ಪ್ರಯೋಗ: ಎಸ್ಸಾರ್ ಪುತ್ತೂರು
ಕಲಾವಿದ ಎಸ್ಸಾರ್ ಪುತ್ತೂರು ಅವರ ಮಾತು ಕೇಳೋಣ:
"ಬಹು ನಿರೀಕ್ಷೆಯ ಬಾಕಾಹು ನಾನು ಉಪಯೋಗಿಸಿದ್ದು ಗ್ರೇವಿಯನ್ನು ದಪ್ಪಗೊಳಿಸಲು. ನನ್ನ ಶರೀರ ಸಿಹಿತಿಂಡಿ ಮತ್ತು ಕರಿದ ತಿಂಡಿಗಳನ್ನು ಒಪ್ಪುವುದಿಲ್ಲ. ಹಾಗಾಗಿ ಬಾಕಾಹುವನ್ನು ನನ್ನ ಮಾಮೂಲಿ ಕರಿಗಳ ಗ್ರೇವಿ, ಸಾಂಬಾರುಗಳಿಗೆ ಉಪಯೋಗಿಸಲು ಮೊದಲೇ ಆಲೋಚಿಸಿದ್ದೆ."
"ಶಿರಸಿಯ ವಸುಂಧರಾ ಹೆಗಡೆಯವರಿಂದ ಬಾಕಾಹು ತರಿಸಿಕೊಂಡೆ. ಅದೇ ರಾತ್ರಿ ಸೋಯಾ ಚಂಕ್ಸ್ ನ ಗ್ರೇವಿ ಮಾಡಿದೆ. ಕೊನೆಯ ಹಂತದಲ್ಲಿ ಒಂದು ಲೋಟ ನೀರಿಗೆ ಎರಡು ದೊಡ್ಡ ಚಮಚ ಬಾಕಾಹು ಹಾಕಿ ಚೆನ್ನಾಗಿ ಕರಗಿ ಪೇಸ್ಟ್ ನಂತೆ ಮಾಡಿದೆ. ಇದನ್ನು ಗ್ರೇವಿಗೆ ಮಿಕ್ಸ್ ಮಾಡಿ ಒಂದು ಕುದಿ ಬರುವ ವರೆಗೆ ತಳ ಹಿಡಿಯದಂತೆ ತಿರುವುತ್ತ ಇದ್ದೆ. "
"ಗ್ರೇವಿಗೆ ವಿಶಿಷ್ಟ ರುಚಿ ಬಂತು. ಸಾಂಬಾರ್ ಗ್ರೇವಿ ಥಿಕ್ ಮಾಡಲು ಬಾಕಾಹು ಸೂಕ್ತ ಎಂದು ನನಗನ್ನಿಸುತ್ತದೆ."
ಮನೆಯಲ್ಲಿ ಬಾಕಾಹು ತಯಾರಿಸಿ ಮಾರುಕಟ್ಟೆ ಮಾಡುತ್ತಿರುವ ವಸುಂಧರಾ ಹೆಗಡೆ ಅವರ ಮಕ್ಕಳು ಈಚೆಗೆ ಗೋಬಿ ಮಂಚೂರಿ ಮಾಡಿದ್ದರು. ಅವರು ಕಾರ್ನ್ ಪ್ಲೋರಿಗೆ ಬದಲು ಬಳಸಿದ್ದು ಬನಾನಾ ಫ್ಲೋರ್ - ಬಾಕಾಹುವನ್ನು. "ನಾನ್ ವೆಜ್ ಅಡುಗೆಯಲ್ಲಿ ಥಿಕನಿಂಗ್ ಏಜೆಂಟ್ ಆಗಿ ಕಾರ್ನ್ ಫ್ಲೋರನ್ನು ತುಂಬ ಬಳಸುತ್ತಾರೆ. ಅದರ ಬದಲಿಗೆ ಬಾಳೆಕಾಯಿ ಹುಡಿ ಒಳ್ಳೆಯದಾಗಬಹುದು" ಎನ್ನುತ್ತಾರೆ ಕೆಲವರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ