ಶಿವಾನಂದ ಕಳವೆಯವರ ಕೃತಿ ಬಣ್ಣಿಸುವ ಇತಿಹಾಸ ಸತ್ಯ
ಎಂಟು ದಶಕದ ಹಿಂದೆ 2 ತಿಂಗಳು ಬಾಕಾಹು ರೊಟ್ಟಿಯಲ್ಲೇ ಬದುಕಿದ ಶೇಡಿದಂಟ್ಕಲ್ ಗಣೇಶಜ್ಜ!
ಉಕ ಜಿಲ್ಲೆಯ ಕೆಲವಾದರೂ ಹಳೆ ತಲೆಗಳು "ಏ ಏನಿದು ’ಬಾಕಾಹು’ ಎಂತೆಲ್ಲಾ ಅಂತೀರಾ? ಬಿಡ್ರೋ ಬಾಳೆಕಾಯಿ ಹಿಟ್ಟು ತಾನೇ? ಇದು ಹಿಂದೆಯೇ ಇತ್ತು ಕಣೋ. ನಮ್ಮ ಹಿರಿಯರೂ ಕಷ್ಟಕಾಲದಲ್ಲಿ ಇದನ್ನೇ ತಿಂದಿದ್ರು" ಎನ್ನತೊಡಗಿದ್ದಾರಂತೆ.
ಇದು ಸತ್ಯವೇ? ಲೇಖಕ ಶಿವಾನಂದ ಕಳವೆಯವರನ್ನೇ ಕೇಳಿ.
ಅವರು ತಮ್ಮ ’ಒಂದು ತುತ್ತಿನ ಕತೆ’ ಪುಸ್ತಕದಲ್ಲಿ ಹೀಗೆ ಬರೆದಿದ್ದಾರೆ, "ಅಕ್ಕಿಯ ತುಟಾಗ್ರತೆಯ ದಿನಗಳಲ್ಲಿ ಬದುಕುವ ಪರ್ಯಾಯ ದಾರಿ ಹೇಳಿದವರು ಸಿದ್ದಾಪುರ ಶೇಡಿದಂಟ್ಕಲ್ಲಿನ ಗಣೇಶ್ ಹೆಗಡೆ. ಬಾಳೆಕಾಯಿಯನ್ನು ಚೆನ್ನಾಗಿ ಒಣಗಿಸಿ ಹಿಟ್ಟು ಮಾಡಬಹುದು, ಇದನ್ನು ಗೋಧಿ ಹಿಟ್ಟಿನಂತೆ ರೊಟ್ಟಿ ತಯಾರಿಸಬಹುದೆಂದು ತಿಳಿಸಿದರು. ಇದನ್ನು ಜನರಿಗೆ ಮನದಟ್ಟು ಮಾಡುವುದಕ್ಕಾಗಿ 1940ರಲ್ಲಿ ಸತತ ಎರಡು ತಿಂಗಳ ಕಾಲ ಕೇವಲ ಬಾಳೆಕಾಯಿ ಹಿಟ್ಟಿನ ರೊಟ್ಟಿಯಲ್ಲಿ ಬದುಕಿ ತೋರಿಸಿದ ಸಾಹಸಿ ಗಣೇಶಜ್ಜ. "
ಆತ್ಮೀಯ ಮಿತ್ರ ಶಿವನ ನೆನಪಿನ ಶಕ್ತಿ ಚರಿತ್ರೆಯನ್ನು ಆವೇಶಕರವಾಗಿ ಬಣ್ಣಿಸುವ ಪರಿ ಕಣ್ಣಿಗೆ ಕಟ್ಟುತ್ತದೆ. ಪುಸ್ತಕದಲ್ಲಿ ಇಷ್ಟು ಬರೆದ ಅವರ ಮಸ್ತಕದಲ್ಲಿ ಇನ್ನೂ ಹೆಚ್ಚು ವಿವರಗಳಿದ್ದಾವು. ಆ ವಿವರಗಳನ್ನು ಅವರು ಈಗ ತಿಳಿಸಿಕೊಟ್ಟು ಉಕ ಮಾತ್ರವಲ್ಲ, ಇಡೀ ಕನ್ನಾಡಿಗೆ ಹಬ್ಬತೊಡಗಿರುವ 'ಬಾಕಾಹು' (ಬಾಳೆಕಾಯಿ ಹುಡಿ/ ಹಿಟ್ಟು) ಆಂದೋಳನಕ್ಕೆ ಇಂಧನ ಹೊಯ್ಯಲು ಅವರನ್ನು ವಿನಂತಿಸುತ್ತೇನೆ.
- ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು
Key words: Banana Flour, Banana Powder, ಬಾಕಾಹು ಅಭಿಯಾನ, ಬಾಕಾಹು ಆಂದೋಲನ, ಬಾಳೆಕಾಯಿ ಹುಡಿ, ಉತ್ತರ ಕನ್ನಡ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ