ಸವಿರುಚಿ: ಬಾಕಾಹು ಹಾಲಿಟ್ಟು ಪಾಯಸ
ಪಾಕ: ತ್ರಿವಾಣಿ ಪ್ರಶಾಂತ ನಾಯರ್ಪಳ್ಳ
ಬೇಕಾಗುವ ಸಾಮಾನುಗಳು: ಬಾಳೆಕಾಯಿ ಹುಡಿ (ಬಾಕಾಹು) ಒಂದು ಲೋಟ, (ಕಾಲು ಲೀಟರಿನಷ್ಟು), ಬೆಲ್ಲ ಅರ್ಧ ಕಿಲೋ, ಒಂದು ದೊಡ್ಡ ಹಸಿ ತೆಂಗಿನಕಾಯಿ, ಅಕ್ಕಿ ಹುಡಿ ಅರ್ಧ ಗ್ಲಾಸ್ (ಬೇಕಾದರೆ), ತೆಂಗಿನ ಎಣ್ಣೆ ಎರಡು ಚಮಚ ಮತ್ತು ಚಿಟಿಕೆ ಉಪ್ಪು
ಮಾಡುವ ವಿಧಾನ: ಬಾಳೆಕಾಯಿ ಹುಡಿಗೆ ಒಂದೂವರೆ ಲೋಟ ನೀರು ಹಾಕಿ ಗಂಟು ಕಟ್ಟದಂತೆ ಮಿಶ್ರ ಮಾಡಿಕೊಳ್ಳಿ. ಚಿಟಿಕೆ ಉಪ್ಪು ಸೇರಿಸಿ. ಎಣ್ಣೆ ಹಾಕಿ ದಪ್ಪ ತಳ ಬಾಣಲೆಯಲ್ಲಿ ಗಟ್ಟಿಯಾಗುವ ತನಕ ಕಾಯಿಸಿ ಆರಲು ಬಿಡಿ. ಆರಿದಾಗ ಮೆದು ಅನಿಸಿದರೆ ಅಕ್ಕಿ ಹಿಟ್ಟು ಸೇರಿಸಿಕೊಂಡು ಚಕ್ಕುಲಿ ಹಿಟ್ಟಿನ ಹದಕ್ಕೆ ತನ್ನಿ. ಈ ಮಿಶ್ರಣವನ್ನು ಖಾರದ ಕಡ್ಡಿ ಒತ್ತುವಂತೆ ಒತ್ತಿ ಹಬೆಯಲ್ಲಿ ಬೇಯಿಸಿ ಆರಲು ಬಿಡಿ.
ತೆಂಗಿನ ತುರಿ ರುಬ್ಬಿ ಒಂದು ಮತ್ತು ಎರಡನೆಯ ತೆಂಗಿನ ಹಾಲು (ಒಂದನೆ ಅಂದರೆ ಮೊದಲನೆ ಬಾರಿ ರುಬ್ಬಿ ತೆಗೆದ ಹಾಲು. ಎರಡನೆಯದು ಪುನಃ ನೀರು ಹಾಕಿ ಹಿಂದಿದ ಹಾಲು) ತೆಗೆದುಕೊಳ್ಳಿ.
ಬೆಲ್ಲಕ್ಕೆ ಸ್ವಲ್ಪ ನೀರು ಹಾಕಿ ಪಾಕಕ್ಕೆ ಇಡಿ. ಇದಕ್ಕೆ ತಯಾರು ಮಾಡಿಟ್ಟ ಬಾಕಾಹು ಕಾರದ ಕಡ್ಡಿ ಹಾಕಿ ಮೂರು ನಿಮಿಷ ಸೌಟು ಹಾಕದೆ ಸಣ್ಣ ಉರಿಯಲ್ಲಿ ಕುದಿಯಲು ಬಿಡಿ. ಯಾಲಕ್ಕಿ ಹುಡಿ ಸೇರಿಸಿ. ಈಗ ಇದಕ್ಕೆ ಎರಡನೆ ತೆಂಗಿನಕಾಯಿ ಹಾಲು ಹಾಕಿ. ಕುದಿ ಬಂದಾಗ ಒಂದನೆ ಕಾಯಿ ಹಾಲು ಹಾಕಿ ಕುದಿಸಿ ಇಳಿಸಿ.
(ಪ್ರೇರಣೆ: ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು)
Key Words: Banana Flour, Banana Powder, Bakahu, ಬಾಕಾಹು ಆಂದೋಲನ, ಬಾಕಾಹು ಅಭಿಯಾನ, ಬಾಳೆಕಾಯಿ ಹುಡಿ, ಸವಿರುಚಿ,
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ