ಬಜಪೆ-ಕಟೀಲು ಕಡೆಗೆ ಹೋಗುವವರಿಗೆ ಬದಲಿ ರಸ್ತೆಗಳಲ್ಲಿ ಸಂಚರಿಸಲು ಸೂಚನೆ
ಮಂಗಳೂರು: ಕರಾವಳಿಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ನದಿಗಳು ತುಂಬಿ ಹರಿಯುತ್ತಿವೆ. ಪ್ರವಾಹದಿಂದಾಗಿ ಫಲ್ಗುಣಿ ನದಿಗೆ ಮರವೂರಿನಲ್ಲಿ ನಿರ್ಮಿಸಿದ್ದ ಸೇತುವೆ ಬಿರುಕುಬಿಟ್ಟಿದೆ. ಸೇತುವೆ ಭಾಗಶಃ ಕುಸಿಯತೊಡಗಿದ್ದು, ಈ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡಿದೆ.
ಮಂಗಳೂರು ನಗರದಿಂದ ಬಜಪೆ-ಕಟೀಲುಗಳಿಗೆ ತೆರಳುವ ಪ್ರಮುಖ ರಸ್ತೆ ಇದಾಗಿದ್ದು, ಹೊಸ ಸೇತುವೆಯ ನಿರ್ಮಾಣ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ನೀರಿನ ಹರಿವಿಗೆ ಅಡಚಣೆಯಾಗಿದ್ದು, ಸೇತುವೆಯ ಒಂದು ಭಾಗದ ಆಧಾರ ಸ್ಥಂಭಕ್ಕೆ ಹಾನಿಯಾಗಿದೆ. ಇದರಿಂದಾಗಿ ಸೇತುವೆ ಮೆಲೆ ಬಿರುಕು ಕಾಣಿಸಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಮಂಗಳೂರು ವಿಮಾನ ನಿಲ್ದಾಣ, ಕಟೀಲು ಭಾಗಕ್ಕೆ ಸಂಚಾರ ಸ್ಥಗಿತಗೊಂಡಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಸಂಚಾರ ಸ್ಥಗಿತಗೊಳಿಸಿದ್ದಾರೆ.
ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಬದಲಿ ಮಾರ್ಗವನ್ನು ಸೂಚಿಸಲಾಗಿದೆ. ಉಡುಪಿಯಿಂದ ಬರುವ ಪ್ರಯಾಣಿಕರು ಮೂಲ್ಕಿಯಲ್ಲಿ ಎಡಕ್ಕೆ ತಿರುಗಿ ಕಿನ್ನಿಗೋಳಿ-ಕಟೀಲು ರಸ್ತೆಯಾಗಿ ವಿಮಾನ ನಿಲ್ದಾಣಕ್ಕೆ ತೆರಳಬಹುದಾಗಿದೆ.
ಅದೇ ರೀತಿ ಮಂಗಳೂರಿನಿಂದ ತೆರಳುವವರು ನಂತೂರಿನಿಂದ ಕುಲಶೇಖರ-ಗುರುಪುರ ರಸ್ತೆಯಾಗಿ ಏರ್‌ಪೋರ್ಟ್‌ಗೆ ತೆರಳಬಹುದಾಗಿದೆ. ನಗರ ಪೊಲೀಸ್ ಆಯುಕ್ತ ಎನ್.ಶಶಿ ಕುಮಾರ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಡಾ.ಭರತ್ ಶೆಟ್ಟಿ, ಉಮಾನಾಥ್ ಕೋಟ್ಯಾನ್, ಮಾಜಿ ಎಂ.ಎಲ್.ಸಿ ಐವನ್ ಡಿಸೋಜಾ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು.
ಮರಳು ಮಾಫಿಯಾಗೆ ಮಂಗಳೂರಿನ ಇನ್ನೊಂದು ಸೇತುವೆ ಬಲಿಯಾಗಿದೆ. ನಗರದಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಅತ್ಯಂತ ಪ್ರಮುಖ ಸೇತುವೆಯೆ ಬಿರುಕು ಬಿಟ್ಟಿದೆ.ಕುಸಿಯುವ ಭೀತಿ ಎದುರಾಗಿದೆ. ರಸ್ತೆ ಸಂಚಾರ ಬಂದ್ ಆಗಿದೆ. ನಾಗರಿಕರ ಸತತ ಆಕ್ಷೇಪಗಳನ್ನು ಬಲವಂತವಾಗಿ ಮುಚ್ಚಿಹಾಕಿದ, ಮರಳು ಮಾಫಿಯಾದ ಬೆನ್ನೆಲುಬಾಗಿ ನಿಂತ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಅವಘಡಕ್ಕೆ ನೇರ ಹೊಣೆ.
-ಮುನೀರ್ ಕಾಟಿಪಳ್ಳ
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ