ಸವಿರುಚಿ: ಬಾಳೆಕಾಯಿ ಹುಡಿಯಿಂದ ಏನೆಲ್ಲಾ ಮಾಡಬಹುದು ಗೊತ್ತಾ...? ನೀವೂ ಮಾಡಿನೋಡಿ

Upayuktha
0


ಬಾಳೆಕಾಯಿ ಹುಡಿಯನ್ನು ತಯಾರಿಸಿ ಅದರಿಂದ ನಾನಾ ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸಿದ ಶಿರಸಿಯ ಉತ್ಸಾಹಿ, ಪ್ರಯೋಗಶೀಲ ಗೃಹಿಣಿ ಆಶ್ರಿತಾ ಹೆಗಡೆ ಅವರು ತಮ್ಮ ಅನುಭವವನ್ನು ಉಪಯುಕ್ತ ನ್ಯೂಸ್ ಓದುಗರ ಜತೆ ಹಂಚಿಕೊಂಡಿದ್ದಾರೆ. ಓದಿ, ನೀವೂ ಈ ಪ್ರಯೋಗಗಳನ್ನು ಮಾಡಿ ಖುಷಿ ಹಂಚಿಕೊಳ್ಳಿ.


ಮೊದಲು ಬಾಳೆಕಾಯಿಯನ್ನು ಚೆನ್ನಾಗಿ ಸಿಪ್ಪೆ ತೆಗೆದು ಅದನ್ನು (ಅನ್ನ ತಿಳಿ ಬಸಿದ ನೀರು, ಹುಳಿ ಮಜ್ಜಿಗೆ ಮತ್ತು ಹುಳಿ ಪುಡಿ) ನೀರಿನೊಂದಿಗೆ ಹಾಕಬೇಕು. ಆಗ ಬಾಳೆಕಾಯಿ ಕಪ್ಪು ಆಗುವುದಿಲ್ಲ ಬಿಳಿ ಬಣ್ಣಕ್ಕೆ ತಿರುಗುತ್ತದೆ. ಬಾಳೆಕಾಯಿ ಸಿಪ್ಪೆ ತೆಗೆದು ಆದಮೇಲೆ ಮನೆಯಲ್ಲಿ ಇರುವ ಡ್ರೈಯರ್ ನ ಟ್ರೈ ಮೇಲೆ ಒಂದು ಪ್ಲಾಸ್ಟಿಕ್ ಹಾಕಿ ಬಾಳೆಕಾಯಿಯನ್ನು ಗಾಲಿ ಗಾಲಿ ಮಾಡಿ ಹರಡಿ ಒಣಗಿಸಬೇಕು, ನಂತರ ಬಾಳೆಕಾಯಿ ಒಣಗಿದ ಮೇಲೆ ತಾಳಿಯನ್ನು ತೂಕಮಾಡಬೇಕು. (ಕರೀಬಾಳೆ, G9, ನೇಂದ್ರನ್ ಬಾಳೆಕಾಯಿ ಬಳಸಬೇಕು)


ತದನಂತರ ಬಾಳೆಕಾಯಿ ತಾಳಿ ಒಣಗಿದ ಮೇಲೆ ಮಿಕ್ಸಿಗೆ ಅಥವಾ ಗಿರಣಿಗೆ ಹಾಕಿ ಪುಡಿ ಮಾಡಿಕೊಳ್ಳಬೇಕು, ಪುಡಿ ಮಾಡಿದ ನಂತರವೂ ಅದನ್ನು ಮತ್ತೆ ತೂಕ ಮಾಡಿಕೊಳ್ಳಬೇಕು.



ಬಾಳೆಕಾಯಿ ಪುಡಿಯಿಂದ ಅನೇಕ ತರಹದ ತಿಂಡಿ- ತಿನಿಸುಗಳು ಮಾಡಬಹುದು ಮತ್ತು ತುಂಬಾ ರುಚಿಕರವಾಗುತ್ತದೆ. ಕುರುಕುರೆ ತಿನಿಸುಗಳು ಮಕ್ಕಳಿಗೆ ತುಂಬಾ ಇಷ್ಟವಾಗಿತ್ತದೆ. ಈ ಬಾಳೆಕಾಯಿ ಹುಡಿಯಿಂದ ಸುಮಾರು ತಿಂಡಿ- ತಿನಿಸುಗಳು ಮಾಡಿದ್ದೇನೆ. ಅದು ಯಾವುದೆಂದರೆ: ಉಂಡೆ, ತಾಲಿಪಿಟ್ಟು, ಮಾಲ್ಟ್, ರೊಟ್ಟಿ, ದೋಸೆ, ಕಡಬು, ಮಣ್ಣಿ, ಹೋಳಿಗೆ, ಆಂಬಡೆ ಇಷ್ಟು ತಿಂಡಿ -ತಿನಿಸುಗಳು ಮಾಡಿದ್ದೇನೆ.


ಬಾಳೆಕಾಯಿ ಪುಡಿಯಿಂದ ತಯಾರಿಸಿದ ತಿನಿಸುಗಳು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಬಾಳೆಕಾಯಿ ಹುಡಿಯಿಂದ ದೇಹದ ತೂಕ ಕಡಿಮೆ ಮಾಡಿಕೊಳ್ಳಬಹುದು. ಡಯಾಬಿಟಿಸ್, ಸಕ್ಕರೆ ಕಾಯಿಲೆ ಹಾಗೂ ಇನ್ನು ಅನೇಕ ಕಾಯಿಲೆಗಳಿಗೆ ಇದು ಒಂದು ಮೂಲ ಔಷಧಿಯಾಗಿದೆ.


-ಆಶ್ರಿತಾ ಹೆಗಡೆ, ಶಿರಸಿ


Key words: Banana powder recipes, Banana Powder, ಬಾಳೆಕಾಯಿ ಹುಡಿಯ ರೆಸಿಪಿ, ಬಾಳೆಕಾಯಿ ಹುಡಿ, ಬಾಕಾಹು ತಿಂಡಿ, ಸವಿರುಚಿ

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top