ಜೇನುಕೃಷಿ ಮಾಹಿತಿ: ಪೆಟ್ಟಿಗೆಯ ದ್ವಾರದಲ್ಲಿ ಜೇನ್ನೊಣಗಳು ಗುಂಪು ಗುಂಪಾಗಿರುವುದೇಕೆ?

Upayuktha
1 minute read
0

ಹೊಸದಾಗಿ ಜೇನುಕೃಷಿ ಪ್ರಾರಂಭಿಸಿದ ಜೇನು ಕೃಷಿಕರಿಗೆ ಕಾಡುತ್ತಿರುವ ಸಂದೇಹಗಳಲ್ಲಿ ಪೆಟ್ಟಿಗೆಯ ಹೊರಗಡೆ ಜೇನ್ನೊಣಗಳು ಗುಂಪಾಗಿ ಕುಳಿತಿರಲು ಕಾರಣವೇನು? ಎಂಬುದೂ ಒಂದು.ಸ್ಥಳದ ಅಭಾವವೇ? ಹೆಚ್ಚಿನ ಜೇನುಕೋಣೆ ಕೊಡಬೇಕೇ? ಇತ್ಯಾದಿ.

ಸಾಮಾನ್ಯವಾಗಿ ಗುಂಪಾಗಿ ವಾಸಿಸುವ ಹೆಚ್ಚಿನ ಕೀಟಗಳು ರಾತ್ರಿ ವೇಳೆ ದ್ವಾರದಲ್ಲಿ ಹೀಗೆ ಕುಳಿತಿರುವುದು ಸಹಜ.ಜೇನ್ನೊಣಗಳೂ ಕೂಡ ರಾತ್ರಿಯಲ್ಲಿ ತಮ್ಮ ಕುಟುಂಬದ ರಕ್ಷಣೆಗಾಗಿ ದ್ವಾರದಲ್ಲಿ ಗುಂಪಾಗಿ ಕುಳಿತಿರುತ್ತವೆ.ಸೆಕೆಗಾಲದಲ್ಲಿ ಇದು ಸ್ವಲ್ಪ ಹೆಚ್ಚೇ ಕಾಣಸಿಗುತ್ತದೆ.ನೊಣಗಳ ಸಂಖ್ಯೆ ಕಡಿಮೆ ಆಗುತ್ತಿದ್ದಂತೆ ಈ ರೀತಿ ಕುಳಿತಿರುವುದು ಕಡಿಮೆ.

ಈ ರೀತಿ ರಾತ್ರಿ ಮಾತ್ರ ಹೊರಗೆ ಕುಳಿತಿರುವುದು ಉತ್ತಮ ಜೇನುಕುಟುಂಬದ ಲಕ್ಷಣ. ಅದಕ್ಕಾಗಿ ಹೆಚ್ಚುವರಿ ಜೇನು ಕೋಣೆಗಳನ್ನು ಈ ಅಭಾವ ಕಾಲದಲ್ಲಿ (ಮಳೆಗಾಲದಲ್ಲಿ) ಕೊಡಬೇಕಾಗಿಲ್ಲ.ಮುಚ್ಚಳದ ಒಳಗೆ ಮೇಲ್ಭಾಗದಲ್ಲಿ ಜೇನ್ನೊಣಗಳು ಗುಂಪಾಗಿ ಅಭಾವ ಕಾಲದಲ್ಲಿ ಕುಳಿತರೂ ಜೇನು ಕೋಣೆಯನ್ನು ಕೊಡುವ ಅಗತ್ಯವಿಲ್ಲ.

ಹಗಲು ಹೊತ್ತಿನಲ್ಲೂ ಹೊರಗೆ ಗುಂಪಾಗಿ ಕುಳಿತರೆ ಆಗ ಆ ಕುಟುಂಬದಲ್ಲಿ ರಾಣಿ ಇಲ್ಲವೆಂದು ಖಚಿತವಾಗಿ ಹೇಳಬಹುದು.ರಾಣಿ ಇಲ್ಲದ ಕುಟುಂಬದ ಜೇನ್ನೊಣಗಳು ತಮ್ಮ ಹೊಟ್ಟೆಯ ಭಾಗವನ್ನು ಕುಗ್ಗಿಸಿ, ಸ್ವಲ್ಪ ಕಪ್ಪು ಬಣ್ಣಕ್ಕೆ ಬದಲಾಗುತ್ತವೆ.

ಹಾಗೇನಾದರೂ ಆದರೆ ಕೂಡಲೇ ಬೇರೆ ಪೆಟ್ಟಿಗೆಯಿಂದ ನೊಣ ರಹಿತವಾದ ಮೊಟ್ಟೆ ಮರಿ ಇರುವ ಒಂದು ಎರಿಯನ್ನು ಇದಕ್ಕೆ ಕೊಟ್ಟು ಹೊಸ ರಾಣಿ ತಯಾರಿಸಲು ಅವಕಾಶ ಮಾಡಿಕೊಡಬೇಕು.

-ಶಿರಂಕಲ್ಲು ಕೃಷ್ಣ ಭಟ್

7975159138

Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
To Top