ಎಬಿವಿಪಿ ಮಡಿಕೇರಿ ಶಾಖೆ ವತಿಯಿಂದ ಕಾರ್ಗಿಲ್ ವಿಜಯ ದಿವಸ ಆಚರಣೆ

Upayuktha
0


 

ಮಡಿಕೇರಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಡಿಕೇರಿ ಶಾಖೆಯ ವತಿಯಿಂದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದ ಅಂಗವಾಗಿ ನಗರದ ಜನರಲ್ ತಿಮ್ಮಯ್ಯ ಮ್ಯೂಸಿಯಂ ನ ಯುದ್ಧ ಸ್ಮಾರಕ ಭವನಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.


ಮುಖ್ಯ ಅತಿಥಿಗಳಾದ ಚಿ.ನ ಸೋಮೇಶ್ ರವರು ಕಾರ್ಗಿಲ್ ವಿಜಯ್ ಕಥನದ ಸನ್ನಿವೇಶವನ್ನು  ಕೊಡಗಿನ ಯೋಧರ ತ್ಯಾಗ ಬಲಿದಾನದ ವಿಚಾರಗಳನ್ನು ಸ್ಪೂರ್ತಿದಾಯಕವಾಗಿ ತಿಳಿಸಿಕೊಟ್ಟರು.


ಕಾರ್ಗಿಲ್ ಯುದ್ಧದಲ್ಲಿ ವೀರ ಮರಣ ಹೊಂದಿದ ಮಂಗೇರಿರ ಮೇಜರ್ ಮುತ್ತಣ್ಣನವರ ಸಹೋದರಿ ವೀಣಾ ಪೂವಯ್ಯ, ಚಂದ್ರ ಉಡೋತ್ , ಎಬಿವಿಪಿ ಕೊಡಗು ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೀರೇಶ್ ಅಜ್ಜಣ್ಣನವರ್, ಜಿಲ್ಲಾ ಸಹ ಸಂಚಾಲಕ್ ಪೊನ್ನಣ್ಣ, ಕರಣ್ ಕಾಳಪ್ಪ, ವಿಶ್ಮಾ, ಜನನಿ, ಸುಜೀಶ್, ಕೌಶಿಕ್, ಲಿಖಿತ್ ಇತರರು ಉಪಸ್ಥಿತರಿದ್ದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top