ಬೆಲೆ ಕುಸಿದರೇಕೆ ಸಿಟ್ಟು? ತಿನ್ನಿ, ಬಾಕಾ ರವೆ ಉಪ್ಪಿಟ್ಟು

Upayuktha
0


ಬಾಳೆಕಾಯಿಯ ಮೌಲ್ಯವರ್ಧನೆ ಅಭಿಯಾನಕ್ಕೀಗ ಹೊಸ ಆಯಾಮ. 'ಬಾಕಾಹು' (ಬಾಳೆಕಾಯಿ ಹುಡಿ/ಹಿಟ್ಟು) ತಯಾರಿಸಿ ಅದರಿಂದ ನಾನಾ ಬಗೆಯ ತಿನಿಸುಗಳನ್ನು ಮಾಡಬಹುದು ಎಂಬ ಪ್ರಯೋಗಗಳು ಸಿದ್ಧವಾದ ಬಳಿಕ ಇದೀಗ, ಬಾಳೆ ಕಾಯಿಂದ ರವೆ ಉಪ್ಪಿಟ್ಟು ಕೂಡ ಮಾಡಬಹುದು ಎಂಬುದು ಪ್ರಯೋಗದಿಂದ ಸಾಬೀತಾಗಿದೆ.

ಹೇಗೆ ಅಂತ ಮುಂದೆ ಓದಿ. ರಾಜ್ಯದಲ್ಲಿ ಬಾಕಾಹು ಅಭಿಯಾನದ ರೂವಾರಿ ಹಾಗೂ ಅಡಿಕೆ ಪತ್ರಿಕೆ ಸಂಪಾದಕರಾದ ಶ್ರೀಪಡ್ರೆಯವರು ಹಂಚಿಕೊಂಡ ಮಾಹಿತಿ ಇಲ್ಲಿದೆ:


****

ಬಾಳೆಕಾಯಿ ಹುಡಿಯಂತೆಯೇ ಸುಲಭ ಬಾಕಾ ರವೆ ಉತ್ಪಾದನೆ. ಮನೆಯಲ್ಲೇ ಮಾಡಿಕೊಳ್ಳಬಹುದು. ಒಣಗಿಸಿದ ಬಾಳೆಕಾಯಿ ಚಿಪ್ಸಿನಿಂದ ಮಿಕ್ಸಿಯಲ್ಲಿ ತರಿಯಾಗಿಸಿಕೊಂಡರೆ ಸಾಕು.


"ಗೋಧಿಯ ಉಪ್ಪಿಟ್ಟಿಗಿಂತ ಬೇರೆ ಅಲ್ಲ. ಬಿಸಿಯಾಗಿದ್ದಾಗ ಸ್ವಲ್ಪ ಅಂಟಂಟು. ತಣಿದರೆ ಉದುರಾಗುತ್ತದೆ" ಎನ್ನುವುದು ತುಂಬೆಮನೆ ಆಶ್ರಿತಾ ಕೃಷ್ಣಮೂರ್ತಿ ಅವರ ಅಭಿಪ್ರಾಯ.


ತೀರ್ಥಹಳ್ಳಿಯ ಬಳಿಯ ಚಕ್ಕೋಡಬೈಲು ಶ್ರೀವತ್ಸರ ಪತ್ನಿ ಮೀರಾ ಮತ್ತು ತಮ್ಮ ಶ್ಯಾಮಸುಂದರ ಪತ್ನಿ ಶರ್ಮಿಳಾ ಬಾಕಾ ರವೆ ಉಪ್ಪಿಟ್ಟು ಮಾಡಿದ್ದಾರೆ. "ಸ್ವಲ್ಪ ಹೆಚ್ಚು ಹೊತ್ತು ಬೇಯಿಸಬೇಕು. ಬಿಸಿ ಇದ್ದಾಗ ಸ್ವಲ್ಪ ಅಂಟಿರುತ್ತದೆ, ತಣಿದಾಗ ಓಕೆ" ಎನ್ನುತ್ತಾರೆ ಮೀರಾ ಶ್ರೀವತ್ಸ.


ತಿರುಚಿರಾಪಳ್ಳಿಯ ರಾಷ್ಟ್ರೀಯ ಬಾಳೆ ಸಂಶೋಧನಾ ಕೇಂದ್ರ (ಎನ್‌ಆರ್‌ಸಿಬಿ) ಮತ್ತು ತಿರುವನಂತಪುರದ ಇನ್ನೊಂದು ಸಂಶೋಧನಾ ಕೇಂದ್ರ ಈಗಾಗಲೇ ನೇಂದ್ರಬಾಳೆ ಕಾಯಿಯ ಉಪ್ಪಿಟ್ಟು ಮಾಡುವ ತಂತ್ರಜ್ಞಾನವನ್ನು ಸಿದ್ಧಗೊಳಿಸಿವೆ.


ಬಾಳೆಕಾಯಿ ರವೆ ಮಾರುಕಟ್ಟೆಯಲ್ಲಿ ಸಿಗದು. ಸದ್ಯಕ್ಕೆ  ಶಿರಸಿಯ (ಕಾನಳ್ಳಿ) ಮುಂಡ್ಗೇಜಡ್ಡಿಯ 'ಮಂಜುಶ್ರೀ ಹೋಮ್ ಪ್ರಾಡಕ್ಟ್ಸ್’ನ ವಸುಂಧರಾ ಆದೇಶದ ಮೇರೆಗೆ ಮಾಡಿ ಕಳಿಸುತ್ತಿದ್ದಾರೆ.


ಬಾಕಾ ರವೆಗಾಗಿ- ವಸುಂಧರಾ ಹೆಗಡೆ- 99009 27988 (ವಾಟ್ಸಪ್ ಮಾತ್ರ) 

78991 61434 (ಕರೆಗಳಿಗೆ)


Key Words: Banana Flour, Banana Powder, Banana chips, Banana Rava, ಬಾಳೆಕಾಯಿ ಹುಡಿ, ಬಾಳೆಕಾಯಿ ರವೆ, ಬಾಕಾಹು


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top