ಕವನ: ಕಾಮನಬಿಲ್ಲು

Upayuktha
0


 ಅಂಬರದ ತುಂಬಾ 

ನೀ ಬಂದು ನಗುವಾಗ 

ಭುವಿಯಲ್ಲಿ ನವಿಲಂತೆ

ನರ್ತಿಸುವ ಆಸೆ ನನಗೆ... 


ಆ ನಿನ್ನ ಬಣ್ಣ 

ಈ ನನ್ನ ಕಣ್ಣ 

ಕನಸುಗಳಿಗೆ ರೆಕ್ಕೆಯನ್ನೇ

ಉಡುಗೊರೆಯ ನೀಡಿತಲ್ಲ... 


ಕ್ಷಿತಿಜದ ತುಂಬಾ 

ನೀ ಬಂದು ನೋಡುವಾಗ 

ಧರೆಯಲ್ಲಿ ಕೋಗಿಲೆಯಂತೆ 

ಹಾಡುವ ಆಸೆ ನನಗೆ... 


ಆ ನಿನ್ನ ಮೆರುಗು 

ಈ ನನ್ನ ಬೆರಗು 

ಪದಗಳಿಗೆ ಪದಗಳನ್ನೇ 

ಪೋಣಿಸಿ ಕವನವಾಯಿತಲ್ಲ... 


ಪ್ರಕೃತಿಯ ಅಚ್ಚರಿಯಲ್ಲಿ 

ಕೈಗೆಟುಕದೆ ನಿಂತಲ್ಲೇ 

ಬಾಗಿ ಬೀಗಿ ಬಳುಕುವ 

ನಿನ್ನ ಸುಂದರ ಬಿಗುಮಾನ.. 


ನೀಲ ಗಗನದ ತುಂಬಾ 

ಏಳು ಬಣ್ಣಗಳ ಬಿಂಬ 

ನನ್ನ ಕಣ್ಣ ಕೌತುಕಗಳಿಗೆ 

ನಿನ್ನ ಪ್ರೀತಿಯ ಬಹುಮಾನ.. 


ಏನೆಂದು ಹೆಸರಿಡಲಿ 

ನಿನ್ನ ಮುಗುಳುನಗೆಗೆ !

ನಗುವ ಕಾಮನಬಿಲ್ಲು 

ಎಂದರಷ್ಟೇ ಸಾಲದಲ್ಲ !!


ನೀನೊಂದು ಅದ್ಭುತ !

ನೀನೊಂದು ಕೌತುಕ !

ನೀನನ್ನ ಕವಿಮನದ 

ಚೆಲುವ ಭಾವನೆಗಳ 

ಸಪ್ತವರ್ಣದ ದ್ಯೋತಕ !!!


-ಅದಿತಿ ಆರ್. ದೇಶಪಾಂಡೆ

"8" ನೇ ತರಗತಿ 

ನ್ಯಾಷನಲ್ ಪಬ್ಲಿಕ್ ಸ್ಕೂಲ್ 

ಬನಶಂಕರಿ, ಬೆಂಗಳೂರು.


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ



Tags

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top