದ್ಧತೆ: ಸಾಮಾನ್ಯವಾಗಿ ಎಲ್ಲಾ ದಂತ ಚಿಕಿತ್ಸಾಲಯದಲ್ಲಿ ದಂತ ಚಿಕಿತ್ಸೆ ಮಾತ್ರ ದೊರಕುತ್ತದೆ. ಆದರೆ ಸುರಕ್ಷಾ ಈ ವಿಚಾರದಲ್ಲಿ ಭಿನ್ನ. ದಂತ ಚಿಕಿತ್ಸಾಲಯದಲ್ಲಿ ದಂತ ಚಿಕಿತ್ಸೆ ಅಲ್ಲದೆ, ರಕ್ತದಾನ ಶಿಬಿರ, ವನಮಹೋತ್ಸವ,  ಬಾಯಿಕ್ಯಾನ್ಸರ್ ತಪಾಸಣೆ, ತಂಬಾಕು ವರ್ಜನೆ ಶಿಬಿರ ನಡೆಸುತ್ತಾ ಬಂದಿದೆ. ಹೀಗೆ ಸುರಕ್ಷಾ ತನ್ನ ಸಾಮಾಜಿಕ ಭದ್ಧತೆಯನ್ನು ಎತ್ತಿ ಹಿಡಿದು ವೈದ್ಯ ತನ್ನ ಕೇವಲ ರೋಗದ ಚಿಕಿತ್ಸೆಗೆ ಇರುವುದಲ್ಲ. ರೋಗ ತಡೆಗಟ್ಟುವುದು ವೈದ್ಯರ   ನಿಜವಾಗಿ ಸಾಮಾಜಿಕ ಬದ್ಧತೆ ಎಂದು ಸಾಬೀತು ಪಡಿಸುತ್ತಲೇ ಇರುತ್ತದೆ. ಈವರೆಗೆ 5 ರಕ್ತದಾನ ಶಿಬಿರ, 10 ಬಾಯಿ ಕ್ಯಾನ್ಸರ್ ತಪಾಸಣಾ ಶಿಬಿರ, 10 ತಂಬಾಕು ವರ್ಜನ ಶಿಬಿರ ನಡೆಸಿದ ಹೆಗ್ಗಳಿಕೆ ಸುರಕ್ಷಾ ದಂತ ಚಿಕಿತ್ಸಾಲಯಕ್ಕಾಗಿದೆ. ಪ್ರತೀ ವರ್ಷಜೂನ್ ತಿಂಗಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಸಲುವಾಗಿ ತಿಂಗಳಿಡೀ ಚಿಕಿತ್ಸಾಲಯಕ್ಕೆ ಭೇಟಿ ನೀಡುವ ರೋಗಿಗಳಿಗೆ ಉಚಿತವಾಗಿ ಸಸಿ ನೀಡುವ ವಿಶಿಷ್ಠ ಸಂಪ್ರದಾಯ 2015 ರಲ್ಲಿ ಆರಂಭಿಸಿದೆ. ಈವರೆಗೆ ಸುಮಾರು 1000 ಸಸಿಗಳನ್ನು ವಿತರಿಸಿದ ಹೆಗ್ಗಳಿಕೆ ಸುರಕ್ಷಾ ಚಿಕಿತ್ಸಾಲಯದ್ದು.  ಈವರೆಗೆ ಸುಮಾರು 5000 ಮಂದಿ ರೋಗಿಗಳಿಗೆ  ತಂಬಾಕು ವರ್ಜಿಸುವಂತೆ ಮನವೊಲಿಸಿ, ದಾಖಲೆಯನ್ನೇ ನಿರ್ಮಿಸಿದೆ.


ವೈದ್ಯಕೀಯ ವಿಜ್ಞಾನ ಬೆಳೆದಂತೆಲ್ಲಾ ತಂತ್ರಜ್ಞಾನ ಬದಲಾದಂತೆ ಚಿಕಿತ್ಸಾ ಕೌಶಲ್ಯ ಮತ್ತು ಜ್ಞಾನ ಸಮ್ಮಿಳಿತಗೊಳಿಸಿ ರೋಗಿಗಳಿಗೆ ಅತ್ಯಂತ ಪರಿಣಾಮಕಾರಿ ಚಿಕಿತ್ಸೆ ನೀಡುವುದು ಸುರಕ್ಷಾ ದಂತಾಲಯದ ಯಶಸ್ಸಿನ ಮೂಲ ಮಂತ್ರವಾಗಿದೆ. ಚಿಕಿತ್ಸೆಯ ಜೊತೆಗೆ ಮಾನವೀಯ ಕಳಕಳಿ ಅಳವಡಿಸಿಕೊಂಡು, ರೋಗಿಗಳ  ಕಷ್ಟಕಾರ್ಪಣ್ಯ ಬಹಳ ಬೇಗ ವಾಸಿಯಾಗುವುದರಲ್ಲಿ ಸಂಶಯವೇ ಇಲ್ಲ. ಇಂತಹ ಸಾಮಾಜಿಕ, ವೈಜ್ಞಾನಿಕ, ನೈತಿಕ ಮತ್ತು ವೃತ್ತಿಪರ ಕಳಕಳಿಯಿಂದ ದಂತಚಿಕಿತ್ಸೆ ನೀಡುವಲ್ಲಿ ಸುರಕ್ಷಾ ದಂತಚಿಕಿತ್ಸಾಲಯ ಮುಂಚೂಣಿಯಲ್ಲಿದೆ ಎಂದರೆ ಅತಿಶಯೋಕ್ತಿಯಾಗಲಾರದು. ದಂತ ವೈದ್ಯಕೀಯ ಸೇವೆಯಲ್ಲಿ ಎರಡೂವರೆ ದಶಕಗಳ  ಜೊತೆಯಾಗಿ ನಡೆಸಿದ್ದು ಈ ದಂತ ದಂಪತಿಗಳ ಹೆಗ್ಗಳಿಕೆ. ದಂತ ಚಿಕಿತ್ಸೆಯಲ್ಲಿನ ಈ ದಂಪತಿಗಳ 25 ವರ್ಷಗಳ ಸೇವಾ ಜುಗಲ್‍ಬಂದಿಯ ಯಶಸ್ವಿ ಪಯಣದ ಸಾಧನೆಗೆ, ಸೇವೆಯಲ್ಲಿನ ನಿಷ್ಠೆ, ಪರಿಶ್ರಮ, ಪ್ರಾಮಾಣಿಕತೆ ಮತ್ತು ಏಕಾಗ್ರತೆಯೇ ಮೂಲಮಂತ್ರವೆಂದರೆ ಅತಿಶಯವಲ್ಲ.  


ಕೊನೆಮಾತು:

ಕಲಿಕೆ, ವೃತ್ತಿ, ಹಣ, ಸಂಪತ್ತು ಇವೆಲ್ಲಾ ಇಂದಿನ ಜಗತ್ತಿನ ವ್ಯಾಪಾರೀಕರಣಗೊಂಡ ಮುಖಗಳು. ಅದೇ ಬದುಕಾದರೆ, ಬದುಕು ಬರಡಾಗಿ, ವ್ಯವಹಾರಿಕವಾಗಿ ಕೇವಲ ಲೌಖಿಕ ತೃಪ್ತಿಯೊಂದಿಗೆ ಮುಗಿದು ಹೋಗುವ ಪಯಣವಾಗುತ್ತದೆ. ಸಾಕಷ್ಟು ಪ್ರತಿಭೆ ಹೊಂದಿ, ಹಣ ಗಳಿಸಿ ವೈಭವದ ಬದುಕನ್ನು ಕಟ್ಟಿಕೊಳ್ಳುವ ಮುಕ್ತ ಅವಕಾಶವಿದ್ದರೂ, ತಾವು ಬೆಳೆದು ಬಂದ ಹಾದಿಯನ್ನು ಮರೆಯದೆ, ಕಲಿಕೆಯ ಜೀವನ ಮೌಲ್ಯಗಳನ್ನು ವೃತ್ತಿ ಮತ್ತು ಖಾಸಗಿ ಜೀವನದಲ್ಲಿ ಅಳವಡಿಸಿಕೊಂಡು  ಸಾಮಾಜಿಕ ಬದ್ಧತೆಯಿಂದ ಬಾಳಿ ಬದುಕಿ ಸಾಕಷ್ಟು  ವ್ಯಾಪ್ತಿ, ಆಳ, ಎತ್ತರ ಇದೆಯೆಂದು ಸಾಧಿಸಿ ತೋರಿಸಿದ ಛಲಗಾರಿಕೆ ಇರುವ ವ್ಯಕ್ತಿಗಳನ್ನು ನಾವು ಅಲ್ಲಲ್ಲಿ ಕಾಣುತ್ತೇವೆ. ಅಂತಹವರ ಸಾಲಿನಲ್ಲಿ ನಿಸ್ಸಂದೇಹವಾಗಿ ಸೇರುವ  ಹೆಸರುಗಳಲ್ಲಿ  ಸುರಕ್ಷಾದಂತ ದಂಪತಿಗಳಾದ ಡಾ|| ಮುರಲೀ ಮೋಹನ್ ಚೂಂತಾರು ಮತ್ತು ಡಾ|| ರಾಜಶ್ರೀ ಮೋಹನ್ ಈಗ ಹೊಸಂಗಡಿಯ ಹೃದಯ ಭಾಗದಲ್ಲಿರುವ ಹೈಲ್ಯಾಂಡ್ ಕಾಂಪ್ಲೆಕ್ಸ್‌ನಲ್ಲಿ ಸುರಕ್ಷಾ ಒಂದು ದಂತ ಆಸ್ಪತ್ರೆಯಾಗಿ ಬೆಳೆದು ನಿಂತ ಪರಿಯಾರನ್ನೂ ವಿಸ್ಮಿತರನ್ನಾಗಿಸದೆ ಇರದು.  ಕೇವಲ ಹಣ  ಗಳಿಕೆಯ ದೃಷ್ಟಿಕೋನವಿದ್ದರೆ ಊರಿಗೆ, ವೃತ್ತಿಗೆ, ತಮ್ಮ ವ್ಯಕ್ತಿತ್ವಕ್ಕೆ ಹೊಸರೂಪ ಮತ್ತು ಛಾಪು ನೀಡಲು ಸಾಧ್ಯವಿರುತ್ತಿರಲಿಲ್ಲ.


ಸೇವೆ, ನಗು ಮತ್ತು ಆರೋಗ್ಯ (Service, Smile, Health) ಎಂಬ ಧ್ಯೇಯೋದ್ದೇಶಗಳನ್ನು ಇಟ್ಟುಕೊಂಡು ಕಾರ್ಯ ನಿರ್ವಹಿಸುತ್ತಾ, ಸೇವೆಯ ವಿಶಾಲಾರ್ಥದಲ್ಲಿ ಈ ದಂಪತಿಗಳು ಸುರಕ್ಷಾ ದಂತ ಚಿಕಿತ್ಸಾಲಯಕ್ಕೆ ಸಾಂಸ್ಥಿಕ ರೂಪ ನೀಡಿ ಹೊಸಂಗಡಿಯ ಅಭಿವೃದ್ಧಿಗೆ ತನ್ನದೇ ಆದ ರೀತಿಯಲ್ಲಿ ಹೊಸ ಬೆಳಕು ನೀಡಿದರು. ದಂತ ಚಿಕಿತ್ಸೆಗೆ ಬರುವ ರೋಗಿಗಳಲ್ಲಿ ಸುರಕ್ಷತೆಯ ಭಾವ ಭದ್ರವಾಗಿ ಬೇರೂರುವಂತೆ ಮಾಡಿ ಸುರಕ್ಷಾ ಎಂಬ ಹೆಸರಲ್ಲಿ ಅನ್ವರ್ಥವಾಗಿಸಿದ್ದಾರೆ. ದಂತ ಚಿಕಿತ್ಸೆಯ ಜೊತೆಗೆ, ಗಡಿನಾಡಿನಲ್ಲಿ ಕನ್ನಡದ ಕಂಪನ್ನು ಸೇವೆಯ ರೂಪದಲ್ಲಿ, ವೃತ್ತಿಯ ಪಾವಿತ್ರ್ಯ ಮತ್ತು ಸಾರವನ್ನು ಎತ್ತಿರಿಸಿಕೊಂಡು  ತಮ್ಮ ವ್ಯಕ್ತಿತ್ವಕ್ಕೆ ಮೆರುಗು ತಂದುಕೊಂಡ ಹೆಗ್ಗಳಿಕೆ ಡಾ|| ಮುರಲೀಯವರದ್ದು. ಸಾವಿರಕ್ಕೂ ಹೆಚ್ಚು ವೈದ್ಯಕೀಯ ಲೇಖನ ಬರೆದು ವೈದ್ಯಕೀಯ ಸಾಹಿತಿಎಂದು ಗುರುತಿಸಿಕೊಂಡು ಹಲವಾರು ಪ್ರತಿಷ್ಠಿತ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಈ ದಂತ ವೈದ್ಯ ದಂಪತಿಗಳ  ದಂತ ಸೇವೆಯ ಜುಗಲ್‍ಬಂದಿ ಹೀಗೇ ಮುಂದುವರೆದಲ್ಲಿ, ಗಡಿನಾಡ ಕನ್ನಡಿಗರ ಶುಭ್ರದಂತ ಪಂಕ್ತಿಗಳು ಇನ್ನಷ್ಟು  ಹೊಳೆಯುವುದರಲ್ಲಿ ಸಂಶಯವೇ ಇಲ್ಲ. ಹೀಗೆ ಈ ದಂಪತಿಗಳ  ಅಧ್ಯಯನ-ಸೇವೆಯ ಜೊತೆಯಾಟ ಸದಾ ಮುಂದುವರೆಯಲಿ ಎಂದು ಹಾರೈಸೋಣ.


Key Words: Suraksha Dental Clinic, Silver Jubilee, ಸುರಕ್ಷಾ ದಂತ ಚಿಕಿತ್ಸಾಲಯ, ಬೆಳ್ಳಿಹಬ್ಬ, ರಜತ ಸಂಭ್ರಮ

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top