ಬಾಕಾಹು ಬಾದಾಮ್ ಪೂರಿ
ಪಾಕ: ಶೈಲಜಾ ಮಹಾಲಿಂಗಯ್ಯ, ಶಿವಮೊಗ್ಗ
ಬೇಕಾಗುವ ಸಾಮಗ್ರಿ: ಬಾಕಾಹು- 1 (ಬಾಳೆಕಾಯಿ ಹುಡಿ/ ಹಿಟ್ಟು) ಬಟ್ಟಲು, ಚಿರೋಟಿ ರವೆ- 1/4 ಬಟ್ಟಲು, ತುಪ್ಪ- 4 ಚಮಚ, ಸಕ್ಕರೆ- 1 ಬಟ್ಟಲು, ಉಪ್ಪು- ಚಿಟಿಕೆ, ನೀರು- ಸ್ವಲ್ಪ
ಮಾಡುವ ವಿಧಾನ: ಬಾಕಾಹು, ಚಿರೋಟಿ ರವೆ, ತುಪ್ಪ (ಬಿಸಿ ಮಾಡಿ), ಮತ್ತು ಚಿಟಿಕೆ ಉಪ್ಪು, ನೀರು ಹಾಕಿ ಕಲಸಿ ಉಂಡೆ ಮಾಡಿಕೊಳ್ಳಿ. ಇದನ್ನು ಲಟ್ಟಿಸಿ ಮಡಚಿ ಎಣ್ಣೆಯಲ್ಲಿ ಕರೆಯಿರಿ.
ಸಕ್ಕರೆಯನ್ನು ನೀರಿನಲ್ಲಿ ಕರಗಿಸಿ ಒಂದೆಳೆ ಪಾಕ ಮಾಡಿಕೊಳ್ಳಿ. ಈ ಪಾಕದಲ್ಲಿ ಕರಿದಿಟ್ಟ ಪೂರಿಯನ್ನು ಎರಡು ನಿಮಿಷ ನೆನೆಸಿ ತೆಗೆದು, ಮೇಲೆ ಕೊಬ್ಬರಿ ತುರಿ ಉದುರಿಸಿ.
ಬಾಕಾಹು ಉಂಡೆ
ಬೇಕಾಗುವ ಸಾಮಗ್ರಿ: ಬಾಕಾಹು- 1 ಬಟ್ಟಲು, ಬಾದಾಮಿ ಪುಡಿ- 1/2 ಬಟ್ಟಲು, ಬೆಲ್ಲ ಅಥವಾ ಸಕ್ಕರೆ- 1 ಬಟ್ಟಲು, ಹಾಲು-ಸ್ವಲ್ಪ, ತುಪ್ಪ- ಸ್ವಲ್ಪ ಮತ್ತು ಏಲಕ್ಕಿ ಪುಡಿ -ಸ್ವಲ್ಪ
ಮಾಡುವ ವಿಧಾನ: ಬಾಕಾಹು ಮತ್ತು ಬಾದಾಮಿ ಪುಡಿ ಎರಡನ್ನೂ ತುಪ್ಪದಲ್ಲಿ ಸಣ್ಣ ಉರಿಯಲ್ಲಿ ಹುರಿಯಿರಿ. ಅದಕ್ಕೆ ಏಲಕ್ಕಿ ಪುಡಿ, ಬೆಲ್ಲ/ ಸಕ್ಕರೆ ಹಾಕಿ ಸ್ವಲ್ಪ ಹಾಲನ್ನು (ಬೇಕಾದರೆ) ಹಾಕಿ ಬಿಸಿ ಇರುವಾಗಲೇ ಉಂಡೆ ಕಟ್ಟಿ.
(ಪ್ರೇರಣೆ: ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು)
Key Words: Banana Flour, Banana Powder, Bakahu, Recipe, ಬಾಕಾಹು ಆಂದೋಲನ, ಬಾಕಾಹು ಅಭಿಯಾನ, ಬಾಳೆಕಾಯಿ ಹುಡಿ,
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ