ವಿದ್ಯಾರ್ಥಿಗಳು- ಉದ್ಯೋಗಾರ್ಥಿಗಳಿಗೆ ಸುವರ್ಣಾವಕಾಶ: ಶ್ಲಾಘ್ಯ ಆನ್‌ಲೈನ್‌ ಲೈವ್‌ ತರಗತಿಗಳು ಜುಲೈ 15ರಿಂದ ಆರಂಭ

Upayuktha
0

ಬ್ಯಾಂಕಿಂಗ್ ಮತ್ತು ಸರಕಾರಿ ಉದ್ಯೋಗದ ಪ್ರವೇಶ ಪರೀಕ್ಷೆಗೆ ತರಬೇತಿ



ಮಂಗಳೂರು: ನಗರದ ಹೆಸರಾಂತ ತರಬೇತಿ ಸಮಸ್ಥೆ ಶ್ಲಾಘ್ಯ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ಬ್ಯಾಂಕು ಮತ್ತು ಸರಕಾರಿ ವಲಯದ ಉದ್ಯೋಗಗಳಿಗಾಗಿ ನಡೆಯುವ ಪ್ರವೇಶ ಪರೀಕ್ಷೆಗಳಿಗೆ ತರಬೇತಿಯ ಹೊಸ ಬ್ಯಾಚ್‌ಗಳು ಜುಲೈ 15ರಿಂದ (15-07-2021) ಆರಂಭವಾಗಲಿವೆ.


ತರಬೇತಿಯ ಅವಧಿ 6 ತಿಂಗಳುಗಳಾಗಿದ್ದು, ಸೋಮವಾರದಿಂದ ಶನಿವಾರದ ವರೆಗೆ ಪ್ರತಿದಿನ ಬೆಳಗ್ಗೆ 10ರಿಂದ 11ರ ವರೆಗೆ ನಡೆಯುತ್ತವೆ. ತರಬೇತಿಯ ಮಾಸಿಕ ಶುಲ್ಕ ಕೇವಲ 1,500 ರೂ.ಗಳೆಂದು ಪ್ರಕಟಣೆ ತಿಳಿಸಿದೆ.


ತರಬೇತಿಯ ವೈಶಿಷ್ಟ್ಯಗಳು:

ಸಮಗ್ರ, ಫಲಿತಾಂಶ ಕೇಂದ್ರಿತ, ನುರಿತ ಶಿಕ್ಷಕರು, ಹಿಂದಿನ ವರ್ಷಗಳ ಪ್ರವೇಶ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳ ಮೇಲೆ ಸಾಕಷ್ಟು ಸಂಶೋಧನೆ ನಡೆಸಿ ಸಿದ್ಧಪಡಿಸಿದ ಕಲಿಕಾ ಸಾಮಗ್ರಿಗಳು.


ವಾರಕ್ಕೊಂದು ಪ್ರಚಲಿತ ವಿಷಯಗಳ ಬಗ್ಗೆ ರೆಕಾರ್ಡ್ ಮಾಡಿದ ತರಗತಿ ಪಾಠ. ಇದು ತರಬೇತಿ ಮುಗಿಸಿದ ಒಂದು ವರ್ಷದ ವರೆಗೂ ಲಭ್ಯವಿರುತ್ತದೆ.


ಸಂದೇಹ ನಿವಾರಣೆ ತರಗತಿಗಳು, ಸಂದರ್ಶನಗಳನ್ನು ಎದುರಿಸಲು ಅಗತ್ಯ ಪೂರ್ವ ತಯಾರಿಗೆ ಸಲಹೆಗಳು.


ನೋಂದಣಿಗಾಗಿ:  www.shlaghya.in ಗೆ ಲಾಗಿನ್ ಆಗಿ.


ಈ ತರಬೇತಿಯನ್ನು ಪೂರ್ಣಗೊಳಿಸಿದ ಬಳಿಕ- ಐಬಿಪಿಎಸ್‌ (ಕ್ಲೆರಿಕಲ್ ಮತ್ತು ಪಿಓ), ಎಲ್‌ಐಸಿ, ಎಸ್‌ಎಸ್‌ಸಿ, ಎಂಬಿಎ ಪ್ರವೇಶ- ಎಂಎಟಿ ಮತ್ತು ಪಿಜಿಸಿಇಟಿ ಪರೀಕ್ಷೆಗಳಿಗೆ ಸುಲಭವಾಗಿ ಬರೆಯಬಹುದಾಗಿದೆ.


ಯಾವುದೇ ರಾಜ್ಯಗಳ/ ಕೇಂದ್ರ ಸರಕಾರದ ಆಪ್ಟಿಟ್ಯೂಡ್‌ ಪರೀಕ್ಷೆಗಳು ಮತ್ತು ಕ್ಯಾಂಪಸ್ ರಿಕ್ರೂಟ್‌ಮೆಂಟ್‌ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಬಹುದು.


ಯುಪಿಎಸ್‌ಸಿ, ಕೆಪಿಎಸ್‌ಸಿ, ಇಂಟೆಲಿಜೆನ್ಸ್ ಬ್ಯೂರೋದಂತಹ ರಾಜ್ಯ ಮತ್ತು ಕೇಂದ್ರ ಸರಕಾರಿ ಪರೀಕ್ಷೆಗಳನ್ನು ಬರೆಯಲು ನೆರವಾಗುತ್ತದೆ.


ಹೆಚ್ಚಿನ ಮಾಹಿತಿಗಾಗಿ ಈ ವಿಳಾಸವನ್ನು ಸಂಪರ್ಕಿಸಬಹುದಾಗಿದೆ:


Shlaghya Training Institute

KSSM Complex, Bondel, Mangaluru.

7349327494 

9448854094

9481916781

******

ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಿಗಾಗಿ (ಆರ್‌ಆರ್‌ಬಿ) ಐಬಿಪಿಎಸ್‌ ನೇಮಕಾತಿ -2021 ಶೀಘ್ರವೇ ನಡೆಯಲಿದೆ. ಆಫೀಸರ್‌ಗಳು (ಸ್ಕೇಲ್‌- 1, 2 ಮತ್ತು 3) ಹಾಗೂ ಆಫೀಸ್‌ ಅಸಿಸ್ಟೆಂಟ್‌ ಹುದ್ದೆಗಳಿಗಾಗಿ ಈ ನೇಮಕಾತಿ ನಡೆಯಲಿದೆ.


ಅಭ್ಯರ್ಥಿಗಳು ಪದವಿ ವಿದ್ಯಾರ್ಹತೆ ಹೊಂದಿರಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನ: 28-06-2021.

ಆನ್‌ಲೈನ್‌ ಪರೀಕ್ಷೆಗಳು ಆಗಸ್ಟ್‌ ಮತ್ತು ಸೆಪ್ಟೆಂಬರ್/ ಅಕ್ಟೋಬರ್‌ನಲ್ಲಿ ನಡೆಯುವ ನಿರೀಕ್ಷೆಯಿದೆ.


ಅಧಿಸೂಚನೆ ವಿವರಗಳಿಗಾಗಿ https://www.ibps.in/wp-content/uploads/Advt-_CRP-RRB-X_final_1912.pdf ನೋಡಬಹುದು.


ಅರ್ಜಿಗಳು ಮತ್ತು ವಿವರಗಳಿಗಾಗಿ ಐಬಿಪಿಎಸ್ ವೆಬ್‌ಸೈಟ್‌  www.ibps.in ಗೆ ಭೇಟಿ ನೀಡಬಹುದಾಗಿದೆ.


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top