ಯಕ್ಷಾಕ್ಷರ ಯಾನ- ಹೃದಯ ರಾಗದ ತಿಲ್ಲಾನ

Upayuktha
0


ತುಳುನಾಡು ಎಂದಾಗ ಎಲ್ಲರ ಮನಸಿಗೆ ತಟ್ಟನೆ ಹೊಳೆಯುವ ವಿಚಾರಗಳಲ್ಲಿ ಯಕ್ಷಗಾನವೂ ಒಂದು.ಮನೋರಂಜನೆಯ ಮೂಲಕ ಮನೋವಿಕಾಸಕ್ಕೆ ಕಾರಣವಾಗುವ ಒಂದು ಸಂಪೂರ್ಣ ಕಲೆ ನಮ್ಮ ಯಕ್ಷಗಾನ.


ಯಕ್ಷಗಾನ ಕಲೆಯ ಬಗ್ಗೆ ತುಂಬಾನೇ ಆಸಕ್ತಿ ಇರುವ ನಾನು ಕಲೆಗೆ ಏನಾದ್ರೂ ಕೊಡುಗೆ ನೀಡಬೇಕು ಎಂಬ ಕನಸು ಕಾಣುತ್ತಿದ್ದೆ. ಯಕ್ಷಗಾನ ಕಲಾವಿದರ ಬಗ್ಗೆ ಸರಣಿ ಲೇಖನ ಬರೆಯುವ ಬಗ್ಗೆ ಯೋಚನೆ ಮಾಡಿದ್ದೆ. ಲೇಖವನ್ನು ಯಾವ ರೀತಿ ಬರೆಯಬೇಕು, ಏನೆಲ್ಲಾ ಮಾಹಿತಿ ಇರಬೇಕು ಎಂದು ಹೇಳಿಕೊಟ್ಟು ನನ್ನ ಕನಸಿಗೆ ಪ್ರೋತ್ಸಾಹ ಹಾಗೂ ಗುರುಗಳಾಗಿ ಮಾರ್ಗದರ್ಶನ ನೀಡಿದವರು ಯಕ್ಷಕವಿ, ವಾಗ್ಮಿ ಪ್ರೊ. ಪವನ್ ಕಿರಣ್ ಕೆರೆ ಹಾಗೂ ಯಕ್ಷಗಾನದ ಸವ್ಯಸಾಚಿ, ಯಕ್ಷ ದಶಾವತಾರಿ, ಯಕ್ಷ ಗುರು, ಯಕ್ಷ ಕವಿ, ಪ್ರಸಂಗಕರ್ತ, ನಿರ್ದೇಶಕ, ಭಾಗವತ ಪ್ರಸಾದ್ ಕುಮಾರ್ ಮೊಗೆಬೆಟ್ಟು.


ನನ್ನ ಈ ಸರಣಿ ಲೇಖನದಲ್ಲಿ ಇಂದಿಗೆ 50 ಲೇಖನಗಳನ್ನು  ಪೂರ್ಣಗೊಳಿಸಿರುವೆ. 15 ಏಪ್ರಿಲ್ 2020 ರಂದು ನಾನು ಬರೆದ ಪ್ರಥಮ ಲೇಖನವು ಪ್ರೊ. ಪವನ್ ಕಿರಣ್ ಕೆರೆ ಇವರ ನಗಾರಿ ಧ್ವನಿ ಪತ್ರಿಕೆಯಲ್ಲಿ ಪ್ರಕಟಗೊಂಡಿರುತ್ತದೆ. ನಂತರದ ದಿನಗಳಲ್ಲಿ ನಾನು ಬರೆದ 48 ಲೇಖನಗಳು ಪ್ರತೀ ವಾರ ಶ್ರೀಯುತ ಚಂದ್ರಶೇಖರ ಕುಳಮರ್ವ ಅವರ ಉಪಯುಕ್ತ ನ್ಯೂಸ್‌ ವೆಬ್‌ ಪೋರ್ಟಲ್ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ. ಶ್ರೀಯುತ ಚಂದ್ರಶೇಖರ ಕುಳಮರ್ವ ಇವರಿಗೆ ತುಂಬು ಹೃದಯದ ಧನ್ಯವಾದಗಳು. 2020 ಅಕ್ಟೋಬರ್ ನಲ್ಲಿ ೨೫ನೇ ಲೇಖನವಾಗಿ ರಂಗ ನಿಷ್ಠೆ, ಯಕ್ಷ ಕಿರೀಟಿ ಸುಬ್ರಾಯ ಹೊಳ್ಳ ಕಾಸರಗೋಡು ಇವರ ಲೇಖನ ಪ್ರಕಟಗೊಂಡಿರುತ್ತದೆ. ನನ್ನ ಈ ಸರಣಿ ಲೇಖನ ಮುಂದುವರೆದು ಇಂದು ತೆಂಕುತಿಟ್ಟು ಯಕ್ಷಗಾನ ರಂಗದ ಧ್ರುವ ತಾರೆ ಕಲಾವಿದರ ಕಾಮಧೇನು, ಪಾವಂಜೆ ಮೇಳದ ಪ್ರಧಾನ ಭಾಗವತರು ಶ್ರೀಯುತ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರ ಲೇಖನ ಪ್ರಕಟಗೊಳ್ಳುವ ಮೂಲಕ ಈ ಸರಣಿ ಲೇಖನದ 50ನೇ ಲೇಖನವನ್ನು  ಪೂರ್ತಿಗೊಳಿಸಿರುತ್ತೇನೆ. 50ನೇ ಲೇಖನವನ್ನು ಒಂದು ವಿಭಿನ್ನವಾಗಿ ಮಾಡಬೇಕು ಎಂಬ ಯೋಚನೆಯಿಂದ ರಸಪ್ರಶ್ನೆ ಮೂಲಕ ಆಯೋಜಿಸಲಾಯಿತು.


ರಸ ಪ್ರಶ್ನೆ ಕಾರ್ಯಕ್ರಮದ ಪ್ರಶ್ನೆ ಈ ರೀತಿ ಕೇಳಲಾಗಿತ್ತು:-


"ಯಕ್ಷ ಸಾಧಕರು ಸರಣಿ ಲೇಖನದ 50ನೇ ಲೇಖನ ಯಾವ ಕಲಾವಿದರ ಬಗ್ಗೆ ಪ್ರಕಟಗೊಳ್ಳುತ್ತದೆ?" ಎಂದು ಕೇಳಲಾಗಿತ್ತು.


ರಸಪ್ರಶ್ನೆ ಕಾರ್ಯಕ್ರಮದ ಸರಿಯಾದ ಉತ್ತರ:-

"ಕಲಾವಿದರ ಕಾಮಧೇನು, ಯಕ್ಷಗಾನ ರಂಗದ ಧ್ರುವ ತಾರೆ, ಪಾವಂಜೆ ಮೇಳದ ಪ್ರಧಾನ ಭಾಗವತರು ಶ್ರೀಯುತ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ".


ಸರಿಯಾದ ಉತ್ತರ ನೀಡಿ ವಿಜೇತರಾದವರ ಹೆಸರು:-

◆ ರಾಘವೇಂದ್ರ ಭಟ್ ಮರ್ಣೆ

◆ ವಿನೂತ ನಿತೇಶ್ ಪೂಜಾರಿ

◆ ಶಶಿಧರ್ ಕೆ

◆ ಸಂತೋಷ್ ಕುಮಾರ್

◆ ಮನ್ವಿತ್ ಶೆಟ್ಟಿ ಇರಾ.


ಸರಣಿ ಲೇಖನದ ವಿಜೇತರಿಗೆ ರವಿಶಂಕರ್ ವಳಕ್ಕುಂಜ ಅವರು ಬರೆದು ವಳಕ್ಕುಂಜ ಪ್ರಕಾಶನ ಮಾಡಾವು ಪುತ್ತೂರು ಇವರು ಪ್ರಕಟಿಸಿದ

● ಯಕ್ಷಗಾನ ಪ್ರಸಂಗ ದ್ರಶ್ಯಾವಳೀ

● ಯಕ್ಷಪಾತ್ರದೀಪಿಕಾ ಹಾಗೂ ಶ್ರೀಯುತ ಕೃಷ್ಣಪ್ರಕಾಶ ಉಳಿತ್ತಾಯ ಇವರು ಬರೆದ ಈಶಾವಾಸ್ಯಂ ಕಲಾ ಪ್ರಕಾಶನ ಇವರು ಪ್ರಕಟಿಸಿದ ಕರ್ನಾಟಕ ಯಕ್ಷಗಾನ ಅಕಾಡಮಿ ಬಹುಮಾನ ಪುರಸ್ಕೃತ ಕೃತಿ "ಅಗರಿ ಮಾರ್ಗ" ಪುಸ್ತಕವನ್ನು ಬಹುಮಾನವಾಗಿ ಕೊಡಲಾಗಿದೆ.

ವಿಜೇತರಿಗೆ ಅಭಿನಂದನೆಗಳು. ಸರಿಯಾದ ಉತ್ತರ ನೀಡಿದ 5 ಜನ ಅದೃಷ್ಟಶಾಲಿ ವಿಜೇತರಿಗೂ ಹಾಗೂ ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತೀ ಒಬ್ಬರಿಗೂ ಧನ್ಯವಾದಗಳು.


ನನ್ನ ಈ ಸರಣಿ ಲೇಖನ ಬರೆಯಲು ನನಗೆ ಪ್ರೋತ್ಸಾಹ ನೀಡಿದ ಪ್ರತೀ ಒಬ್ಬರಿಗೂ ಹಾಗೂ ಲೇಖನದಲ್ಲಿ ಪರಿಚಯಿಸಲ್ಪಟ್ಟಿರುವ ಪ್ರತೀ ಒಬ್ಬ ಕಲಾವಿದರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು ಹಾಗೂ ನನ್ನ ಈ ಸರಣಿ ಲೇಖನದಲ್ಲಿ ಕಲಾವಿದರ ಬಗ್ಗೆ ಮಾಹಿತಿ, ಫೋಟೋ, ವಿಡಿಯೋ ನೀಡಿ ಸಹಕರಿಸಿದ ಸರ್ವರಿಗೂ ತುಂಬು ಹೃದಯದ ಧನ್ಯವಾದಗಳು.


ನನ್ನ ಈ ಸರಣಿ ಲೇಖನದಲ್ಲಿ 50 ಕಲಾವಿದರ ಪರಿಚಯ ಮಾಡಿದ ವಿವರ:

೧.ಶ್ರವಣ್ ಕುಮಾರ್ ಕೊಳಂಬೆ.

೨.ಯಕ್ಷಪ್ರಿಯೆ ಅರ್ಷಿಯಾ

೩.ಮನೆಯನ್ನೇ ರಂಗಸ್ಥಳವನ್ನಾಗಿಸಿದ ಕಲಾವಿದರು; ನವ್ಯ ಹೊಳ್ಳ, ದಿವ್ಯ ಹೊಳ್ಳ, ದೀಪಾ ಹೊಳ್ಳ, ಆದಿತ್ಯ ಹೊಳ್ಳ.

೪.ಯಕ್ಷರಂಗದ ಧಿಗಿಣ ವೀರ ಲೋಕೇಶ್ ಮುಚ್ಚೂರು.

೫.ಯಕ್ಷರಂಗದ ದೇವಿ ಭಟ್ರು ರಮೇಶ್ ಭಟ್ ಬಾಯಾರು.

೬.ಬಹುಮುಖ ಪ್ರತಿಭೆ ವಿಕ್ರಮ್ ಮಯ್ಯ ಪೈವಳಿಕೆ.

೭.ಪಂಚರಾಜ್ಯ ಯಕ್ಷಪ್ರಭೃತಿ  ಕೆ ಗೋವಿಂದ ಭಟ್ ನಿಡ್ಲೆ.

೮.ಬಡಗುತಿಟ್ಟಿನ ಆಲ್ ರೌಂಡರ್ ಕಲಾವಿದ ನೀಲ್ಕೋಡು ಶಂಕರ ಹೆಗಡೆ.

೯.ಯಕ್ಷಪಟು ಸುಷ್ಮಾ ಮೈರ್ಪಾಡಿ.

೧೦.ಯಕ್ಷರಂಗದ ಯುವ ಪ್ರತಿಭೆ ಶರವೂರು ಶಿಖಿನ್ ಶರ್ಮ.

೧೧.ಯಕ್ಷರಂಗದ ಯುವ ಪುಂಡುವೇಷಧಾರಿ ಶಿವಾನಂದ ಶೆಟ್ಟಿ ಪೆರ್ಲ.

೧೨.ತೆಂಕುತಿಟ್ಟು ಯಕ್ಷಗಾನದ ಜೂ.ಪುತ್ತಿಗೆ ಶೈಲಿಯ ಸ್ವರ ಸಾಮ್ಯ ಉಳ್ಳ ಭಾಗವತರು ಶ್ರೀಯುತ ಮಹೇಶ ಜೆ ರಾವ್ ಕನ್ಯಾಡಿ.

೧೩.ತೆಂಕುತಿಟ್ಟು ಯಕ್ಷಗಾನದ ಅಗ್ರಗಣ್ಯ ಸಮರ್ಥ ಪುಂಡುವೇಷಧಾರಿ  ವಿಷ್ಣುಶರ್ಮ ವಾಟೆಪಡ್ಪು.

೧೪.ಸುಮಧುರ ಕಂಠದ  ಭಾಗವತರು ಶ್ರೀಯುತ ಚಂದ್ರಕಾಂತ್ ರಾವ್ ಮೂಡುಬೆಳ್ಳೆ.

೧೫.ತೆಂಕುತಿಟ್ಟು ಪ್ರಸಿದ್ಧ ಮಹಿಳಾ ಭಾಗವತರು ಭವ್ಯಶ್ರೀ ಕುಲ್ಕುಂದ.

೧೬.ಯಕ್ಷಸಂಸಾರ:- ಶ್ರೀಯುತ ಸತ್ಯನಾರಾಯಣ ಅಡಿಗ ಹಾಗೂ ಇವರ ಮಕ್ಕಳು ಶ್ರೀಮತಿ ಅಮೃತಾ ಅಡಿಗ, ಅನನ್ಯ ಅಡಿಗ, ಅಳಿಯ ಕೌಶಿಕ್ ರಾವ್ ಹಾಗೂ ಇವರ ತಮ್ಮ ಕೌಶಲ್ ರಾವ್.

೧೭.ಕೌಟುಂಬಿಕ ಕಥಾನಕಗಳ ಕಥಾಕರ್ತ ಅಲ್ತಾರು ನಂದೀಶ್ ಶೆಟ್ಟಿ.

೧೮.ಯಕ್ಷಲೋಕದ ಕೋಲ್ಮಿಂಚು ಪ್ರಕಾಶ್ ಮೊಗವೀರ ಕಿರಾಡಿ.

೧೯.ಬಡಗುತಿಟ್ಟಿನ ಯುವ ಭಾಗವತರು ಗಣೇಶ್ ಆಚಾರ್ ಬಿಲ್ಲಾಡಿ.

೨೦.ತೆಂಕುತಿಟ್ಟು ಯಕ್ಷಗಾನದ ಯುವ ಮದ್ದಳೆ ಹಾಗೂ ಚೆಂಡೆ ವಾದಕರು ಶ್ರೀಯುತ ಲವ ಕುಮಾರ್ ಐಲ.

೨೧.ಬಡಗುತಿಟ್ಟಿನ ಯುವ ಕಥಾಕರ್ತ ಅಕ್ಷಯ್ ಶೆಟ್ಟಿ ಮುಂಬಾರು.

೨೨.ಯಕ್ಷರಂಗದ ಯುವ ಕಲಾವಿದೆ ಶರಣ್ಯ ರಾವ್ ಶರವೂರು.

೨೩.ತೆಂಕು-ಬಡಗಿನ ಭಾಗವತರು ಶ್ರೀಯುತ ದಿನೇಶ್ ಭಟ್ ಯಲ್ಲಾಪುರ.

೨೪.ಯಕ್ಷಗಾನದ ಸರ್ವ ಸಮರ್ಥ ವೇಷಧಾರಿ ಮಂಜುನಾಥ್ ಭಟ್ ಬೆಳ್ಳಾರೆ.

೨೫.ರಂಗ ನಿಷ್ಠೆ,ಯಕ್ಷ ಕಿರೀಟಿ ಸುಬ್ರಾಯ ಹೊಳ್ಳ ಕಾಸರಗೋಡು.

೨೬.ಯಕ್ಷರಂಗದ ಪ್ರಸಿದ್ಧ ಮಹಿಳಾ ಕಲಾವಿದೆ ಶ್ರೀಮತಿ ಸಾಯಿಸುಮಾ ಎಂ ನಾವಡ ಕಾರಿಂಜ

೨೭.ಬಡಗುತಿಟ್ಟಿನ ಖ್ಯಾತ ಸ್ತ್ರೀ ವೇಷಧಾರಿ ಹಾಗೂ ಯಕ್ಷ ಗುರು ಶ್ರೀಯುತ ಮನೋಜ್ ಭಟ್.

೨೮.ಚೆಂಡೆಯ ಏಕಲವ್ಯ ಶ್ರೀಯುತ ಸುಜನ್ ಕುಮಾರ್ ಹಾಲಾಡಿ.

೨೯.ಬಹುಮುಖ ಪ್ರತಿಭೆ ಕಿಶನ್ ಅಗ್ಗಿತ್ತಾಯ

೩೦.ಯಕ್ಷಗಾನದ ಸವ್ಯಸಾಚಿ,ಯಕ್ಷ ದಶಾವತಾರಿ, ಯಕ್ಷ ಗುರು, ಯಕ್ಷ ಕವಿ, ಪ್ರಸಂಗಕರ್ತ, ನಿರ್ದೇಶಕ, ಭಾಗವತ ಪ್ರಸಾದ್ ಕುಮಾರ್ ಮೊಗೆಬೆಟ್ಟು.

೩೧.ತೆಂಕುತಿಟ್ಟು ಯಕ್ಷರಂಗದ ಯುವ ಭಾಗವತರು ಶ್ರೀಯುತ ಹರಿಪ್ರಸಾದ್ ಕಾರಂತ್ ಸರಪಾಡಿ.

೩೨.ಬಹುಮುಖ ಪ್ರತಿಭೆ ಅಜಿತ್ ಕೆರೆಕಾಡು

೩೩.ಯಕ್ಷ ನಾಟ್ಯ ಗುರು, ವೇಷಧಾರಿ ಶ್ರೀಯುತ ದಿವಾಣ ಶಿವಶಂಕರ ಭಟ್

೩೪.ಸುಮಧುರ ಕಂಠದ ಭಾಗವತರು ಶ್ರೀಯುತ ಪ್ರದೀಪ್ ಕುಮಾರ್ ಗಟ್ಟಿ.

೩೫.ಬಡಗುತಿಟ್ಟಿನ ಖ್ಯಾತ ಭಾಗವತರು ಸ್ವರ ನಿಧಿ ಶ್ರೀಯುತ ಪ್ರಸನ್ನ ಭಟ್ ಬಾಳ್ಕಲ್.

೩೬.ಮದ್ದಳೆ ಮಾಂತ್ರಿಕ ರಾಘವೇಂದ್ರ ಪರಮೇಶ್ವರ ಹೆಗಡೆ.

೩೭.ಯಕ್ಷ ಗುರು, ಸಂಘಟಕ, ಕಲಾ ಪೋಷಕ, ನಿರೂಪಕ ಶ್ರೀಯುತ ರವಿ ಅಲೆವೂರಾಯ ವರ್ಕಾಡಿ.

೩೮.ಯಕ್ಷರಂಗದಲ್ಲಿ ಮಿನುಗುತ್ತಿರುವ ಉಪನ್ಯಾಸಕಿ  ಶ್ರೀಮತಿ ವಿನುತ ನಿತೇಶ್ ಪೂಜಾರಿ.

೩೯.ಯಕ್ಷಕುವರಿ  ದಿಶಾ ಸಿ ಶೆಟ್ಟಿ ಕಟ್ಲ

೪೦.ಯಕ್ಷಗಾನದ  ಪ್ರಸಂಗಕರ್ತ ಶ್ರೀಯುತ ಬೇಳೂರು ವಿಷ್ಣುಮೂರ್ತಿ ನಾಯಕ್.

೪೧.ಯಕ್ಷರಂಗದ ಯುವ ವೇಷಧಾರಿ ಶ್ರೀಯುತ ರವಿಕುಮಾರ್ ಮುಂಡಾಜೆ.

೪೨.ಯಕ್ಷ ಮಾಣಿಕ್ಯ ಶ್ರೀಯುತ ರಾಕೇಶ್ ರೈ ಅಡ್ಕ.

೪೩.ತೆಂಕುತಿಟ್ಟು ಯಕ್ಷಗಾನ ರಂಗದ ಹಸನ್ಮುಖಿ ಕಲಾವಿದ  ಶ್ರೀಯುತ ಆನಂದ್ ಪೂಜಾರಿ ಕೊಕ್ಕಡ.

೪೪.ರಂಗದ ಚೆಲುವ ಹರೀಶ್ ಮೊಗವೀರ ಜಪ್ತಿ‌ .

೪೫. ಯಕ್ಷಸಂಸಾರ:- ಶಾಲಿನಿ ಹೆಬ್ಬಾರ್, ಜಯಪ್ರಕಾಶ್ ಹೆಬ್ಬಾರ್, ವರುಣ್ ಹೆಬ್ಬಾರ್.

೪೬.ಮದ್ದಳೆ ಮಾಂತ್ರಿಕ ಪರಮೇಶ್ವರ್ ಪ್ರಭಾಕರ್ ಭಂಡಾರಿ.

೪೭.ಉಭಯತಿಟ್ಟಿನ ಭಾಗವತರು ಶ್ರೀಯುತ ಕೃಷ್ಣ ಪ್ರಪುಲ್ಲ.

೪೮.ಮದ್ದಳೆಯ ನಾದ ಶ್ರೀಯುತ ಕೃಷ್ಣಪ್ರಕಾಶ ಉಳಿತ್ತಾಯ.

೪೯. ತೆಂಕುತಿಟ್ಟು ಯಕ್ಷಗಾನ ರಂಗದ ಭಾಗವತರು ಶ್ರೀಯುತ ಡಾ.ಸತೀಶ್ ಪುಣಿಂಚತ್ತಾಯ ಪೆರ್ಲ.

೫೦.ಕಲಾವಿದರ ಕಾಮಧೇನು, ಯಕ್ಷಗಾನ ರಂಗದ ಧ್ರುವ ತಾರೆ, ಪಾವಂಜೆ ಮೇಳದ ಪ್ರಧಾನ ಭಾಗವತರು ಶ್ರೀಯುತ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ.


ಕಲೆ - ಕಲಾವಿದರ ಮೇಲಿನ ಪ್ರೀತಿ- ಗೌರವದಿಂದ, ಇದೊಂದು ಸಣ್ಣ ಅಳಿಲುಸೇವೆ. ನಿಮ್ಮ ಪ್ರೀತಿಯ ಪ್ರೋತ್ಸಾಹ ಸದಾ ಹೀಗೇ ಇರಲಿ. ಮುಂದೆ ಆದಷ್ಟು ಕಲಾವಿದರನ್ನು ಪರಿಚಯಿಸುವ ಪ್ರಯತ್ನ ಮಾಡುತ್ತೇನೆ. ದೇವರ ಅನುಗ್ರಹ, ನಿಮ್ಮೆಲ್ಲರ ಸಲಹೆ ಸಹಕಾರವು ನನಗಿರಲಿ.


- ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು

+91 8971275651


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top