ಭಾವನೆಗಳ ಅನಾವರಣ - ಸಾಮಾಜಿಕ ಜಾಲತಾಣ

Upayuktha
0


ಮನುಷ್ಯನ ಕೈಗೆ ಮೊಬೈಲ್ ಬಂದಾಗಿನಿಂದಲೂ ಜಗತ್ತೇ ಕೈ ಬೆರಳಲ್ಲಿ ಸಿಕ್ಕಿದಂತೂ ನಿಜ. ಆದರೆ ಯೋಚನೆಗಳೆಲ್ಲ ಎತ್ತ ಹೋದವು?


ಮನಸ್ಸು ಮಾಯಾಜಿಂಕೆ ಎನ್ನುತ್ತೇವೆ. ಒಮ್ಮೊಮ್ಮೆ ಅದು ಹೌದೆನಿಸುವುದೂ ಸಹಜ. ಏಕೆಂದರೆ ಮನುಷ್ಯ ಸಾಮಾಜಿಕ ಮಾಧ್ಯಮವೆಂಬ ಲೋಕದೊಳು ವಿಹರಿಸುತ್ತಾ ವಾಸ್ತವ ಲೋಕವನ್ನೇಕೊ ಮರೆಯುತ್ತಿದ್ದಾನೆ.


"ಭಾವನೆ" ಎಂಬ ಪದಕ್ಕೆ ಸೂಕ್ಷ್ಮವಾದ ಅರ್ಥವಿದೆ. ದೃಷ್ಠಿಕೋನಕ್ಕನುಸಾರವಾದ ವ್ಯಾಖ್ಯೆಗಳಿವೆ. ಕೆಲವರ ಮನದಲ್ಲಿ  ನೋವಿದ್ದರೂ ನಲಿವಿದ್ದರೂ ಅದು ಬೆಳಕಿಗೆ ಬರುವುದು ಮಾತ್ರ ತುಂಬಾ ಕಡಿಮೆ. ಆದರೆ ಈಗ ಹಾಗಲ್ಲ ಬಿಡಿ. ಎದ್ದು ಕೂತು ಮಲಗೋದ್ರ ಒಳಗೆ ಏನೆಲ್ಲಾ ಮಡ್ತೇವೋ ಅದೆಲ್ಲವನ್ನು ಹಂಚಿಕೊಳ್ಳೋದು ನಾವು ಮತ್ತೆ ಅದೇ ಮಾಧ್ಯಮಗಳಲ್ಲಿ. ಬೇಸರವಾದಾಗ "ಫೀಲ್ ಅಲೋನ್" ಅಂತಾನೋ, ಖುಷಿಯಾದಾಗ "ಹ್ಯಾಪಿ" ಅಂತನೋ ಹಾಕ್ಕೊಂಡು ಎಲ್ಲ ಭಾವನೇನಾ ಅದ್ರಲ್ಲೇ ವ್ಯಕ್ತಪಡಿಸ್ತಾ ಹೋಗ್ತೇವೆ.  


ಇನ್ನೂ ಕೆಲವು ವಿಶೇಷ ಸ್ಟೇಟಸ್ ಗಳಿರುತ್ತೆ ಬಿಡಿ. ಯಾರದ್ದೋ ಬೇಜಾರಿಗೆ ಅದೇನನ್ನೋ ಸ್ಟೇಟಸ್ ಹಾಕ್ತಾ ಮತ್ತ್ಯರೋ ಅದು ತನಗೆಂದು ಭಾವಿಸಿ ಯಾರ್ಯಾರೋ ಬೇಜಾರು ಮಾಡಿಕೊಳ್ಳುವಾಗ ಒಮ್ಮೆ ಅನಿಸುವುದಿಲ್ಲವೇ? ಇದ್ಯಾಕೊ ಜಾತ್ರೆಯೇನೋ ಅಂತ. ನೋಡುವಾಗ ಕ್ಲೀಷೆಯಾಗಿ ಕಾಣುವುದಂತೂ ಸತ್ಯ ಬಿಡಿ.


ಅದ್ಯಾಕೋ ಸ್ಟೇಟಸ್ ಹಾಕೋ ಗೋಜಿನಲ್ಲಿ ನಮ್ಮ ಸ್ಟೇಟಸನ್ನೇ ಮರೆತು ಹೋಗ್ತೇವೋ ಎಂಬ ಸಣ್ಣ ಭಯ ಇನ್ನೂ ಕಾಡುವುದಿಲ್ಲವೇ...ಸಾಮಾಜಿಕ ಮಾಧ್ಯಮ ಪ್ರತಿಭೆಗೆ ಉತ್ತಮ ವೇದಿಕೆಯಾಗಲಿ. ಆದರೆ ಮಿತಿಯಲ್ಲಿದ್ದರೆ ಎಲ್ಲವೂ ಚಂದ ತಾನೇ?


ಲೇಖನದ ವಿಷಯ ನೀರಸವೆನಿಸಬಹುದು. ಓದುತ್ತಾ ಹೋದಂತೆ ನೈಜತೆಯನ್ನು ತಿಳಿಸುತ್ತೆ ಎಂಬ ಭಾವ ಬಂದಲ್ಲಿ ಬರೆದ ಬರವಣಿಗೆಗೆ ಮಾತ್ರ ಸಾರ್ಥಕದ ಭಾವ. ಮಗದೊಮ್ಮೆ ಆದಷ್ಟು ಸಾಮಾಜಿಕ ಜಾಲತಾಣದಲ್ಲಿ ಭಾವನೆಯ ಅನಾವರಣ ಆಗದಿರಲಿ.

-ಅರ್ಪಿತಾ ಕುಂದರ್

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top