ರಾತ್ರಿ ಅದೇನೋ ಸಂಭ್ರಮ. ಅಕ್ಕ-ತಮ್ಮ ಅದೇನೋ ಗ್ರೀಟಿಂಗ್ಸ್ ಮಾಡುತ್ತಿದ್ದರು. ಆಕೆ ಅಪ್ಪನ ಪೆನ್ಸಿಲ್ ಸ್ಕೆಚ್ ಬಿಡಿಸಿದ್ದಳು. ಅಪ್ಪನ ಮುಖ ಕಣ್ಣು ಮೂಗು, ಬಂದರೂ ಅವರ ಕಾಲು ಸರಿಯಾಗಿ ಬಂದಿರಲಿಲ್ಲ. ಅದೆಷ್ಟೋ ಬಾರಿ ರಬ್ಬರ್ ಉಪಯೋಗಿಸಿದ್ದಳು ಅಪ್ಪನ ರೂಪ ತರಲು. ಕೊನೆಗೂ ಬಂದಿತ್ತು ರೂಪ. ತಮ್ಮನೂ ಅದೆಷ್ಟೋ ರಸ್ತೆ ಗದ್ದೆ ಓಡಾಡಿ ಕಪ್ಪೆ ಚಿಪ್ಪು, ದುಂಡಗಿನ ಕಲ್ಲು ತಂದು ಅಂಟಿಸಿ ಗ್ರೀಟಿಂಗ್ ತಯಾರು ಮಾಡಿದ್ದರು. ಬೆಳಿಗ್ಗೆ ಬೇಗ ಎಬ್ಬಿಸುವಂತೆ ಅಮ್ಮನಲ್ಲಿ ಹೇಳಿ ಮಲಗಿದ್ದರು.
ಬೆಳಿಗ್ಗೆ ಅಪ್ಪನಿಗೆ ಸರ್ಪ್ರೈಜ್ ಕೊಡುವ ಕುತೂಹಲ. ಬೆಳಿಗ್ಗೆ ಅಮ್ಮ ಎಬ್ಬಿಸಿದ್ದಲ್ಲ ಜೋರಾಗಿ ಅಳುತ್ತಿದ್ದಳು. ಮನೆಯೆಲ್ಲ ಜನ, ಮಕ್ಕಳು ಓಡೋಡಿ ಹಾಲ್‌ಗೆ ಬಂದರೆ ಅಲ್ಲಿ ಅಪ್ಪನ ದೇಹ ನೇತಾಡುತಿತ್ತು. ಸಾಲ ಬಾಧೆ ತಾಳಲಾಗದೆ ಅಪ್ಪ ನೇಣಿಗೆ ಶರಣಾಗಿದ್ದ. ಮಕ್ಕಳ ಫಾದರ್ಸ್ ಡೇ ಗಿಫ್ಟ್ ನೆಲದಲ್ಲಿತ್ತು. ಇಬ್ಬರು ಮೌನಕ್ಕೆ ಶರಣಾಗಿದ್ದರು ಅಪ್ಪನ ಕಾಲನ್ನೇ ವೀಕ್ಷಿಸುತ್ತಿದ್ದಳು. ಮುದ್ದಿನ ಮಗಳ ಸರ್ಪ್ರೈಜ್ ನೋಡುವ ಯೋಗ ಇರಲಿಲ್ಲ ಈ ಅಪ್ಪನಿಗೆ.
ಇದು ಕತೆ ಅಲ್ಲ ಜೀವನ. ನಿಜ ಜೀವನದ ದಾರುಣ ಕತೆ. ಆ ಕುಟುಂಬ ಇಂದು ಕಷ್ಟ ಪಡುತ್ತಿದೆ. ತಂದೆ ಯಕ್ಷಗಾನ ಕಲಾವಿದನಾಗಿದ್ದ. ಇಂದು ತಾಯಿ ಬಟ್ಟೆ ಹೊಲಿಯುತ್ತಿದ್ದಾಳೆ, ಫೆನೈಲ್ ಮಾಡಿ ಮಾರುತಿದ್ದಾಳೆ, ಹತ್ತಿಯ ಬತ್ತಿ ಮಾಡುತ್ತ 2 ಮಕ್ಕಳನ್ನು ಸಾಕುತ್ತಿದ್ದಾಳೆ. ಗಂಡ ತೀರಿ ವರ್ಷ ಒಂದು ಆಗಿದೆ.
-ಡಾ. ಶಶಿಕಿರಣ್ ಶೆಟ್ಟಿ, ಉಡುಪಿ
ಹೋಂ ಡಾಕ್ಟರ್ ಫೌಂಡೇಶನ್
9945130630
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ