ಪಿವಿಎನ್ ಶತನಮನ: ಪಕ್ಷ ಮರೆತರೂ ದೇಶ ಮರೆಯದ ಮಾಜಿ ಪ್ರಧಾನಿ

Upayuktha
1

ಸಂಪೂರ್ಣ ದೇಶವೇ ನೆನಪಿಸಿಕೊಳ್ಳಬೇಕಾದ ಬಹುಭಾಷಾ ಪ್ರತಿಭಾ ಸಂಪನ್ನ, ಭಾರತದ ಆರ್ಥಿಕ ಉದಾರೀಕರಣದ ನೇತಾರ ಮಾಜಿ ಪ್ರಧಾನಿ ದಿವಂಗತ ಪಿ.ವಿ. ನರಸಿಂಹರಾವ್‌ ಅವರು ಈಗ ಬದುಕಿದ್ದಿದ್ದರೆ ನಿನ್ನೆಗೆ (ಜೂ.28) ಅವರಿಗೆ 100 ವರ್ಷ ಭರ್ತಿಯಾಗಿರುತ್ತಿತ್ತು. ಶತಮಾನೋತ್ಸವದ ಸಂದರ್ಭದಲ್ಲಿ ಅವರನ್ನು ನೆನಪಿಸಿಕೊಂಡವರು ಮಾತ್ರ ವಿರಳ. ಈಗಿನ ತೆಲಂಗಾಣದ, ಅಂದಿನ ಆಂಧ್ರಪ್ರದೇಶದಲ್ಲಿ 1921ರ ಜೂನ್ 28ರಂದು ಜನಿಸಿದವರು ಪಾಮುಲಪರ್ತಿ ವೆಂಕಟ ನರಸಿಂಹರಾವ್. ಇಂದು ಅವರು ನಮ್ಮ ಮುಂದಿಲ್ಲದಿದ್ದರೂ ಈ ದೇಶ ಅವರನ್ನು ನೆನಪಿಸಬೇಕಾದದ್ದು ನಮ್ಮೆಲ್ಲರ ಕತ೯ವ್ಯವೂ ಹೌದು.


ಕೆಲವೊಮ್ಮೆ ಕೆಲವು ನಾಯಕರು ಜನಮಾನಸದಿಂದ ದೂರವಾಗುತ್ತಾರೆ ಅದಕ್ಕೆ ಬಹು ಮುಖ್ಯ ಕಾರಣ ಅಂತಹ ನಾಯಕರುಗಳಿಗೆ ಜಾತಿ ಬೆಂಬಲವಿಲ್ಲ. ಮತೀಯ ಬೆಂಬಲವೂ ಇಲ್ಲ; ಪಕ್ಷದ ಬೆಂಬಲವೂ ಇಲ್ಲ, ಮಾತ್ರವಲ್ಲ ಅವರ ಜೀವಿತ ಕಾಲದಲ್ಲಿ ಅವರಿಷ್ಟು ಮಂದಿ ಅಭಿಮಾನಿಗಳನ್ನು ಸೃಷ್ಟಿ ಮಾಡಿ ಬಿಟ್ಟು ಹೇೂಗದಿರುವ ಕಾರಣವೂ ಇರಬಹುದು. ಹಾಗಾಗಿ ಇಂತಹ ನಾಯಕರು ಜನಮಾನಸದಿಂದ ಬೇಗನೆ ದೂರವಾಗುತ್ತಾರೆ ಅನ್ನುವುದಕ್ಕೆ ಇದು ಒಂದು ಜೀವಂತ ಸಾಕ್ಷಿ.


ಈ ದೇಶ ಕಂಡ ಹತ್ತನೇ ಲೇೂಕ ಸಭೆಯ ಹತ್ತನೆಯ ಪ್ರಧಾನಿ ಪಟ್ಟ ಸ್ವೀಕರಿಸಿದ ಕೀರ್ತಿ ಪಿ.ವಿ.ಎನ್‌ ಅವರಿಗೆ ಸಲ್ಲುತ್ತದೆ. ಈ ವ್ಯಕ್ತಿ ಯಾಕೆ ಜನಮಾನಸದಲ್ಲಿ ನಿಲ್ಲುತ್ತಾರೆ ಅಂದರೆ ಅವರಲ್ಲಿ ಇರುವ ಕೆಲವೊಂದು ವಿಶೇಷ ಪ್ರತಿಭೆ. ಮೂಲತಃ ವಕೀಲರು, ಬಹುಭಾಷಾ ವಾಗ್ಮಿಗಳು. ತೆಲುಗು ಅವರ ಮಾತೃಭಾಷೆ. ಇದರ ಜೊತೆಗೆ ಪ್ರಾದೇಶಿಕವಾಗಿ ಮಾತನಾಡುವ ಕನ್ನಡ, ಮರಾಠಿ, ಒರಿಯಾ, ಬಂಗಾಲಿ, ಉದು೯, ಇದರೊಂದಿಗೆ ಹಿಂದಿ, ಸಂಸ್ಕೃತ ಇಂಗ್ಲಿಷ್, ಪಶಿ೯ಯನ್, ಮುಂತಾದ 17 ಭಾಷೆಗಳಲ್ಲಿ ವ್ಯವಹರಿಸಬಲ್ಲ ಸಾಮರ್ಥ್ಯವಿದ್ದ  ಏಕೆೈಕ ಪ್ರಧಾನಿ ಅಂದರೆ ಅವರು ಪಿ.ವಿ.ಎನ್‌ ಅವರು.


1991ರಿಂದ 1996ರವರೆಗೆ ಐದು ವರುಷಗಳ ಪೂಣಾ೯ವಧಿ ಪ್ರಧಾನಿಗಳಾಗಿ ವಿಶ್ವ ಆಥಿ೯ಕ ಶೀತಲ ಸಮರದಲ್ಲಿ ಭಾರತವನ್ನು ಮುನ್ನಡೆಸಿದ ಹೆಗ್ಗಳಿಕೆ ಇವರದ್ದು. ಅಂದು ಇವರ ಸಹಾಯಕ್ಕೆ ಬಲಗೆೈಯಾಗಿ ನಿಂತವರು ಅಂದಿನ ವಿತ್ತ ಸಚಿವ ಮನಮೇೂಹನ ಸಿಂಗ್‌ರು. ಇಡೀ ಜಗತ್ತು80-90ರ ದಶಕದಲ್ಲಿ ಜಾಗತೀಕರಣದ ಅಲೆಯಲ್ಲಿ ಮುಳುಗುತ್ತದೊ ತೇಲುತ್ತದೊ ಎಂಬ ಭೀತಿಯಲ್ಲಿ ಇರಬೇಕಾದರೆ ಭಾರತದ ಆಥಿ೯ಕ ತಾಂತ್ರಿಕ ನಿಲುವನ್ನು ಅಮೆರಿಕದಂತಹ ಶ್ರಿಮಂತ ರಾಷ್ಟ್ರಗಳಿಗೆ ಸ್ವಷ್ಟವಾಗಿ ವಿವರಿಸಿದವರು ಈ ಇಬ್ಬರು ನಾಯಕರು ಅನ್ನುವುದನ್ನು ಇಂದು ನಾವು ನೆನಪಿಸಲೇ ಬೇಕು.


ಪಿ.ವಿ.ಪ್ರಧಾನಿ ಪಟ್ಟಕ್ಕೆ ಏರಿದ್ದೇ ಒಂದು ಅಚಾನಕ ಸಂದಭ೯ವೆಂದು ವಿಶ್ಲೇಷಿಸುವವರು ಇದ್ದಾರೆ. ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆಯಾದ ಸಂದರ್ಭದಲ್ಲಿ 1991ರಲ್ಲಿ ನಡೆದ ಲೇೂಕಸಭಾ ಚುನಾವಣೆ.ಈ ಅನುಕಂಪದ ಅಲೆಯಲ್ಲೂ ಅಂದು ಕಾಂಗ್ರೆಸ್ ಗಳಿಸಿ ಕೊಂಡ ಸ್ಥಾನ ಕೇವಲ 234. ಸರಳ ಬಹುಮತವಿರದ ಹೊತ್ತಿನಲ್ಲಿ ಕೆಲವೊಂದು ಪ್ರಾದೇಶಿಕ ಪಕ್ಷಗಳ ಬೆಂಬಲದೊಂದಿಗೆ ಕಾಂಗ್ರೆಸ್ ಅಧಿಕಾರ ಕಟ್ಟಲು ಮುಂದಾಗುತ್ತದೆ. ಆದರೆ ಕಾಂಗ್ರೆಸ್ನಲ್ಲಿ ಯಾರೂ ಪ್ರಧಾನಿಯಾಗುವ ಹೆಚ್ಚಿನ ಉಮೇದ್ವಾರಿಕೆ ತೋರದ ಕಾರಣ ಚುನಾವಣೆಗೆ ಸ್ಪಧಿ೯ಸದೇ ಹೊರಗಿದ್ದ ಪಿ.ವಿ.ನರಸಿಂಹರಾವ್ ರವರನ್ನು ಪ್ರಧಾನಿ ಹುದ್ದೆ ಸ್ವೀಕರಿಸ ಬೇಕೆಂಬ ಬೆಂಬಲ ವ್ಯಕ್ತವಾಯಿತು.


ಸಂಸತ್ತಿನ ಸದಸ್ಯರಲ್ಲದ ಪಿ.ವಿ.ಎನ್ ವಿಧ್ಯುಕ್ತವಾಗಿ ಪ್ರಧಾನಿಗಳಾಗಿ ಅಧಿಕಾರಕ್ಕೆ ಏರಿ ಮುಂದೆ ಆಂಧ್ರದ ನಂದ್ಯಾಲದಿಂದ ಲೇೂಕಸಭೆಗೆ ಚುನಾಯಿತರಾಗಿ ಬಂದರು. ರಾಜೀವ್‌ ಗಾಂಧಿವರು ಹತ್ಯೆಯಾದ ಕಾಲ ಘಟದಲ್ಲಿ ಸೇೂನಿಯಾರಿಗೂ ಕುಾಡಾ ಹೆಚ್ಚೇನೂ  ರಾಜಕೀಯದ ಆಸಕ್ತಿ ಹಾಗೂ ಒಳ ಹರಿವಿನ ಪರಿಚಯವೂ ಕಡಿಮೆ ಇದ್ದ ಕಾರಣ ಪಿ.ವಿ.ಎನ್‌ ಪ್ರಧಾನಿಯೂ ಆದರು ಮಾತ್ರವಲ್ಲ ಸ್ವತಂತ್ರವಾಗಿ ಯೇೂಚಿಸಿ ಕೆಲವೊಂದು ನಿಧಾ೯ರ ತೆಗೆದುಕೊಳ್ಳುವ ಕಾಲಾವಕಾಶವೂ ಪ್ರಾಪ್ತವಾಯಿತು ಅನ್ನುವುದು ವಿಶ್ಲೇಷಕರ ಅಭಿಮತವೂ ಹೌದು.


ಈ ಸಮ್ಮಿಶ್ರ ಸರ್ಕಾರವನ್ನು ಐದು ವರುಷ ಮುನ್ನಡೆಸಿದ್ದೇ ದೊಡ್ಡ ಸಾಧನೆಯೂ ಹೌದು. ಹಾಗಂತ ನಮ್ಮ ಬಹು ಭಾಷಾ ಪಂಡಿತರ ರಾಜಕೀಯ ಬದುಕಿನಲ್ಲಿ ಕಪ್ಪು ಚುಕ್ಕೆ ಇಲ್ಲವೆಂದು ಅಥ೯ವಲ್ಲ. ಅಂದು ಲಕ್ಕೂ ಭಾಯಿಯವರ ಉಪ್ಪಿನಕಾಯಿ ಭರಣಿಗೆ ಕೆೈಹಾಕಿ ಸುಟ್ಟು ಕೊಂಡು ಕೇೂಟು೯ ಮೆಟ್ಟಲು ಏರಿದ ಪ್ರಧಾನಿ ಎಂಬ ಅಪಕೀತಿ೯ಯೂ ಇವರಿಗೆ ಪ್ರಾಪ್ತವಾಗಿದೆ." ದೇಶದ ಪ್ರಧಾನಿಯಾಗಿದ್ದವರು ಕೇೂಟಿ೯ಗೆ ಬರುವುದು ಅವಮಾನ ಎಂದು ವಾದ ಮಂಡಿಸಿದ ಇವರ ವಕೀಲರು ದಿಲ್ಲಿಯ ವಿಜ್ಞಾನ ಭವನವನ್ನೇ ಕೇೂಟಾ೯ಗಿ ಪರಿವತಿ೯ಸಿ ಅಲ್ಲಿಗೆ ಹಾಜರಾದವರು ನಮ್ಮ ಬಹು ಭಾಷಾ ಪಂಡಿತರು". ಹಾಗಂತ ಇದನ್ನೇ ದೊಡ್ಡ ಹಗರಣ ಭ್ರಷ್ಟಾಚಾರವೆಂದೂ ಹೇಳುವ ಪರಿಸ್ಥಿತಿಯಲ್ಲಿ ಇಂದು ನಾವಿಲ್ಲ. ಪಿ.ವಿ.ಎನ್ ಅವರು ಕೇವಲ ಉಪ್ಪಿನಕಾಯಿ ಭರಣಿಯನ್ನೆ ನುಂಗಿ ನೀರು ಕುಡಿದಿದ್ದು. ಆದರೆ ಇವರ ಅನಂತರದ ಕಾಲದಲ್ಲಿ ಇಡೀ ಧರಣಿಯನ್ನೆ ನುಂಗಿ ನೀರು ಕುಡಿದ ಭೂಪರು ಹುಟ್ಟಿ ಬಂದಿರುವ ಉದಾಹರಣೆ ಸಾಕಷ್ಟು ಇರುವಾಗ ನಮ್ಮ ಬಹು ಭಾಷಾ ಪಂಡಿತರು ಪಾಪ ಅನ್ನಿಸಿಕೊಳ್ಳುವುದು ಸಹಜ ತಾನೇ..?


ಕಾಲದ ವಿಪಯಾ೯ಸವೆಂದರೆ ಯಾವ ಪಕ್ಷವನ್ನು ನಂಬಿ ಬೆಳೆದು ಬಂದರೊ ಅದೇ ಪಕ್ಷದವರು ಅಂತಿಮ ಗಳಿಗೆಯಲ್ಲಿ ಮರೆತದ್ದು ಮಾತ್ರವಲ್ಲ ಇವರ ಪಾಥಿ೯ವ ಶರೀರವನ್ನು ಕೂಡಾ ಪಕ್ಷದ ದೆಹಲಿಯ ಕಛೇರಿಯ ಪರಿಸರದಲ್ಲಿ ಸಾವ೯ಜನಿಕ ವೀಕ್ಷಣೆ ಇಡಲು ಅವಕಾಶವೇ ನೀಡದೇ ಇರುವುದು ಪಕ್ಷದ ದೃಷ್ಟಿಯಿಂದ ದುರಂತ ನಾಯಕನೆನ್ನಿಸಿ ಕೊಂಡರು. ಇಂದು ಈ ದೇಶ ಕಂಡ ಉದಾರತೆಯ ಆರ್ಥಿಕ ಹರಿಕಾರನನ್ನು ನೆನಪಿಸಿಕೊಳ್ಳ ಬೇಕಾದದ್ದು ನಮ್ಮೆಲ್ಲರ ಕತ೯ವ್ಯವೂ ಹೌದು.


-ಪ್ರೊ ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಉಡುಪಿ

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

1 Comments
  1. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿಯವರ ಲೇಖನ ಸಕಾಲಿಕವಾಗಿ ಮೂಡಿಬಂದಿದ್ದು,ಒಬ್ಬ ರಾಜಕೀಯ ಮುತ್ಸಿದ್ದಿ ಹಾಗೂ ದೇಶವನ್ನು ಮುನ್ನಡೆಸಿದ ಮಾಜಿ ಪ್ರಧಾನಿಯವರನ್ನು ಜನ್ಮ ಶತಮಾನೋತ್ಸವದಂದು ಸ್ಮರಿಸಿಕೊಂಡು ಗೌರವಿಸಿದ್ದು ಶ್ಲಾಘನೀಯ ಆದರೆ ಅವರ ಪಕ್ಷದವರ ಅವಗಣನೆ ನಿಜಕ್ಕೂ ಸಾಧುವಲ್ಲ

    ReplyDelete
Post a Comment
Maruti Suzuki Festival of Colours
Maruti Suzuki Festival of Colours
To Top