ಮನೆಯಲ್ಲೇ ಬಾಳೆಕಾಯಿ ಹುಡಿ ('ಬಾಕಾಹು’) ತಯಾರಿ ಕಲಿಸಿದ ವಿಜ್ಞಾನಿ ಏನು ಹೇಳುತ್ತಾರೆ?

Upayuktha
0



"ಕರ್ನಾಟಕದ ಮಹಿಳೆಯರ 'ಬಾಕಾಹು' ಕ್ರಾಂತಿ ಬಲು ದೊಡ್ಡದು"

-ಜಿಸ್ಸಿ ಜಾರ್ಜ್, ಗೃಹ ವಿಜ್ಞಾನ ವೀಶೇಷಜ್ಞೆ, ಕೃಷಿ ವಿಜ್ಞಾನ  ಕೇಂದ್ರ, ಆಲೆಪ್ಪಿ, ಕೇರಳ


ಜೂನ್ ಒಂದು. ತುಮಕೂರಿನ ಕೃಷಿಗೃಹಿಣಿ ನಯನಾ ಆನಂದ್ ಅವರಿಗೆ ಜಿಸ್ಸಿ ಜಾರ್ಜ್ ವಾಟ್ಸಪ್ ದನಿಸಂದೇಶದ ಮೂಲಕ 'ಬಾಕಾಹು’ ತಯಾರಿಯ ಉಪದೇಶ. ನಯನಾ ಮೊತ್ತಮೊದಲು ಬಾಳೆಕಾಯಿ ಹುಡಿ ತಯಾರಿಸಿದ್ದು 22 ಜೂನಿನಂದು. ಮೂರೇ ವಾರಗಳಲ್ಲಿ ಇದು ದೊಡ್ಡ ಕೃಷಿಕರ ನಡುವೆ ಆಂದೋಳನವಾಗಿ ಹಬ್ಬಿದೆ. ಕೃಷಿ ತಂತ್ರಜ್ಞಾನ ಸ್ವೀಕೃತಿಯ ಇತಿಹಾಸದಲ್ಲೇ ಬಹುಶ: ಇದೊದು ಅಭೂತಪೂರ್ವ ದಾಖಲೆ.


"ಕರ್ನಾಟಕದ ಮಹಿಳೆಯರು ಮಾಡಿದ ಕೆಲಸ ನಿಸ್ಸಂಶಯವಾಗಿಯೂ ಒಂದು ದೊಡ್ಡ ಕ್ರಾಂತಿಯೇ. ತಮ್ಮಲ್ಲಿನ ಬಾಳೆಕಾಯಿಯನ್ನು ಸುಲಿದು ಒಣಗಿಸಿ ಹುಡಿಮಾಡಿ ಅವರು ದಿನಕ್ಕೊಂದು ಉತ್ಪನ್ನ ಮಾಡುತ್ತಿರುವ ಅವರ ಆವೇಶ ತುಂಬ ಅಭಿನಂದನಾರ್ಹ."


"ಅವರ ಈ ಪ್ರಯಾಣದಲ್ಲಿ ಕೇವೀಕೆ ಆಲೆಪ್ಪಿ ಸದಾಕಾಲ ಅವರ ಬೆಂಬಲಕ್ಕಿದೆ. ಇನ್ನಷ್ಟು ಕೃಷಿಕರಿಗೆ ಈ ತರಬೇತಿಯನ್ನು ಕೊಡಮಾಡಬೇಕೆಂಬ ಆಗ್ರಹ ನಮ್ಮದು. ಈ ಬಗ್ಗೆ ಆಸಕ್ತರು ನಮ್ಮ ಕೇವೀಕೆಯನ್ನು ಸಂಪರ್ಕಿಸಬಹುದು. ಈಗ ದೂರ ಒಂದು ಸಮಸ್ಯೆಯೇ ಅಲ್ಲ. ಆಸಕ್ತರಿಗೆ ಇಲ್ಲಿ ಬಂದೋ ಅಥವಾ ಎಲ್ಲಿ ಬೇಕಾದರೂ ಕುಳಿತು ಆನ್ ಲೈನ್ ಮೂಲಕವೋ ಮಾಹಿತಿ- ತರಬೇತಿ ಪಡಕೊಳ್ಳಬಹುದು. "


ಜಿಸ್ಸಿ ಜಾರ್ಜ್ ತಿಳಿಸಿಕೊಡುವ ಬಾಕಾಹು ತಯಾರಿ ವಿಧಾನ ಕೆಳಗಿನಂತಿದೆ.


"ಒಂದು ಲೀಟರ್ ನೀರಿಗೆ ಕಾಲು ಲೀಟರ್ (ಬೇಯಿಸಿದ ಅನ್ನ ಬಸಿಯುವಾಗ ಸಿಗುವ) ಗಂಜಿಯ ನೀರು ಮತ್ತು ಹದಿನೈದು ಗ್ರಾಮಿನಷ್ಟು ಉಪ್ಪು ಸೇರಿಸಿಕೊಳ್ಳಬೇಕು. ಸುಲಿದ ಬಾಳೆಕಾಯಿಯನ್ನು ಇದರಲ್ಲಿ ಕಾಲು ಗಂಟೆ ಅದ್ದಿ ಇಟ್ಟು ನಂತರ ತೆಳುವಾಗಿ ಕತ್ತರಿಸಿ ಒಣಗಿಸಿ ಹುಡಿ ಮಾಡಬಹುದು. ಬಾಳೆಕಾಯಿಯ ಅರುಚಿ ತೆಗೆದು ನೈಜ ಬಣ್ಣ ಕಾಯ್ದುಕೊಳ್ಳುವುದಕ್ಕಾಗಿ ಈ ಆರೈಕೆ" 


-ಎಷ್ಟು ಸುಲಭ ಅಲ್ವೇ! ಮಾಡಿ ನೋಡಿ, ನಿಮ್ಮ ಅನುಭವಗಳನ್ನು ಅವಶ್ಯ ತಿಳಿಸಿ.


ಅದು ನಿಮ್ಮದರಂತಹ ನೂರಾರು ಕೃಷಿಕುಟುಂಬಗಳಿಗೆ ದೊಡ್ಡ ಪ್ರೇರಣೆ. ತಮ್ಮದೇ  ತೋಟದ ಪೌಷ್ಟಿಕ ಆಹಾರ ತಿನ್ನಲು ಬಾಗಿಲು ತೆರೆದುಕೊಡಬಲ್ಲ ಬದುಕಿನ ದೊಡ್ಡ  ಜ್ಞಾನೋದಯಕ್ಕೆ ನಾಂದಿ.

-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು




Key Words: Banana Flour, Banana Powder, Aleppy KVK, Krishi Vigyan Kendra, ಬಾಕಾಹು, ಬಾಳೆಕಾಯಿ ಹುಡಿ, ಕೃಷಿ ವಿಜ್ಞಾನ ಕೇಂದ್ರ, ಬಾಕಾಹು ಆಂದೋಲನ, ಬಾಕಾಹು ಅಭಿಯಾನ

(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top