ಬೆಂಗಳೂರು: ಪ್ರತಿಷ್ಠಿತ ಎಂ.ಎಸ್.ಎಂ.ಇ.ಸಿ.ಸಿ.ಐ. ವತಿಯಿಂದ ಗ್ಲೋಬಲ್ ಗೋಲ್ಡನ್ ಬಿಸಿನೆಸ್ ಎಕ್ಸಲೆನ್ಸಿ ಪ್ರಶಸ್ತಿಗೆ ಕನ್ನಡಿಗರಾದ ಬೆಂಗಳೂರಿನ ಪ್ರೊಟೆಕ್ಟ್ ಇನ್ಫ್ರಾಸ್ಟ್ರಕ್ಚರ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಸಿಎಂಡಿ ಡಾ. ರಘುನಾಥ್ ಎಸ್ ಬಿ ಅವರು ಆಯ್ಕೆ ಆಗಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭ ಆಗಸ್ಟ್ ತಿಂಗಳಲ್ಲಿ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿದೆ.
ಏಳು ಸದಸ್ಯರ ಒಳಗೊಂಡಿದ ತೀರ್ಪುಗಾರರ ತಂಡ ಇವರ ಆಯ್ಕೆಯನ್ನು ಮಾಡಿದೆ.
ಪರಿಸರ, ಪ್ಲಾಸ್ಟಿಕ್, ಇ ವೇಸ್ಟ್ ಆಟೋಮೊಬೈಲ್, ಬ್ಯಾಟರಿ ಮರುಬಳಕೆ ಇತ್ಯಾದಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುವ ಪ್ರಶಸ್ತಿ ಇದಾಗಿದ್ದು, ದೇಶದ 100 ಸಾಧಕರಿಗೆ ನೀಡಲಾಗುತ್ತಿದೆ. ಈ ಸಮಾರಂಭದಲ್ಲಿ 15 ದೇಶಗಳು ಭಾಗವಹಿಸಲಿದೆ.
ಪರಿಸರ ಸ್ನೇಹಿ ತಂತ್ರಜ್ಞಾನ ಮತ್ತು ಉತ್ಪನ್ನಗಳ ಆವಿಷ್ಕಾರ, ವಿನೂತನ ಶೈಲಿಯ ವಾಟರ್ ಪ್ರೂಫ್ ಮತ್ತು ಕಟ್ಟಡ ತ್ಯಾಜ್ಯ ಪುನರ್ ಬಳಕೆ ಕ್ಷೇತ್ರದಲ್ಲಿ ತಮ್ಮದೇ ವಿಶಿಷ್ಟ ಛಾಪನ್ನು ಮೂಡಿಸಿ ಈಗಾಗಲೇ ಡಾ. ರಘುನಾಥ್ ಅವರು ಜನಪ್ರಿಯರಾಗಿದ್ದಾರೆ.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ