ಊರೂರುಗಳಲ್ಲಿ ಹಬ್ಬುತ್ತಿದೆ 'ಬಾಕಾಹು' ಹುಮ್ಮಸ್ಸು

Upayuktha
0

ಬಾಳೆಕಾಯಿಯ ಮೌಲ್ಯವರ್ಧನೆ ಪ್ರಯೋಗಗಳು ಗ್ರಾಮೀಣ ಮಟ್ಟದಲ್ಲಿ ಮತ್ತಷ್ಟು ಹಬ್ಬುತ್ತಿವೆ. ಇವುಗಳಿಗೆ ಪ್ರೇರಕ ಶಕ್ತಿಯಾಗಿ ನಿಂತವರು ಹಿರಿಯ ಕೃಷಿ ಪತ್ರಕರ್ತ ಶ್ರೀಪಡ್ರೆ. ಅಭಿವೃದ್ಧಿಯ ವಿಸ್ತರಣಾ ಪತ್ರಿಕೋದ್ಯಮದ ಹರಿಕಾರರಾಗಿರುವ ಅವರಿಂದ ಪ್ರೇರಣೆ ಪಡೆದ ಹಲವು ಮಂದಿ ಗೃಹೋದ್ಯಮಿಗಳು ಹೊಸ ಹೊಸ ಪ್ರಯೋಗಗಳಿಗೆ ಮುಂದಾಗಿದ್ದಾರೆ.

ಈ ಅಭಿಯಾನ ಹೀಗೆಯೇ ಮುಂದುವರಿಯಲಿ. ಕೃಷಿಕರ ಹಾಗೂ ಗ್ರಾಮೀಣ ಮಹಿಳೆಯರ ಆದಾಯ ವೃದ್ಧಿಗೆ ಇದೊಂದು ಉತ್ತಮ ಕೊಡುಗೆಯಾಗಲಿದೆ.


ಮನೆಮಟ್ಟದಲ್ಲೇ ಕೃಷಿಕರು ಸುಲಭವಾಗಿ ಬಾಳೆಕಾಯಿ ಹುಡಿ (ಬಾಕಾಹು) ತಯಾರಿಸಿ ಬಳಸಿಕೊಳ್ಳಬಹುದು.


ಮಿಕ್ಸಿ, ಮತ್ತು ಒಣಗಿಸುವ ಸೌಕರ್ಯ ಬೇಕು. ಮಳೆಗಾಲದಲ್ಲಿ ಡ್ರೈಯರ್ ಅನಿವಾರ್ಯ. ಬಿಸಾಕು ಬೆಲೆಗೆ ಮಾರುವುದಕ್ಕಿಂತ ಎಷ್ಟೋ ಉತ್ತಮ ಅಲ್ವೇ.


"ನಾವು ಮಾಡಲು ಆಗದಷ್ಟು ಕಷ್ಟ ಇದಲ್ಲ" ಎನ್ನುತ್ತಾರೆ ಈಗಾಗಲೇ ಇದನ್ನು ತಯಾರಿಸಿ ಬಳಸತೊಡಗಿರುವ ಕರ್ನಾಟಕದ ಅತ್ಯುತ್ಸಾಹಿ ಕೃಷಿಕ ಮಹಿಳೆಯರು.



   ಇದು ಚಿಕ್ಕ ಕೃಷಿ ಆಧಾರಿತ ಉದ್ದಿಮೆಯೂ ಆಗಲು ಸಾಧ್ಯ. ಬಾಕಾಹುವನ್ನು ಮನೆಯಲ್ಲಿ ಹತ್ತಾರು ರೀತಿಗಳಲ್ಲಿ ನಿತ್ಯೋಪಯೋಗ ಮಾಡಬಹುದು.


ಲಾಕೌಟ್ ಕಾಲದ ಬಾಕಾಹು ತಯಾರಿ ಮತ್ತು 'ಬಾ.ಕಾ.ಹು' ಪಾಕ ಪ್ರಯೋಗಗಳು ಭರದಿಂದ ‌ಮುಂದುವರಿಯುತ್ತಿವೆ.


(ಮಾಹಿತಿ ಕೃಪೆ: ಶ್ರೀಪಡ್ರೆ)


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top