ಮಂಗಳೂರು: ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಅಧಿನಿಯಮದಡಿ ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟಿರುವ ಎಲ್ಲಾ ಕಾಲೇಜು/ವಿದ್ಯಾಸಂಸ್ಥೆಗಳಿಂದ ಶೈಕ್ಷಣಿಕ ವರ್ಷ 2021-22 ನೇ ಸಾಲಿಗೆ ಶಾಶ್ವತ/ಮುಂದುವರಿಕೆ/ವಿಸ್ತರಣಾ ಮತ್ತು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿರುವ ಆಸಕ್ತ ಸಂಸ್ಥೆಗಳಿಂದ ಹೊಸ ಸಂಯೋಜನೆ ಕುರಿತಂತೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಗಳನ್ನು www.onlineaffiliation.karnataka.gov.on ಪೋರ್ಟಲ್ ಮುಖಾಂತರ ಜುಲೈ 08, 2021 ರ ಒಳಗಾಗಿ ಸಲ್ಲಿಸಬಹುದು. ಅರ್ಜಿಶುಲ್ಕ ರೂ.1000 ಪಾವತಿಸಿ (ಡಿಡಿ/ಚಲನ್/ಆರ್‌ಟಿಜಿಎಸ್) ಅರ್ಜಿಗಳ ಪ್ರತಿಯನ್ನು ಕುಲಸಚಿವರ ಕಛೇರಿಗೆ ಸಲ್ಲಿಸಲು ಸೂಚಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ವಿಶ್ವವಿದ್ಯಾನಿಲಯದ ವೆಬ್‌ಸೈಟ್- www.mangaloreuniversity.ac.in ಗೆ ಭೇಟಿ ನೀಡಬಹುದು, ಎಂದು ಕುಲಸಚಿವರ ಪ್ರಕಟಣೆ ತಿಳಿಸಿದೆ.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ