ನಿನ್ನೆ 'ವಿಶ್ವವಾಣಿ ಕ್ಲಬ್' ಗೆ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಆಗಮಿಸಿ, ಕ್ಲಬ್ ಹೌಸ್ ಸಂವಾದದಲ್ಲಿ ಪಾಲ್ಗೊಂಡಿದ್ದರು. ಈ ಸಂವಾದ ಸುಮಾರು ನಾಲ್ಕು ಗಂಟೆಗಳ ಕಾಲ ನಡೆಯಿತು.
ನಿನ್ನೆ ಜಗತ್ತಿನಾದ್ಯಂತ ನಡೆದ ಕ್ಲಬ್ ಹೌಸ್ ಸಂವಾದಗಳಲ್ಲೇ ಸಿದ್ದರಾಮಯ್ಯನವರೊಂದಿಗೆ ನಡೆಸಿದ ಸಂವಾದ 'ನಂಬರ್ 1' ಎಂದು 'ಕ್ಲಬ್ ಹೌಸ್ ಎನಾಲಿಟಿಕ್ಸ್' ಹೇಳಿದೆ. ಅದರ ವಿವರ ಈ ಕೆಳಗೆ ನೀಡಲಾಗಿದೆ. ಕಳೆದ ಹದಿಮೂರು ದಿನಗಳಿಂದ ವಿಶ್ವವಾಣಿ ಕ್ಲಬ್ ಸಂವಾದ ಟಾಪ್ ಟೆನ್ ಸಂವಾದಗಳಲ್ಲಿದೆ. (ನಿನ್ನೆ ಕ್ಲಬ್ ಹೌಸ್ ಸಂಸ್ಥಾಪಕರ ಸಂವಾದವೂ ಇತ್ತು. ಅದು ನಂಬರ್ 3 ಸ್ಥಾನದಲ್ಲಿದೆ.)
ವಿಶ್ವವಾಣಿ ಕ್ಲಬ್ ಸಂವಾದದಲ್ಲಿ ಪಾಲ್ಗೊಂಡು ಪ್ರೋತ್ಸಾಹಿಸುತ್ತಿರುವ ನಿಮಗೆಲ್ಲರಿಗೂ ಧನ್ಯವಾದಗಳು ಎಂದು ಸಂಪಾದಕರಾದ ಶ್ರೀ ವಿಶ್ವೇಶ್ವರ ಭಟ್ ಅವರು ತಿಳಿಸಿದ್ದಾರೆ.
ಕ್ಲಬ್‌ಹೌಸ್- ಶ್ರವ್ಯ ಸಾಮಾಜಿಕ ಜಾಲತಾಣ ಇತ್ತೀಚೆಗೆ ಭಾರತದಲ್ಲೂ ಅಪಾರ ಜನಪ್ರಿಯತೆ ಪಡೆಯುತ್ತಿದೆ. ಕ್ಲಬ್‌ಹೌಸ್ ಆರಂಭವಾದಾಗಿನಿಂದಲೂ ವಿಶ್ವವಾಣಿ ಕ್ಲಬ್‌ಹೌಸ್ ಪ್ರತಿದಿನ ಮಾದರಿ ಎನಿಸುವಂತಹ ಅತ್ಯುತ್ತಮ ಸಂವಾದಗಳನ್ನು ನಡೆಸಿಕೊಡುತ್ತಿದೆ. ಈಗಾಗಲೇ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ, ಖ್ಯಾತ ಗಾಯಕರಾದ ಶ್ರೀ ವಿದ್ಯಾಭೂಷಣರು, ಅದಮ್ಯ ಚೇತನ ಫೌಂಡೇಶನ್‌ನ ತೇಜಸ್ವಿನಿ ಅನಂತಕುಮಾರ್, ಖ್ಯಾತ ಹೃದ್ರೋಗ ತಜ್ಞ ಡಾ. ಮಂಜುನಾಥ್, ಸಂಸದ ಪ್ರತಾಪ್ ಸಿಂಹ ಮುಂತಾದ ಜನಪ್ರಿಯ ಗಣ್ಯರು ವಿಶ್ವವಾಣಿ ಕ್ಲಬ್ ಹೌಸ್‌ನ ಸಂವಾದದಲ್ಲಿ ಪಾಲ್ಗೊಂಡಿದ್ದಾರೆ.
ಪ್ರತಿನ ಸಂಜೆ 7ರಿಂದ 9ರ ವರೆಗೆ ನಡೆಯುವ ವಿಶ್ವವಾಣಿ ಕ್ಲಬ್ ಹೌಸ್ ಸಂವಾದಕ್ಕಾಗಿ ಸಾವಿರಾರು ಮಂದಿ ಕಾತರದಿಂದ ಕಾಯುವಂತಾಗಿದೆ.
Key Words: Club House, Vishwavani Club, Vishweshwar Bhat, ಕ್ಲಬ್ ಹೌಸ್, ವಿಶ್ವವಾಣಿ ಕ್ಲಬ್, ವಿಶ್ವೇಶ್ವರ ಭಟ್
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ