ಕೇರಳದಿಂದ ಬರುವ ಪ್ರಯಾಣಿಕರ ತಪಾಸಣೆಗೆ 10 ಗಡಿ ಚೆಕ್‌ಪೋಸ್ಟ್‌ಗಳು ಇಂದಿನಿಂದಲೇ ಕಾರ್ಯಾರಂಭ

Upayuktha
0



ಮಂಗಳೂರು:  ಕೋವಿಡ್ 19 ಕುರಿತಾಗಿ ರಾಜ್ಯ ಸರಕಾರದ ಹೊಸ ಮಾರ್ಗಸೂಚಿ ಪ್ರಕಾರ ಕೇರಳ ರಾಜ್ಯದಿಂದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ವ್ಯಾಪ್ತಿಗೆ ಬರುವ ಪ್ರಯಾಣಿಕರ ತಪಾಸಣೆಗಾಗಿ ದ.ಕ ಜಿಲ್ಲಾ ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ಒಟ್ಟು 10 ಚೆಕ್‌ಪೋಸ್ಟ್‌ಗಳನ್ನು ಇಂದು ತೆರೆಯಲಾಗಿದೆ.


ಈ ಚೆಕ್‌ಪೋಸ್ಟ್‌ಗಳಲ್ಲಿ ಕೋವಿಡ್ 19 ಮಾರ್ಗಸೂಚಿ ಅನ್ವಯ ದ.ಕ ಜಿಲ್ಲೆಗೆ ಪ್ರವೇಶಿಸುವ ಪ್ರಯಾಣಿಕರ ಲಸಿಕಾಕರಣದ ಸ್ಥಿತಿಗತಿ (ವ್ಯಾಕ್ಸಿನೇಶನ್ ಸ್ಟೇಟಸ್), ನೆಗೆಟಿವ್ ಆರ್‌ಟಿಪಿಸಿಆರ್‌ ವರದಿ ತಪಾಸಣೆ ಮಾಡಲಾಗುವುದು. ಅಗತ್ಯವಿದ್ದಲ್ಲಿ ಆರ್‌ಎಟಿ/ ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷರ ಪ್ರಕಟಣೆ ತಿಳಿಸಿದೆ.


ಚೆಕ್‌ಪೋಸ್ಟ್‌ಗಳ ವಿವರ ಇಂತಿದೆ:

ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾರಡ್ಕ, ಸಾಲೆತ್ತೂರು, ಕನ್ಯಾನ; ಪುತ್ತೂರು ಗ್ರಾಮಾಂತರ ಠಾಣೆ ವ್ಯಾಪ್ತಿಯ ಮೇನಾಲ, ಸ್ವರ್ಗ, ಸುಳ್ಯಪದವು; ಸುಳ್ಯ ಠಾಣೆ ವ್ಯಾಪ್ತಿಯ ಮೂರೂರು, ಮಂಡೆಕೋಲು, ಬಡ್ಡಡ್ಕ, ಕನ್ನಡಿತೋಡು.


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top