ಬಾಕಾಹು ಬರ್ಫಿ ಮತ್ತು ಉಪ್ಪು ಸೊಳೆ ರೊಟ್ಟಿ
ಪಾಕ: ಆಶಾಗೌರಿ ಚಕ್ಕೋಡಬೈಲು
ಬರ್ಫಿ (ಹಿಂದೆ ಪ್ರಕಟಿಸಿದ್ದಕ್ಕಿಂತ ಬೇರೆ ರೀತಿಯದು)
ಸಾಮಗ್ರಿಗಳು: 1 ಕಪ್ ಬಾಕಾಹು, 1 ಕಪ್ ಗೋಧಿ ಹುಡಿ, 2 ಕಪ್ ಬೆಲ್ಲ, 2 ದೊಡ್ಡ ಚಮಚ ತುಪ್ಪ, 2 ಚಿಕ್ಕ ಚಮಚ ಕ್ಯಾಂಪ್ಕೋ ವಿನ್ನರ್ ಪುಡಿ.
ವಿಧಾನ: ಬಾಳೆಕಾಯಿ ಹುಡಿ ಮತ್ತು ಗೋಧಿ ಹುಡಿಯನ್ನು ತುಪ್ಪದಲ್ಲಿ ಪರಿಮಳ ಬರುವವರೆಗೆ ಹುರಿದಿಟ್ಟುಕೊಳ್ಳಬೇಕು. ನಂತರ ಬೆಲ್ಲವನ್ನು ಪಾಕ ಮಾಡಿ ಹುರಿದಿಟ್ಟ ಹುಡಿ ಮತ್ತು ವಿನ್ನರ್ ಪುಡಿಯನ್ನು ಬೆಲ್ಲದ ಪಾಕಕ್ಕೆ ಹಾಕಿ ಚೆನ್ನಾಗಿ ಮಗುಚಬೇಕು. ತಳ ಬಿಟ್ಟು ಬರುವಾಗ ತುಪ್ಪ ಸವರಿದ ತಟ್ಟೆಗೆ ಹಾಕಿ ಬಿಸಿ ಇರುವಾಗಲೇ ತುಂಡು ಮಾಡಿ.
ಉಪ್ಪು ಸೊಳೆ ರೊಟ್ಟಿ:
ಸಾಮಗ್ರಿಗಳು: 2, 3 ಮುಷ್ಟಿಯಷ್ಟು ಉಪ್ಪು ಬಿಡಿಸಿದ ಉಪ್ಪು ಸೊಳೆ, ಒಂದೂವರೆ ಕಪ್ ಅಕ್ಕಿ ಹುಡಿ, ಒಂದುವರೆ ಕಪ್ ಬಾಳೆಕಾಯಿ ಹುಡಿ, ಸ್ವಲ್ಪ ಕಾಯಿತುರಿ, 1 ಚಮಚ ಜೀರಿಗೆ.
ವಿಧಾನ: ಉಪ್ಪು ಸೊಳೆಯನ್ನು ಜೀರಿಗೆ ಜೊತೆ ಮಿಕ್ಸಿಯಲ್ಲಿ ರುಬ್ಬಿ. ಅಕ್ಕಿ ಹುಡಿ, ಬಾಳೆಕಾಯಿ ಹುಡಿ, ಕಾಯಿತುರಿಯನ್ನು ಮಿಕ್ಸ್ ಮಾಡಿ ರೊಟ್ಟಿ ಹಿಟ್ಟಿನ ಹದಕ್ಕೆ ಕಲಸಿ. ಬಾಳೆಲೆಯಲ್ಲಿ ತಟ್ಟಿ ಕಾವಲಿಯಲ್ಲಿ ಬೇಯಿಸಿ.
Key Words: Recipe, Banana Flour, Banana Powder, ಬಾಕಾಹು, ಬಾಳೆಕಾಯಿ ಹುಡಿ, ಸವಿರುಚಿ, ಬಾಕಾಹು ಆಂದೋಲನ,
(ಕೃತಜ್ಞತೆಗಳು: ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು)
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ