'ಬಾಕಾಹು ರವಾ ಇಡ್ಲಿ ಸಖತ್ ಆಗ್ತದೆ’
- ಕಾಸರಗೋಡು ಕೃಷಿಕ ಶ್ರೀಹರಿ ಭಟ್ ಸಜಂಗದ್ದೆ
ಮಾಡುವ ವಿಧಾನ:
1 : 2 ಪ್ರಮಾಣದಲ್ಲಿ ಉದ್ದಿನ ಬೇಳೆ ಮತ್ತು ಬಾಕಾಹು ರವೆ ಬಳಸಬೇಕು.
ನೀರು ಹೆಚ್ಚು ಸೇರಿಸದೆ ಉದ್ದಿನ ಹಿಟ್ಟು ಮಾಡಿಟ್ಟುಕೊಳ್ಳಬೇಕು.ಬಾಕಾಹು ರವೆಯನ್ನು ನೆನೆಸಿ ಬಟ್ಟೆಯಲ್ಲಿ ಹರವಿದ 5- 10 ನಿಮಿಷಗಳ ನಂತರ ಉದ್ದಿನ ಹಿಟ್ಟಿಗೆ ಸೇರಿಸಿ ಚೆನ್ನಾಗಿ ಕದಡುವುದು. ಸೌಟಿನಿಂದ ಕಡಿಯದೆ ಬೀಳುವಂತೆ ನೀರು ಸೇರಿಸಬಹುದು.
ರುಚಿಗೆ ತಕ್ಕಂತೆ ಉಪ್ಪು ಹಾಕಬೇಕು. ಆರೇಳು ಗಂಟೆಗಳ ನಂತರ ಹಿಟ್ಟು ಉಬ್ಬಿ ಬಂದಿರುವ ಹಂತದಲ್ಲಿ ಪುನಃ ಸರಿಯಾಗಿ ಕದಡಿ ಇಡ್ಲಿ ಹೊಯ್ದು ಪಾತ್ರೆಯಲ್ಲಿ ಬೇಯಿಸಿದರೆ ಮೆತ್ತಗಿನ ಇಡ್ಲಿ, ತೆಂಗಿನ ಚಟ್ನಿಯೊಂದಿಗೆ ಸವಿಯಲು ತುಂಬಾ ರುಚಿ.
(ಧನ್ಯವಾದಗಳು: ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು)
Key words: Banana Rava Idli, Banana Powder, Dry Banana Powder, ಬಾಕಾಹು, ಬಾಳೆಕಾಯಿ ಹುಡಿ, ಬಾಳೆಕಾಯಿ ರವೆ,
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ