ಬಾಕಾಹು ಮಾದಲಿ
ಪಾಕ: ಸುಜಾತಾ ಅಜ್ಜಪ್ಪ ಕುಲಗೋಡ
ಬೇಕಾಗುವ ಸಾಮಗ್ರಿಗಳು: ಒಂದು ಕಪ್ ಬಾಕಾಹು (ಬಾಳೆಕಾಯಿ ಹುಡಿ/ ಹಿಟ್ಟು), ಎರಡು ಕಪ್ ಬೆಲ್ಲದ ಪುಡಿ, ಒಂದು ಚಮಚ ಏಲಕ್ಕಿ ಪುಡಿ, ಒಂದು ಚಮಚ ಬಡೆಸೋಪು, ಎರಡು ಚಮಚ ಪುಟಾಣಿ, ಎರಡು ಚಮಚ ಕೊಬ್ಬರಿ ತುರಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಒಂದು ಕಪ್ ಬಾಳೆಕಾಯಿ ಹಿಟ್ಟನ್ನು ಚಪಾತಿಯ ಹಿಟ್ಟಿಗಿಂತಲೂ ಗಟ್ಟಿಯಾಗಿ ಕಲಸಿಕೊಳ್ಳಿ. ಅನಂತರ ಇದನ್ನು ಚಪಾತಿ ಲಟ್ಟಿಸುವಂತೆಯೇ ಲಟ್ಟಿಸಿ. ಆದರೆ ಇದು ಮಾಮೂಲಿ ಚಪಾತಿಗಿಂತಲೂ- ಸುಮಾರು ನಾಲ್ಕು ಪಟ್ಟು- ದಪ್ಪ ಇರಲಿ. ಲಟ್ಟಿಸಿದ ಚಪಾತಿಯನ್ನು ಬೇಯಿಸಿ. ಕಾವಲಿಯಿಂದ ತೆಗೆದು ಬಿಸಿಬಿಸಿ ಇರುವಾಗಲೇ ಲಟ್ಟಣಿಗೆಯಿಂದ (ಕೈಯಿಂದ ಮುಟ್ಟಲು ಆಗುವುದಿಲ್ಲ) ಲಟ್ಟಿಸಿಕೊಳ್ಳಿ. ಅದು ಬಿರುಕು ಬಿಟ್ಟು ಸಣ್ಣಸಣ್ಣ ತುಂಡುಗಳಾಗುತ್ತದೆ. ಆಮೇಲೆ ಇದನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿ. ಈ ಪುಡಿಯು ರವೆಗಿಂತ ದಪ್ಪ ಇರಬೇಕು. ಹೀಗೆ ಸಿದ್ಧವಾದ ಪುಡಿಗೆ ಬೆಲ್ಲದ ಪುಡಿ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಅನಂತರ ಏಲಕ್ಕಿ ಪುಡಿ, ಬಡೆಸೋಪು, ಪುಟಾಣಿ, ಉಪ್ಪು ಹಾಕಿ ಮಿಶ್ರ ಮಾಡಿದರೆ ಮಾದಲಿ ರೆಡಿ.
(ಪ್ರೇರಣೆ: ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು)
Key Words: Banana flour, Banana Powder, Bakahu, Recipe, ಬಾಕಾಹು, ಬಾಕಾಹು ಅಭಿಯಾನ, ಬಾಕಾಹು ಆಂದೋಲನ,
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ