|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 'ಕಾವ್ಯ ಪ್ರತಿಭಟನೆಯ ಮೂಲಕ ಸಮಾಜ ತಿದ್ದಿದ ಸಿದ್ದಲಿಂಗಯ್ಯ'

'ಕಾವ್ಯ ಪ್ರತಿಭಟನೆಯ ಮೂಲಕ ಸಮಾಜ ತಿದ್ದಿದ ಸಿದ್ದಲಿಂಗಯ್ಯ'

ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಅಭಿಮತ


ಮಂಗಳೂರು: ದಲಿತ ಕವಿ ಡಾ. ಸಿದ್ದಲಿಂಗಯ್ಯನವರು ತಮ್ಮ ಕಾವ್ಯದಲ್ಲಿ ಪ್ರತಿಭಟನೆಯ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದರು, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಅಭಿಪ್ರಾಯಪಟ್ಟರು.  

ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದ ಎದುರು ಡಾ. ಡಾ. ಸಿದ್ದಲಿಂಗಯ್ಯನವರ ಸ್ಮರಣಾರ್ಥ ಶನಿವಾರ ಏರ್ಪಡಿಸಲಾಗಿದ್ದ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕವಿ ಅನ್ಯಾಯ, ಅಸಮಾನತೆಗಳ ವಿರುದ್ಧ ಹೋರಾಟವನ್ನು ತಮ್ಮ ಕಾವ್ಯದ ಮೂಲಕ ಚಿತ್ರಿಸಿದರು, ಎಂದರು. 


ಕನ್ನಡ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ. ಸೋಮಣ್ಣ ಮಾತನಾಡಿ, ಸಿದ್ದಲಿಂಗಯ್ಯನವರ ʼಹೊಲೆಮಾದಿಗರ ಹಾಡುʼ, ʼಗ್ರಾಮದೇವತೆಗಳುʼ, ʼನೆಲಸಮ-ಪಂಚಮʼ ಮೊದಲಾದ ಕೃತಿಗಳ ಕೇಂದ್ರ ಅನುಭವ ದಲಿತ ಲೋಕವೇ ಆಗಿದ್ದರೂ, ಅವರು ರೂಪಿಸಿದ ಸಂವೇದನೆ ಜಾತಿ, ಲಿಂಗ, ಧರ್ಮ ಮತ್ತು ಪ್ರಾದೇಶಿಕತೆಗಳನ್ನು ಮೀರಿ ನಿಂತಿದೆ, ಎಂದರಲ್ಲದೆ ಕವಿಯ ಸಾಧನೆ, ಬಹುಮುಖ ವ್ಯಕ್ತಿತ್ವವನ್ನು ಕೊಂಡಾಡಿದರು.  

ಸಹಾಯಕ ಪ್ರಾಧ್ಯಾಪಕ, ವಸತಿ ನಿಲಯದ ಪಾಲಕ ಡಾ. ಬಿ ಎಂ ಗೋವಿಂದರಾಜು ಮೊದಲಾದವರು ಉಪಸ್ಥಿತರಿದ್ದರು. ಗಣ್ಯರು ಅಗಲಿದ ಕವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯುವ ಮೂಲಕ ಗೌರವ ಸಲ್ಲಿಸಿದರು. ವಿಶ್ವವಿದ್ಯಾನಿಲಯದ ಛಾಯಾಗ್ರಾಹಕ ಚಂದ್ರಶೇಖರ ಎಂ ಬಿ ಕವನ ವಾಚನದ ಮೂಲಕ ಶ್ರದ್ದಾಂಜಲಿ ಸಮರ್ಪಿಸಿದರು. ಕನ್ನಡ ವಿಭಾಗದ ಸಂಶೋಧನಾರ್ಥಿ ರಾಜೇಶ್‌ ಕಾರ್ಯಕ್ರಮ ನಿರೂಪಿಸಿದರು.


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ



0 Comments

Post a Comment

Post a Comment (0)

Previous Post Next Post