ಬಾಳೆಕಾಯಿ ಹುಡಿ: ಮೌಲ್ಯವರ್ಧನೆಯಿಂದ ರೈತರಿಗೆ ಹೊಸ ಆದಾಯದ ಮೂಲ ವೃದ್ಧಿ

Upayuktha
0

ಪುತ್ತೂರಿನ ಪ್ರಯೋಗಶೀಲ ಗೃಹಿಣಿ ಉಮಾ ಪ್ರಸನ್ನ ಅವರು ಬಾಳೆಕಾಯಿ ಹುಡಿಯಿಂದ ತಯಾರಿಸಿದ ವಿವಿಧ ತಿನಿಸುಗಳಿವು.


ಮಂಗಳೂರು: ಇತ್ತೀಚಿನ ದಿನಗಳಲ್ಲಿ ಬಾಳೆ ಕೃಷಿಕರು ತಮ್ಮ ಬೆಳೆಗೆ ಬೆಲೆ ಸಿಗುತ್ತಿಲ್ಲ, ಬಾಳೆಗೊನೆಗಳು ಸೂಕ್ತ ಬೆಲೆಗೆ ಮಾರಾಟವಾಗುತ್ತಿಲ್ಲ ಎಂದು ಅವುಗಳನ್ನು ಕಡಿದುಹಾಕಿ ಗೊಬ್ಬರ ತಯಾರಿಸುವ ಕೆಲವು ಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ವರದಿಯಾಗಿದ್ದವು. ಇಂತಹ ಸನ್ನಿವೇಶದಲ್ಲಿ ಬಾಳೆಕಾಯಿಗಳ ಮೌಲ್ಯವರ್ಧನೆ ಹೇಗೆ ಮಾಡಬಹುದು ಎಂಬ ಬಗ್ಗೆ ಹಲವು ಕೃಷಿಕರು, ಗೃಹೋದ್ಯಮಗಳ ಆಸಕ್ತರು ಪ್ರಯೋಗಗಳನ್ನು ಮಾಡತೊಡಗಿದ್ದಾರೆ. ಇಂತಹ ಪ್ರಯೋಗಗಳ ಫಲಿತಾಂಶವಾಗಿ ಬಾಳೆಕಾಯಿಗಳನ್ನು ಒಣಗಿಸಿ ಪುಡಿ ಮಾಡಿ ಕಾಪಿಟ್ಟು ಅಗತ್ಯಕ್ಕೆ ತಕ್ಕಂತೆ ಬಳಸುವ ಅನ್ವೇಷಣಾ ಪ್ರವೃತ್ತಿಗಳೂ ಕಂಡುಬರುತ್ತಿವೆ.


ಇದು ಅತ್ಯಂತ ಸ್ವಾಗತಾರ್ಹ ಬೆಳವಣಿಗೆಯಾಗಿದ್ದು,  ಹಿರಿಯ ಅಭಿವೃದ್ಧಿ ಪತ್ರಕರ್ತ ಶ್ರೀಪಡ್ರೆ ಅವರು ಇಂತಹ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯ ಪ್ರಯೋಗಗಳಿಗೆ ಪ್ರೇರಣೆ ಹಾಗೂ ಮಾಹಿತಿ-ಮಾರ್ಗದರ್ಶನದ ಬೆಂಬಲ ನೀಡುತ್ತಿದ್ದಾರೆ. ಎನಿಟೈಮ್ ವೆಜಿಟೇಬಲ್ಸ್ (ಎಟಿವಿ) ಎಂಬ ವಾಟ್ಸಪ್‌ ಗುಂಪುಗಳನ್ನು ಅವರು ರಚಿಸಿದ್ದು, ಈ ಗ್ರೂಪ್‌ಗಳಲ್ಲಿ ಇಂತಹ ಹಲವು ಪ್ರೇರಣಾದಾಯಿ ಪ್ರಯೋಗಗಳು ನಡೆಯುತ್ತಿವೆ.


ಶಿರಸಿಯ ಪ್ರಗತಿಪರ ಕೃಷಿಕ ಸುಬ್ರಾಯ ಹೆಗಡೆ, ತುಮಕೂರಿನ ನಯನ ಆನಂದ್‌, ಪುತ್ತೂರಿನ ಉಮಾ ಪ್ರಸನ್ನ ಅವರಂತಹ ಉತ್ಸಾಹಿಗಳು ಬಾಳೆಕಾಯಿಯ ಪುಡಿ ತಯಾರಿಸುವ ಮತ್ತು ಅದನ್ನು ನಾನಾ ಬಗೆಯ ತಿಂಡಿ ತಿನಿಸುಗಳಲ್ಲಿ ಬಳಸುವ ಪ್ರಯೋಗ ನಡೆಸುತ್ತಿದ್ದಾರೆ.


ಕರಾವಳಿ ಭಾಗದ ಮನೆ ಮನೆಗಳಲ್ಲಿ ಇಂತಹ ಪ್ರಯೋಗಗಳು ನಡೆಯಬೇಕಿದ್ದು, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯ ಜತೆಗೆ, ಕೃಷಿಕರ ಆದಾಯ ವೃದ್ಧಿಗೂ ನೆರವಾಗಬಹುದು.


ಪುತ್ತೂರಿನ ಪ್ರಯೋಗಶೀಲ, ಉತ್ಸಾಹಿ ಗೃಹಿಣಿ ಉಮಾ ಪ್ರಸನ್ನ ಅವರು, ಬಾಳೆಕಾಯಿ ಹುಡಿಯ ವೈವಿಧ್ಯಮಯ ಐಟಂಗಳನ್ನು ತಯಾರಿಸಿದ್ದಾರೆ. ಬಾಳೆಕಾಯಿ ಹುಡಿ ಮತ್ತು ಆರಾರೂಟ್‌ ಡ್ರಿಂಕ್, ಬಾಳೆಕಾಯಿ ಹುಡಿಯ ಚಪಾತಿ, ಬಾಳೆಕಾಯಿ ಹುಡಿಯಿಂದ ಪೂರಿ, ಬಾಳೆಕಾಯಿ ಹುಡಿಯ ರೊಟ್ಟಿ, ಬಾಳೆಕಾಯಿ ಹುಡಿಯ ಪಂಚಕೇಸ್‌, ಬಾ.ಹು. ಕೇಕ್‌, ಬಾ.ಹು. ಪಾನ್‌ ಕೇಕ್‌ಗಳನ್ನು ತಯಾರಿಸಿದ್ದಾರೆ.


ಇವೆಲ್ಲವೂ ಅತ್ಯಂತ ರುಚಿಕರ ಹಾಗೂ ಆರೋಗ್ಯದಾಯಕವಾಗಿವೆ. ಬಾಳೆ ಕಾಯಿ ಹುಡಿಯಿಂದ ನಾನಾ ಪದಾರ್ಥಗಳನ್ನು ತಯಾರಿಸುವ ಪದ್ಧತಿ ವ್ಯಾಪಕವಾಗಿ ಆರಂಭವಾದರೆ, ನಗರಗಳಲ್ಲಿಯೂ ಇದಕ್ಕೆ ವ್ಯಾಪಕ ಬೇಡಿಕೆ ಬರಬಹುದು.

Key Words: Banana, Raw banana Powder, Banana Powder recipes, Value addition for Banana, ಬಾಳೆ ಕೃಷಿ, ಬಾಳೆಕಾಯಿ, ಮೌಲ್ಯವರ್ಧನೆ

-ಚಂದ್ರಶೇಖರ ಕುಳಮರ್ವ

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top