"ಅಧಿಕಾರ ಹಸ್ತಾಂತರ" ವಿಡಂಬನಾತ್ಮಕ ನಾಟಕ ವಿಮರ್ಶೆ

Upayuktha
0


ಈ ನಾಟಕದ ಸ್ಕ್ರಿಪ್ಟ್‌ ಬರೆದದ್ದು ಸುಮಾರು ಎರಡು ವರ್ಷಗಳ ಹಿಂದೆ. ಆದರೆ ಈ ನಾಟಕವನ್ನು ಕರುನಾಡ ರಾಜಕೀಯ ವೇದಿಕೆಯಲ್ಲಿ ಅತ್ಯಂತ ಯಶಸ್ವಿಯಾಗಿ ಪ್ರಯೇೂಗ ಮಾಡಿ ಆಡಿಸಿ ತೇೂರಿಸಿದ್ದು ಮಾತ್ರ ಮೊನ್ನೆ ನಿನ್ನೆ ಇಂದು.


ನಾಟಕದ ನಿಜವಾದ ಪೂರ್ವ ತಯಾರಿ ನಡೆಸಿದ್ದು ಇದೇ ಜುಲೈ 17 ರಂದು ದೆಹಲಿಯಲ್ಲಿ. ಅಂದು ನಾಟಕದ ಪ್ರಧಾನ ಹೀರೊಗಳಾದ ಅಪ್ಪ ಮಗ ದೆಹಲಿಯಲ್ಲಿ ಕೂತಿರುವ ನಾಟಕದ ಪ್ರಮುಖ ನಿರ್ದೇಶಕರನ್ನು ಕಂಡು ಹೂ ಗುಚ್ಚ ನೀಡಿ ನಮ್ಮ ಕರುನಾಡಿಗೆ ನಾಟಕ ವೀಕ್ಷಿಸಲು ಆಮಂತ್ರಣ ನೀಡಿ ಬಂದಿದ್ದರು.


ಈ ನಾಟಕ ಎಲ್ಲಿಂದ ಯಾರು ಎಲ್ಲಿಂದ ಶುರು ಮಾಡಬೇಕೆಂಬುವುದು ಬಹು ದೊಡ್ಡ ಹೆಡ್ಯೇಕ್ ಆಗಿತ್ತು. ಮಾತ್ರವಲ್ಲ ಈ ನಾಟಕ ತುಂಬಾ suspense ಆಗಿರಬೇಕು, ದುರಂತಮಯವಾಗಿರಬೇಕು ಕೊನೆಯವರೆಗೂ ಪ್ರೇಕ್ಷಕರನ್ನು ಹಿಡಿದು ಕೂರಿಸಿವಂತಿರಬೇಕು. ಅಂತೂ ಕೊನೆಗೂ ಸುಖಾಂತಮಯವಾಗಿ ಕೊನೆಗೊಳ್ಳುವಂತಿರಬೇಕು. ಆದರೂ ಕೊನೆಗೂ ನಾಟಕದ ಹೀರೊ ನಾಡಿನ ದೊರೆ ಗೆದ್ದ ಅನ್ನುವ ಹಾಗೆ ಭಾಸವಾಗಬೇಕು. ಇದು ಈ "ಅಧಿಕಾರ ಹಸ್ತಾಂತರ"ನಾಟಕದ ತಿರುಳು.


ದೃಶ್ಯ-1: ಈ ಕರುನಾಡ ದೊರೆಯ ಅಧಿಕಾರಕ್ಕೆ ಮಹಾ ಕಂಟಕ ಬಂದಿದೆ ಅನ್ನುವ ಗಾಳಿ ಸುದ್ದಿ ನಾಟಕದ ವೇದಿಕೆಯ ಹಿಂದಿನಿಂದ ಆಶರೀರವಾಣಿ ಕೇಳಿ ಬರುತ್ತದೆ. ಇದು ನಾಡಿನ ದೊರೆಯ ಕಿವಿಗೂ ಬೀಳುತ್ತದೆ.


ದೃಶ್ಯ-2: ಈ ಸುದ್ದಿಯನ್ನು ಕೇಳಿದ ನಾಡ ದೊರೆಯ ಹಿಂಬಾಲಕರು ಮುಂಬಾಲಕರು ನಾಡಿನಾದ್ಯಂತ ದೊಡ್ಡ ಸುದ್ದಿಯನ್ನೆ ಹಬ್ಬಿಸಿ ಬಿಡುತ್ತಾರೆ. ನಾಡಿನ ದೊರೆಯ ಪೀಠಕ್ಕೆ ಕಂಟಕ ಬಂದಿದೆ. ನಾಡಿನ ಧರ್ಮ ರಕ್ಷಣಾರ್ಥ ಕೂತ ಪುರೇೂಹಿತರು ಸಂತರು ನಾಡ ದೊರೆಯ ರಕ್ಷಣೆಗಾಗಿ ತಮ್ಮ ಧಮ೯ ಪೀಠವನ್ನು ಬದಿಗಿಟ್ಟು ಬೀದಿಗೂ ಬಂದು ಬಿಟ್ಟರು.


ದೃಶ್ಯ-3: ಅಂತೂ ಕೊನೆಗೂ ನಾಡಿನ ದೊರೆ ಪೀಠ ತ್ಯಾಗ ಮಾಡಲೇಬೇಕಾದ ಸಂದರ್ಭ ಬಂದೇ ಬಿಟ್ಟಿತು. ಇದನ್ನು ಕಂಡ ನಾಡ ದೊರೆಗಳನ್ನು ಸದಾ ವಿರೇೂಧಿಸುತ್ತಿದ್ದ ತುಂಡರಸರು ಕೂಡಾ ನಾಡ ದೊರೆಯನ್ನು ಮನಸಾರೆ ಹಾಡಿ ಹೊಗಳಲು ಶುರು ಮಾಡುತ್ತಾರೆ.


ದೃಶ್ಯ-4: ಕೊನೆಗೂ ಪೀಠ ಬಿಡ ಬೇಕಾದ ಪ್ರಸಂಗ ಬಂದೇ ಬಿಟ್ಟಿತು. ನಾಡ ದೊರೆ ಒಂದು ಉಪಾಯ ಮಾಡಿಯೇ ಬಿಟ್ಟ. ತನ್ನ ಜಾತಿ ಪೀಳಿಗೆಯ ಮತ್ತು ತನ್ನ ಮಾತು ಕೇಳ ಬಲ್ಲ ಇನ್ನೊಬ್ಬ "ರಾಜ"ನನ್ನು ತನ್ನ ಪೀಠದಲ್ಲಿ ವ್ಯವಸ್ಥಿತವಾಗಿ ಕೂರಿಸಿ ತಾನು "ಕಿಂಗ್ ಮೇಕರ್ ರೀತಿಯಲ್ಲಿ" ರಾಜ್ಯಾಡಳಿತದಲ್ಲಿ ಸುಖವಾಗಿರುವ ಹಾಗೆ ವೇದಿಕೆ ರೂಪಿಸಿಕೊಂಡೆ ಬಿಟ್ಟ.


ದೃಶ್ಯ-5: ಈಗ ನಾಡ ದೊರೆಯ ಸುಖಾಂತಮಯವಾದ ನಾಟಕ ನೇೂಡಿದ ಈ ರಾಜನ ವಿರೇೂಧಿಗಳಿಗೆ ನಾವು ತಪ್ಪಿ ಹೊಂಡಕ್ಕೆ ಬಿದ್ದಿದ್ದೇವೆ ಅನ್ನುವ ಅರಿಯುವಾಗಿ ಮತ್ತೆ ಅದೇ ರಾಜನನ್ನು ದೂಷಿಸುವ ತರದಲ್ಲಿ ಡಂಗುರ ಬಾರಿಸಿಯೇ ಬಿಟ್ಟರು. ಒಂದಂತೂ ಸತ್ಯ. ಈ ಅಧಿಕಾರ ಹಸ್ತಾಂತರ ನಾಟಕ ನೇೂಡಿದ ಪ್ರೇಕ್ಷಕರಿಗೆ ಈಗ ಅಧಿಕಾರ ಹಸ್ತಾಂತರ ನಾಟಕದ ಸತ್ಯದ ತಿರುಳು ಅರಿವಾಗಿದೆ. ಈ ನಾಟಕ ನೇೂಡಿ ನಾವು ಅತ್ತಿದ್ದು ವ್ಯರ್ಥವಾಯಿತು ಅನ್ನಿಸುತ್ತದೆ. ಇಂದು ಈ ಅಧಿಕಾರ ಹಸ್ತಾಂತರ ನಾಟಕಕ್ಕೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯುತ್ತಿದೆ.

-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top