ಸವಿರುಚಿ: ಮರಗೆಣಸಿನ ಹಪ್ಪಳ

Upayuktha
0

 



ಬೇಕಾಗುವ ವಸ್ತುಗಳು:

2 ಸೇರಿನಷ್ಟು ಮರಗೆಣಸಿನ ಹೋಳು. 1 ಕಪ್ ಸಾಬಕ್ಕಿ, 3-6 ಕೆಂಪು ಮೆಣಸು, ಕಡಲೆಗಾತ್ರದ ಇಂಗು, 2-3 ಚಮಚ ಉಪ್ಪು.

ವಿಧಾನ:

ಸಾಬಕ್ಕಿಯನ್ನು ಹಿಂದಿನ ದಿನವೇ ತೊಳೆದು 3 ಕಪ್ ನೀರು ಹಾಕಿ ನೆನೆಹಾಕಿ.

ಮರಗೆಣಸಿನ ಸಿಪ್ಪೆ ತೆಗೆದು ಸಣ್ಕಗೆ, ತೆಳ್ಳಗೆ ಕೆತ್ತಿಕೊಳ್ಳಿ.

ಇದನ್ನು ಅಗತ್ಯವಿರುವಷ್ಟು ನೀರು ಹಾಕಿ ನುಣ್ಣಗೆ ರುಬ್ಬಿ ಕಣ್ಣು ಪಾತ್ರೆಗೆ ಹಾಕಿ ಸೋಸಿ. ನುಣ್ಣಗಾಗದ ತುಂಡುಗಳನ್ನು ಮತ್ತೆ ರುಬ್ಬಿ ಮತ್ತೆ ಸೋಸಿ. ಈ ಹಿಟ್ಟನ್ನು ಒಂದು ಗಂಟೆ ಮುಚ್ಚಿಡಿ.


ಸಾಬಕ್ಕಿಯನ್ನು ಮೆಣಸು, ಇಂಗು ಹಾಕಿ ಅಗತ್ಯ ವಿರುವಷ್ಟು ನೀರು ಹಾಕಿ ರುಬ್ಬಿ ಒಂದು ಬಾಣಲೆಗೆ ಹಾಕಿ. ರುಬ್ಬಿದ ಮರಗೆಣಸಿನ ಹಿಟ್ಟಿನ ಮೇಲ್ಭಾಗದ ನೀರು ಬಸಿದು ತಳದ ಹಿಟ್ಟನ್ನು ಕದಡಿ ಬಾಣಲೆಗೆ ಸೇರಿಸಿ ಮಿಶ್ರ ಮಾಡಿ.ಉಪ್ಪು ಹಾಕಿ ಈ ಮಿಶ್ರಣವನ್ನು ಒಲೆಯಮೇಲಿಟ್ಟು ಕಾಯಿಸಿ. ತಳ ಹಿಡಿಯದಂತೆ ಮಗುಚುತ್ತಿರಬೇಕು. ಹಿಟ್ಟು ಬೆಂದು ಕೈಗೆ ಅಂಟದಂತಾದಾಗ ಹಿಟ್ಟನ್ನು ಬೇರೆ ತಟ್ಟೆಗೆ ಹಾಕಿ ಸ್ವಲ್ಪ ಆರಲು ಬಿಡಿ.


ಕೈಗೆ ಸ್ವಲ್ಪ ಎಣ್ಣೆ ಪಸೆ ಮಾಡಿ ಚಿಕ್ಕ ನಿಂಬೆ ಗಾತ್ರದ ಹಿಟ್ಟನ್ನು ಒಂದು ತಟ್ಟೆಯಲ್ಲಿ ಅಥವಾ ಪ್ಲಾಸ್ಟಿಕ್ ಶೀಟಲ್ಲಿ ಸಾಲಾಗಿ ಇಡಿ. ಅನಂತರ ಎಣ್ಣೆ ಪಸೆ ಹಚ್ಚಿದ ಎರಡು ಪ್ಲಾಸ್ಟಿಕ್ ಹಾಳೆಯ ನಡುವೆ ಇಟ್ಟು ಸ್ವಲ್ಪವೇ ಒತ್ತಿ. (ಹಿಟ್ಟು ಮೃದುವಾಗಿರುತ್ತದೆ).


ಹಪ್ಪಳವನ್ನು ಚಾಪೆ, ಅಥವಾ ಶುಭ್ರವಾದ ಅಕ್ಕಿಗೋಣಿ ಇತ್ಯಾದಿಗಳ ಮೇಲೆ ಹಾಕಿ ಚೆನ್ನಾಗಿ 3-4 ದಿನ ಒಣಗಿಸಿ. ಹದವಾಗಿ ಕಾದ ಎಣ್ಣೆಯಲ್ಲಿ ಕರಿಯಿರಿ. ಹಪ್ಪಳ ದೊಡ್ಡದಾಗಿ ಅರಳುತ್ತದೆ. ಮೃದುವಾದ ಬಾಯಲ್ಲಿ ಕರಗುವ ಹಪ್ಪಳ ಬಲು ರುಚಿಯಾಗುತ್ತದೆ. ಈ ಅಳತೆಯಲ್ಲಿ 80-100 ಹಪ್ಪಳ ತಯಾರಾಗುತ್ತದೆ.

-ಸವಿತಾ ಅಡ್ವಾಯಿ

Key Words: cassava, Tapioka, Maragenasu, ಮರಗೆಣಸು, ಹಪ್ಪಳ

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top