ಹನ್ನೆರಡು ವರ್ಷಗಳಿಂದ ಬಾಕಾಹು- ಜೇನು ಚಾಕಲೇಟು ತಯಾರಿಸುತ್ತಿರುವ- ಮಧುಕೇಶ್ವರ್ ಹೆಗಡೆ
"ನಿನ್ನೆಯಷ್ಟೇ ಬಾಕಾಹು ಸಿಹಿಗಡುಬು ಮಾಡಿದ್ದೆವು. ಮನೆಯವರ ಮಾತು ಬಿಡಿ, ಬಂದ ಅತಿಥಿಗಳೂ ಬಹುವಾಗಿ ಮೆಚ್ಚಿಕೊಂಡರು. ಕಡ್ಲೆ ಹುಡಿ ಮತ್ತು ಬಾಕಾಹು (ಬಾಳೆಕಾಯಿ ಹುಡಿ/ ಹಿಟ್ಟು) ಸರಿಪ್ರಮಾಣದಲ್ಲಿ ಸೇರಿಸಿದ್ದೆವು."
ಈ ಅನುಭವ ಶಿರಸಿಯ ತಾರಗೋಡದ ಹತ್ತಿರದ ಕಲ್ಲಳ್ಳಿಯ ಜೇನು ಕೃಷಿಕ ಮಧುಕೇಶ್ವರ ಹೆಗಡೆ ಅವರದು. ಹೆಗಡೆಯವರಿಗೆ 'ಹೋಮ್ ಮೇಡ್ ಬಾಕಾಹು’ ಹೊಸತಲ್ಲ. ಅವರಲ್ಲಿ ಡ್ರೈಯರ್ ಇದೆ. 10- 12 ವರ್ಷದಿಂದೀಚೆಗೆ ಬಾಕಾಹು ಮತ್ತು ಜೇನು ಸೇರಿಸಿ ಒಂದು ರೀತಿಯ ಚಾಕಲೇಟ್ ಮಾಡಿ ಮಾರುತ್ತಿದ್ದಾರೆ. ಒಂದು ಚಾಕಲೇಟಿಗೆ 2 ರೂ. ಬೆಲೆ. ತನ್ನ ಜೇನು, ಜೇನಿನ ಉತ್ಪನ್ನಗಳ ಜತೆ ನೇರ ಬಿಕರಿ. ವರ್ಷಕ್ಕೆ ಅಂದಾಜು ಒಂದು ಕ್ವಿಂಟಾಲ್ ಬಾಕಾಹು- ಜೇನು ಚಾಕಲೇಟ್ ಮಾರುತ್ತಾರೆ. ಇದಕ್ಕವರು ಪ್ರತ್ಯೇಕ ಹೆಸರು ಕೊಟ್ಟಿಲ್ಲ.
"ಬಾಳೆಕಾಯಿಯ ಬೆಲೆ ಕುಸಿತದಿಂದ ಎಲ್ಲರೂ ಕಂಗೆಟ್ಟಿದ್ದೇವೆ. ಅದರ ನಡುವೆ ಬಾಕಾಹುವಿನ ಸುಲಭ ವಿದ್ಯೆ ತುಂಬ ಆತ್ಮವಿಶ್ವಾಸ ತಂದಿದೆ. ಅಡುಗೆ ಮನೆಯಲ್ಲಿ ಯಾವುದಾದರೂ ಹಿಟ್ಟು ಮುಗಿದಿದೆ ಅಂದುಕೊಳ್ಳಿ. ಅವಸರದಲ್ಲಿ ಪೇಟೆಗೆ ಓಡಬೇಕಿಲ್ಲ. ನಮ್ಮದೇ ಬಾಳೆಕಾಯಿಯ ಈ ಆಪದ್ಭಂಧು ಹಿಟ್ಟು ತಕ್ಷಣ ಬಳಕೆಗೆ ಬರುತ್ತದೆ", ಮಧುಕೇಶ್ವರ್ ಹೆಗಡೆ ತುಂಬು ಉತ್ಸಾಹದಲ್ಲಿ ಪ್ರತಿಕ್ರಿಯಿಸುತ್ತಾರೆ, "ನಮ್ಮ ಉಕ ಜಿಲ್ಲೆಯಲ್ಲಂತೂ ಬಾಕಾಹು ಮುಂದುವರಿಯುವುದು ನೂರಕ್ಕೆ ನೂರು ಗ್ಯಾರಂಟಿ"
ಮಧುಕೇಶ್ವರ್ ಹೆಗಡೆ ಅವರ ಸಂಪರ್ಕ: - +91 94812 26075
-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು
Key words: ಬಾಕಾಹು, ಬಾಳೆಕಾಯಿ ಹುಡಿ, ಬಾಕಾಹು ಆಂದೋಲನ, Banana Flour, Banana Powder, Banana Flour campaign, Baahu,
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ