ಸವಿರುಚಿ: ಬಾಕಾಹು ಸಾಟು

Upayuktha
0


ಪಾಕ: ರೇಖಾ ಹೆಗಡೆ ಕಾಗೇರಿ


ನಿನ್ನೆ ಮಧ್ಯಾಹ್ನ ಅರ್ಧ ಕಿಲೋ ಬಾಕಾಹು (ಬಾಳೆಕಾಯಿ ಹುಡಿ) ತರಿಸಿಕೊಂಡ ರೇಖಾ- ಶ್ರೀಕೃಷ್ಣ ಹೆಗಡೆಯವರ ಮನೆಯಲ್ಲಿ ಎರಡು ಬಾರಿ ಸಾಟು ತಯಾರಿ ಪ್ರಯೋಗ ನಡೆದಿದೆ.


"ಸಿಹಿ ತಿಂಡಿಗಳ ತಯಾರಿಯ ಮಟ್ಟಿಗೆ ಸಿಪ್ಪೆ ತೆಗೆದ ಬಾಳೆಕಾಯಿ ಹುಡಿ ಉತ್ತಮ. ಇಲ್ಲದಿದ್ದರೆ ಸ್ವಲ್ಪ ಸಿಪ್ಪೆಯ ಪರಿಮಳ ಉಳ್ಕೊಳ್ಳುತ್ತೆ. ಬಾಕಿ ಮಟ್ಟಿಗೆ ಓಕೆ. ಏನೇನೂ ಮೈದಾ ಹಾಕಿಲ್ಲ. ಒಳಗೆ ಪದರ ಬಂದು ಮೃದು ಆಗಿದೆ" ಎನ್ನುತ್ತಾರೆ ರೇಖಾ ಹೆಗಡೆ.


ಶ್ರೀಕೃಷ್ಣ ಹೆಗಡೆ ಹೇಳುವುದು ಹೀಗೆ: "ಬಾಕಾಹು ಅಥವಾ ಡ್ರೈ ಬನಾನಾ ಪೌಡರ್ ಬಳಸಿ ಸಾಠೆ ಮಾಡಿದೆವು. "ರುಚಿ" ಒಂದನ್ನೇ ಪರಿಗಣಿಸಿದರೆ... ಮೈದಾ ಸಾಠೆಗೆ 100 ಮಾರ್ಕು. ಗೋಧಿ ಹಿಟ್ಟಿನ ಸಾಠೆಗೆ 90, 'ಬಾಕಾಹು'ವಿನದಕ್ಕೆ 85 ಕೊಡಬಹುದು.


ರುಚಿ + ಆರೋಗ್ಯ ತೆಗೆದುಕೊಂಡರೆ ಬಾಕಾಹು ಸಾಠೆಗೆ 100 ಮಾರ್ಕು ಕೊಡೋಣ.


ಬಾಕಾಹು ಭವಿಷ್ಯದಲ್ಲಿ ಮೈದಾಕ್ಕೆ ಪರ್ಯಾಯವಾಗಿ ಬೆಳೆಯಬಹುದು. ಜೊತೆಗೆ ಬಾಳೆಕಾಯಿ ಮೌಲ್ಯವರ್ಧನೆ ಆಗಬಹುದು."


(ಪ್ರಯೋಗಕ್ಕೆ ಪ್ರೇರಣೆಯಾದವರು: ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು)


Key Words: Banana Powder, Dry Banana Powder Recipe, Bakahu, Banana flour, ಬಾಕಾಹು, ಬಾಳೆಕಾಯಿ ಹುಡಿ, ಬಾಕಾಹು ಸಾಟು, ಸವಿರುಚಿ


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top