ರಮೇಶ ಉಡುಪ: 45 ವರ್ಷ @ ನವಕರ್ನಾಟಕ!

Upayuktha
0

 


ತಾಳ್ಮೆ, ಸಂಯಮ ಮತ್ತು ಸರಳತೆಗಳು ಮುಪ್ಪುರಿಗೊಂಡ ವ್ಯಕ್ತಿತ್ವ ಉಡುಪ ಅವರದು. ಇವು ಎಲ್ಲ ಪ್ರಕಾಶಕರಲ್ಲೂ ಅಗತ್ಯವಾಗಿ ಇರಬೇಕಾದ ಗುಣಗಳು. ಇದರಿಂದಾಗಿಯೇ ಉಡುಪರು ಉದ್ದಿಮೆಯೇ ಅಲ್ಲದ ಈ ಪುಸ್ತಕೋದ್ಯಮದಲ್ಲಿ 45 ವರ್ಷಗಳ ಕಾಲ ಉಳಿಯುವಂತಾಯಿತು!  


ನನಗೆ ಉಡುಪರು ಸದಾ ವಿಸ್ಮಯ. ಅವರು ಈಗಲೂ ನನಗೆ 45ರ ವಯೋಮಾನದವರಂತೆಯೇ ಕಾಣುತ್ತಾರೆ. ಅವರನ್ನು ಕಳೆದ 30 ವರ್ಷಗಳಿಂದ ಬಲ್ಲೆ. ಅವರದು ಮಾಗಿದ ವ್ಯಕ್ತಿತ್ವ. ಆದರೆ ತೂಕದ ವ್ಯಕ್ತಿತ್ವವಲ್ಲ! ತೂಗಿದರೆ ಹಿಂದೆ ಎಷ್ಟಿದ್ದರೋ ಅಷ್ಟೇ! 45 ಕೆಜಿಯಷ್ಟೇ. ಹಾಗಾಗಿ ಸುಲಭವಾಗಿ ತೂರಿಬಿಡುವಷ್ಟು ಸಪೂರ. ನಿಗರ್ವಿ. ಮೆದುಮಾತಿನ, ಮೃದುಹೃದಯಿ. 45 ವರ್ಷವೆಂದರೆ ಅಷ್ಟಿಷ್ಟಲ್ಲ. ಸರಿಯಾಗಿ ಒಂದೂವರೆ ತಲೆಮಾರು! ಒಂದೇ ಸಂಸ್ಥೆಯಲ್ಲಿ ಉಳಿದರು. ನವಕರ್ನಾಟಕಕ್ಕೇ ಅಂಕಿತವಾದರು. ಅದೇ ಅವರ ಸ್ವಪ್ನಸೌಧ. ಅಲ್ಲೇ ಕಾರ್ಯನಿರತ. ಅವರ ನಿಷ್ಠೆ, ನಿಯ್ಯತ್ತು ಅದಕ್ಕೇ ಮೀಸಲು. ಇಷ್ಟಾದರೂ  ಉಡುಪರು ಹತ್ತು ಜನ ಸೇರಿದಾಗ ಎದ್ದುಕಾಣಲು ತಿಣಕಾಡುವವರಲ್ಲ. ಅವರದು ಗಂಭೀರ ಉಪಸ್ಥಿತಿ. ಅವರು ಪ್ರಕಾಶನೋದ್ಯಮದ ಘನತೆಯನ್ನು ಹೆಚ್ಚಿಸಿದ್ದಾರೆ. ರಮೇಶ ಉಡುಪರು ಕನ್ನಡ ಪುಸ್ತಕೋದ್ಯಮದ ಅಧಿಕೃತ ವಕ್ತೃ. ಹತ್ತಿರ, ಹತ್ತಿರ ಅರ್ಧಶತಮಾನದ ಸಾಕ್ಷಿಪ್ರಜ್ಞೆ.  


ವೈಚಾರಿಕತೆಗೆ ಇಂಬುಕೊಟ್ಟಿದ್ದು ನವಕರ್ನಾಟಕ. ಕನ್ನಡಿಗರ ಅಭಿರುಚಿಯನ್ನು ಎತ್ತರಿಸಿ, ಬಿತ್ತರಿಸಿದ್ದು  ಅದರ ವೈಶಿಷ್ಟ್ಯ. ಶಾಖೋಪಶಾಖೆಗಳನ್ನು ತೆಗೆದಿದ್ದು, ಪುಸ್ತಕ ಪ್ರದರ್ಶನಗಳನ್ನು ವ್ಯವಸ್ಥೆಗೊಳಿಸಿದ್ದು ಅದರ ಹೆಗ್ಗಳಿಕೆ. ಜನರು ಇರುವೆಡೆಗೆ ತೆರಳಿ ಅವರಿಗೆ ಪುಸ್ತಕ ಬಾಗಿನ ನೀಡಿದ ಸಂಸ್ಥೆ. ಇದೀಗ ಅಂತಹ ಪ್ರತಿಷ್ಠಿತ ಸಂಸ್ಥೆಯ ಸಾರಥ್ಯ ಉಡುಪರದು.  


ಅದರ ಸಾಧನೆಯಲ್ಲಿ ಉಡುಪರ ಪಾತ್ರ ಗಮನಾರ್ಹವಾದುದು; ಗಣನೀಯವಾದುದು. ಅವರಿಗೆ ನಾಡು ಉಪಕೃತವಾಗಿದೆ. ಅಭಿವಂದನೆಗಳು ಸರ್.


- ಕೆ. ರಾಜಕುಮಾರ್

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top