ಪುಸ್ತಕ ಪರಿಚಯ: ವ್ಯೂಹ- ಪೌರಾಣಿಕ ಕಾದಂಬರಿ

Upayuktha
0

ಮೊನ್ನೆ ಭರಣ್ಯ ಮಾಷ್ಟ್ರು ಎಂದು ನಾವು ಕರೆಯುವ ಡಾ| ಹರಿಕೃಷ್ಣ ಭರಣ್ಯ ಅವರು ಬರೆದ "ವ್ಯೂಹ" ಎಂಬ ಪುಸ್ತಕವನ್ನು ನನ್ನ ಕೇಳಿಕೆಯಂತೆ ಕಳುಹಿಸಿ‌ ಕೊಟ್ಟಿದ್ದರು.

ನಿನ್ನೆ ಬೆಳಗ್ಗೆ ಕುಳಿತವ ಒಂದೇ ಉಸಿರಿಗೆ 97 ಪುಟಗಳನ್ನು ಮಾತ್ರವಲ್ಲ ಲೇಖಕನ ಮಾತು ಹಿಂಪುಟ ಮುಂಪುಟ ಎಲ್ಲಾ ಓದಿ ಮುಗಿಸಿದೆ.


ಮಹಾಭಾರತ ಯುದ್ಧದ ನಾಯಕ ಯಾರೆಂದು ಕೇಳಿದರೆ ನಿಸ್ಸಂಶಯವಾಗಿಯೂ ಅಭಿಮನ್ಯು ಅವನ ಬಗ್ಗೆಯೇ ಈ ಕಾದಂಬರಿ. ಅವರ ಪುಸ್ತಕದ ವಿಮರ್ಶೆ ಮಾಡುವಷ್ಟು ದೊಡ್ಡವ ನಾನಲ್ಲ. ಕೇವಲಾ ಆ ಪುಸ್ತಕದ ಬಗ್ಗೆ ನನ್ನ ಅಭಿಪ್ರಾಯವನ್ನು ಎರಡು ಮಾತಲ್ಲಿ ಹೇಳುವ ಉದ್ದೇಶ ನನ್ನದು.


ಇಲ್ಲಿ ನಾವು ಸಾಮಾನ್ಯವಾಗಿ ತಿಳಿದುದಕ್ಕಿಂತ ಬೇರಾಗಿಯೇ ಅಭಿಮನ್ಯುವಿನ ಚಿತ್ರಣ ಇದೆ. ಇದನ್ನು ಓದಿದಾಗ ಇದೇ ವಾಸ್ತವ ಇರಬಹುದು ಎನ್ನುವಷ್ಟು ಸಹಜತೆ ಇದೆ ಕಾದಂಬರಿಯಲ್ಲಿ. ಚಂದ್ರನ ಮಗನಾದ ವರ್ಚಸನೇ ಅಭಿಮನ್ಯುವಾಗಿ ಈ ಲೋಕಕ್ಕೆ ಬಂದುದನ್ನು ನಾನು ಇದೇ ಮೊದಲಾಗಿ ತಿಳಿದೆ.


ಇನ್ನು ಮಹಾಭಾರತ ಯುದ್ಧದ ಮೊದಲ ದಿನದಿಂದಲೇ ಅಭಿಮನ್ಯು ಯುದ್ದದಲ್ಲಿ ತೊಡಗಿದ್ದ ಎಂಬ ವಿಷಯ. ಇದೇ ವಾಸ್ತವವಾಗಿರ ಬಹುದಲ್ಲವೇ? ಅಂತಹ ಧೀರ ಯುದ್ಧ ಬಂದಾಗ ಅರಮನೆಯಲ್ಲಿ ಸುಖಲೋಲುಪನಾಗಿದ್ದ ಎಂಬುವುದಕ್ಕಿಂತಲೂ ಅವನೂ ಯುದ್ಧದಲ್ಲಿ ತೊಡಗಿದ್ದ ಎಂಬುದೇ ಹೆಚ್ಚು ವಾಸ್ತವವೆನಿಸುತ್ತದೆ. ಹಾಗೆಯೇ ಅರ್ಜುನನ ಮಗನಾದ ಅವನು ಯುದ್ಧ ವಿದ್ಯೆಯನ್ನು ತನ್ನ ತಂದೆಯಿಂದಲೇ ಕಲಿತ ಎಂಬುದೂ ಸಹಜವೆನ್ನಿಸುತ್ತದೆ.


ಇನ್ನು ಅನಿವಾರ್ಯವಾಗಿ ಧರ್ಮರಾಯ ಅಭಿಮನ್ಯುವಿನೊಡನೆ ಚಕ್ರವ್ಯೂಹವನ್ನು ಛೇದಿಸಲು ಹೇಳಿದುದು ಸಹಜವೆನ್ನಿಸುತ್ತದೆ. ಅವನ ರಕ್ಷಣೆಗೆ ಒಂದಿಗೆ ಸಾಗ ಬೇಕಿದ್ದವರನು ಜಯದೃಥ ಶಿವನಿಂದ ಪಡೆದ ವರದಿಂದಲಾಗಿ ತಡೆಯಲು ಸಾಧ್ಯವಾದುದೂ ಸಹಜವೇ ಅನ್ನಿಸಿತು. ಚಕ್ರವ್ಯೂಹದಿಂದ ಹೊರ ಬರುವ ವಿಧ್ಯೆ ಕಲಿತಾಗಿರದ ಅಭಿಮನ್ಯು ಆ ಚಕ್ರವ್ಯೂಹದೊಳಗೇ ವೀರ ಮರಣವನ್ನಪ್ಪ ಬೇಕೆಂದಿದ್ಧುದು ಮೊದಲೇ ಚಂದ್ರ ಹಾಕಿದ ಶರತ್ತು ಪ್ರಕಾರ ನಡೆಯಲೇಬೇಕಿತ್ತು.


ಅಂತೂ ವೀರ ಅಭಿಮನ್ಯುವಿನ ಕತೆಗೆ ಸಹಜತೆಯನ್ನು ತಂದು ಕೊಟ್ಟು ಭರಣ್ಯ ಮಾಷ್ಟ್ರು ಅಭಿಮನ್ಯುವಿಗೆ ನ್ಯಾಯ ಒದಗಿಸಿದ್ದಾರೆ ಎಂದೇ ಅನ್ನಿಸಿತು.


ಒಂದನೇ ಅಧ್ಯಾಯದಲ್ಲಿ ಚಂದ್ರನ ಸ್ವಗತ ಸುರುವಾದ ರೀತಿ ಯಾಕೋ ಅಷ್ಟು ಚೆನ್ನಾಗಿದೆ ಎನ್ನಿಸಲಿಲ್ಲ. ಎಲ್ಲೋ ನಾವು ಅರ್ಧದಿಂದ ಓದುತ್ತಿದ್ದೇವೇನೋ ಅನ್ನಿಸಿತು. ಒಂದು ಪೀಠಿಕೆ ಅಥವಾ ತಲೆಬರಹ ಇದ್ದರೆ ಉತ್ತಮವಾಗಿತ್ತೇನೋ ಅನ್ನಿಸಿತು. ಇದು ಕೇವಲಾ ನನ್ನ ಅಭಿಪ್ರಾಯ. ಭರಣ್ಯ ಮಾಷ್ಟ್ರು ಹಿರಿಯರು ಪ್ರಾಜ್ಜರು. ಆದ್ದರಿಂದ ಅದು ಸರಿ ಇರಲೂ ಬಹುದು. ಕೇವಲ ನನಗನ್ನಿಸಿದ್ದನ್ನು ಹೇಳಿದೆ ಅಷ್ಟೆ.


ಪುಸ್ತಕದ ಪ್ರಕಾಶಕರು: ನಿಸರ್ಗ ಟ್ರಸ್ಟ್ ಅಂಕನಹಳ್ಳಿ, ರಾಮನಗರ ತಾಲೂಕು, ರಾಮನಗರ ಜಿಲ್ಲೆ

ಮುದ್ರಣ: ಅನ್ನಪೂರ್ಣೇಶ್ವರಿ ಪ್ರಿಂಟರ್ಸ್‌, ರಾಜಾಜಿನಗರ, ಬೆಂಗಳೂರು.

ಒಟ್ಟು ಪುಟಗಳು: 102

ಬೆಲೆ: 85 ರೂ.ಗಳು

-ಎಡನಾಡು ಕೃಷ್ಣಮೋಹನ ಭಟ್ಟ

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top