ಪ್ರೊ. ಉಮೇಶ್ ಶೆಟ್ಟಿ ಕೊತ್ತಾಡಿ: ಶಿಸ್ತುಬದ್ಧ ವೃತ್ತಿ ಬದುಕಿನ ಸಾರ್ಥಕ 25 ವರ್ಷ

Upayuktha
0



ಕುಂದಾಪುರದ ಬಿ.ಬಿ ಹೆಗ್ಡೆ ಕಾಲೇಜು ಭಾರೀ ಸ್ಟ್ರಿಕ್ಟ್ ಮಾರಾಯ್ರೆ  ಎಂಬುದೊಂದು ಮಾತು ನೀವು ಕೇಳಿರಬಹುದು. ಆದರೆ ನಿಜವಾಗಿ ಅದು "strict ಅಲ್ಲ, discipline ಕಾಲೇಜು" ಎಂಬುದು ಶಿಕ್ಷಣ ಆಸಕ್ತರ ವಲಯದಲ್ಲಿ ಕೇಳಿ ಬರುತ್ತಿರುವ ಮಾತು. ಕಾಲೇಜಿಗೆ ಹಾಗೊಂದು discipline ವ್ಯವಸ್ಥೆ ರೂಪಿಸಿ, ಕಾಲೇಜಿನ ಗರಿಮೆ ಹೆಚ್ಚಿಸಿದ ಕೀರ್ತಿ ಸಲ್ಲುವುದು ಪ್ರಾಂಶುಪಾಲರಾದ ಕೊತ್ತಾಡಿ ಉಮೇಶ ಶೆಟ್ಟಿಯವರಿಗೆ‌.


ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ಅವರು ವೃತ್ತಿ ಜೀವನ ಆರಂಭಿಸಿದ್ದು 1996ನೆಯ ಇಸವಿ ಜುಲೈ ಐದನೇಯ ತಾರೀಖು. ಅಲ್ಲಿಂದ ನಿಟ್ಟೆ, ಆ ನಂತರ ಹನ್ನೊಂದು ವರ್ಷಗಳ ಕಾಲ ಆಳ್ವಾಸ್ ಸಂಸ್ಥೆಯಲ್ಲಿ ವಾಣಿಜ್ಯಶಾಸ್ತ್ರದ ವಿಭಾಗದ ಡೀನ್ ಆಗಿ ಸೇವೆ ಸಲ್ಲಿಸಿದವರು. ಇಪ್ಪತ್ತಮೂರು ವರ್ಷಗಳ ವೃತ್ತಿ ಬದುಕು ಮೂರೇ ಮೂರು ಸಂಸ್ಥೆಯಲ್ಲಿ ಸಾಗಿಬಂದ ಕಾರಣಕ್ಕೆ, ಬದುಕು ಶಿಸ್ತಿನಿಂದಲೇ ರೂಪುಗೊಂಡಿತ್ತು. ಅಂತಹದ್ದೆ ಶಿಸ್ತು ಈಗಿ‌ನ ವಿದ್ಯಾರ್ಥಿಗಳಲ್ಲೂ ಇದ್ದರೇ ಮಾತ್ರ ವಿದ್ಯಾರ್ಥಿಗಳ ಭವಿಷ್ಯದ ಬದುಕು ಖಂಡಿತ ಬೆಳಗುತ್ತದೆ ಎಂಬ ಆಶಯದಿಂದ ಕಾಲೇಜಿನಲ್ಲಿ ಶಿಸ್ತುಬದ್ಧ ವಾತಾವರಣ ಚಾಲ್ತಿಯಲ್ಲಿ ಇರಿಸಿದ್ದಾರೆ.


ವರ್ಷವೇ ಮೂವತ್ತರ ಗಡಿ ದಾಟದ ಅನೇಕ ಪ್ರಾಧ್ಯಾಪಕರುಗಳು ಇರುವ ತಂಡವನ್ನು  ಅವರದೇ ಜನರೇಶನ್‌ಗೆ ಒಗ್ಗಿಕೊಂಡಂತೆ ಸ್ನೇಹಪರವಾಗಿ ಮುನ್ನೆಡೆಸುವ, ಇವರ ವೃತ್ತಿ ಜೀವನದ ಅನುಭವವೇ ಬರೊಬ್ಬರಿ ಇಪ್ಪತೈದು ವರ್ಷಗಳು. ಶಿಸ್ತು ಕಾಲೇಜಿನ ಮೊದಲ ಅಧ್ಯಾಯ, ಅದು ಮಾತ್ರವೇ ಯಶಸ್ಸಿನ ಸೂತ್ರ ಎಂಬಂತೆ ಪಾಲಿಸಿಕೊಂಡು ಬರುತ್ತಿರುವ ಅವರ ವೃತ್ತಿ ಬದುಕಿಗೆ ಇಂದಿಗೆ ಇಪ್ಪತೈದು ವರುಷ. ಬಹಳ ದೀರ್ಘ ಅಲ್ಲದೇ ಇದ್ದರೂ; ಕಿರು ಅವಧಿಯಲ್ಲಿ ಅವರ Workaholic ಆಶಯದ ಆದಿಯಾಗಿ, ಅನೇಕ ಸಲಹೆಗಳು ಬದುಕಿನ ಕಲಿಕೆಗೆ ಪೂರಕವಾಗಿದ್ದವು ಮತ್ತು ಆಪ್ತವಾಗಿದ್ದವು. ಈ ಎಲ್ಲಾ ಸಮಾನ ಮನಸ್ಥಿತಿಯ ಕಾರಣಕ್ಕೆ ಬಹು ಬೇಗ ಹಿಡಿಸಿದರು.‌


ಸಂಸ್ಥೆಯ ಅಭಿವೃದ್ಧಿಗೆ ಸೃಜನಶೀಲ ಯೋಚನೆಗಳನ್ನು ಸದಾ ಸಾಕಾರಗೊಳಿಸುವ, ಸ್ನೇಹಪರ ವಾತಾವರಣದೊಂದಿಗೆ ಕಾರ್ಯನಿರ್ವಹಿಸುವ, ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಸದಾ ಕ್ರಿಯಾಶೀಲರಾಗಿ ಯೋಚಿಸುವ; ನಮ್ಮ ಕಾಲೇಜಿನ ಹೆಮ್ಮೆಯ ಪ್ರಾಂಶುಪಾಲರಾದ ಪ್ರೊ. ಕೊತ್ತಾಡಿ ಉಮೇಶ ಶೆಟ್ಟಿಯವರ ವೃತ್ತಿ ಬದುಕಿನ ಸಾರ್ಥಕ ಇಪ್ಪತೈದು ವರ್ಷಗಳಿಗೆ ಶುಭಾಶಯಗಳು ಸರ್. ಮುಂದಿನ ವೃತ್ತಿ ಜೀವನವು ಹೀಗೆ ಸಮರ್ಥತೆ ಮತ್ತು ಸಮೃದ್ಧತೆಯಿಂದ ಕೂಡಿರಲಿ ಎಂಬ ಶುಭ ಹಾರೈಕೆಗಳೊಂದಿಗೆ,

-ನಾಗರಾಜ್ ನೈಕಂಬ್ಳಿ


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top